ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ ಭೇಟಿ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದೆ. ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣ, ದೇಗುಲ ದರ್ಶನ, ಬೆಳೆ ಸಂಶೋಧನಾ ಸಂಸ್ಥೆ ಭೇಟಿ ಸೇರಿದಂತೆ ಹಲವು ಕಾರ್ಯಕ್ರಮಗಳಲಿ ಮೋದಿ ಬ್ಯುಸಿಯಾಗಿದ್ದರು. ಇದರಲ್ಲಿ ಅಂತರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ(ICRISAT) ಕೇಂದ್ರ ಉದ್ಘಾಟನೆ ಬಳಿಕ ಫಾರ್ಮ್ ತೆರಳಿ ಕಡಲೆ ಕಾಯಿ ಕೊಯ್ದು ರುಚಿ ನೋಡಿದ್ದಾರೆ.
ICRISAT ಕಾರ್ಯಕ್ರಮ ಮುಗಿಸಿ ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣ ಹಾಗೂ ದೇಗುಲ ದರ್ಶನಕ್ಕೆ ತೆರಳುವ ವೇಳೆ ಮೋದಿ ದಿಢೀರ್ ICRISAT ಫಾರ್ಮ್‌ಗೆ ಭೇಟಿ ನೀಡಿದರು. ಈ ವೇಳೆ ಫಾರ್ಮ್‌ನಲ್ಲಿದ್ದ ವಿವಿದ ಬೆಳೆಗಳ ಮಾಹಿತಿ ಪಡೆದುಕೊಂಡರು. ಇಷ್ಟೇ ಅಲ್ಲ ಬೆಳೆದಿದ್ದ ಕಡಲೆ ಬೀಜ ಕೊಯ್ದು ರುಚಿ ನೋಡಿ ಸಂತಸ ಹಂಚಿಕೊಂಡರು.
ICRISAT ಫಾರ್ಮ್‌ಗೆ ಭೇಟಿ ನೀಡಿ ಅಲ್ಲಿನ ಆಧುನಿಕ ಬೆಳೆಗಳ ವಿಧಾನ ದೇಶದ ರೈತರ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಟ್ವಿಟರ್ ಮೂಲಕ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ರಾಗಿ, ಜೋಳ ಸೇರಿದಂತೆ ಇತರ ಬೆಳೆಗಳ ಪರಿಶೀಲನೆ ನಡೆಸಿದ್ದಾರೆ
ಫಾರ್ಮ್ ಭೇಟಿಗೂ ಮೊದಲು ಮೋದಿ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ(ICRISAT ) ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಸಸ್ಯ ಸಂರಕ್ಷಣೆ ಹವಾಮಾನ ಬದಲಾವಣೆ ಸಂಶೋಧನಾ ಕೇಂದ್ರ ಹಾಗೂ ಜನರೇಷನ್ ಅಡ್ವಾನ್ಸ್‌ಮೆಂಟ್ ಕೇಂದ್ರವನ್ನು ಮೋದಿ ಉದ್ಘಾಟಿಸಿದ್ದರು.
ICRISAT ವಿಶೇಷ ಲೋಗೋ, ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಸಮಾರಂಭವನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ಬೆಳೆಗಳ ಸಂಶೋಧನೆ, ಅಧುನಿಕರಣ ಹಾಗೂ ಬದಲಾಗುತ್ತಿರುವ ಹವಾಮಾನ ಹಾಗೂ ಬೆಳೆ ಕುರಿತು ICRISATಗೆ 5 ದಶಕಗಳ ಅನುಭವಿದೆ ಎಂದರು.
ಹವಾಮಾನ ಬದಲಾವಣೆ ಸದ್ಯ ರೈತರ ಮುಂದಿರುವ ಪ್ರಮುಕ ಸವಾಲಾಗಿದೆ. ಭಾರತದಲ್ಲಿರುವ ಶೇಕಡಾ 80 ರಷ್ಟು ಸಣ್ಣ ರೈತರನ್ನು ಮತ್ತಷ್ಟು ಸದೃಢಗೊಳಿಸಬೇಕಿದೆ. ಇದಕ್ಕಾಗಿ ICRISAT ಸಂಶೋಧನೆಗಳು, ಹವಾಮಾನ ಬದಲಾವಣೆ ಕುರಿತು ಸಂಶೋಧನೆಗಳು ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ICRISAT ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕೃಷಿ ಕ್ಷೇತ್ರದಲ್ಲಿ ನೆರವು ನೀಡಿದೆ. ICRISAT ಸಂಶೋಧನೆಗಳು ರೈತರ ಕೆಲಸವನ್ನು ಸುಲಭವಾಗಿಸಿದೆ. ಬದಲಾಗುತ್ತಿರುವ ಭಾರತ ಡಿಜಿಟಲ್ ಕೃಷಿಗೆ ಹೆಚ್ಚಿನ ಒತ್ತು ನೀಡಿದೆ. ಕೃಷಿಯನ್ನು ಆಧುನಿಕರಣಗೊಳಿಸುವುದರ ಜೊತೆಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಡಿ ತರಬೇಕಿದೆ. ಇದಕ್ಕೆ ICRISAT ಸಂಸ್ಥೆಯ ಸಂಶೋಧನೆಗಳು ಪೂರಕವಾಗಿದೆ ಎಂದರು.
ಈ ಬಾರಿಯ ಕೇಂದ್ರ ಬಜೆಟ್ ನೈಸರ್ಗಿಕ ಕೃಷಿ ಹಾಗೂ ಡಿಜಿಟಲ್ ಕೃಷಿಗೆ ಒತ್ತು ನೀಡಿದೆ. ಈ ಮೂಲಕ ದೇಶದ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂತ್ರ ಸಿದ್ಧಪಡಿಸಿದೆ ಎಂದು ನರೇಂದ್ರ ಮೋದಿ ಹೇಳಿದರು.