Statue Of Equality ಶ್ರೀರಾಮಾನುಜಾಚಾರ್ಯ ಪ್ರತಿಮೆ ಅನಾವರಣ, ಪೂಜಾ ಕೈಂಕರ್ಯ, ಪ್ರಧಾನಿ ಮೋದಿ ಹೈದರಾಬಾದ್ ಭೇಟಿಯ ವಿಶೇಷ ಕ್ಷಣ!

First Published | Feb 5, 2022, 11:39 PM IST
  • ಶ್ರೀರಾಮಾನುಜಾಚಾರ್ಯ 1,000ನೇ ಜನ್ಮ ವರ್ಷಾಚರಣೆಯಲ್ಲಿ ಮೋದಿ ಭಾಗಿ
  • ಸಮಾನತೆಯ ಪ್ರತೀಕ ರಾಮಾನುಜಂ ಪ್ರತಿಮೆ ಅನಾವರಣ
  • 108 ದಿವ್ಯ ದೇಶಂಗ ಮರುಸ್ಥಾಪನೆ, ಪೂಜಾ ಕೈಂಕರ್ಯ ಸೇರಿ ಮೋದಿ ಭೇಟಿಯ ಕ್ಷಣ
     

ವಿಶ್ವಕ್ಕೆ ಶಾಂತಿ, ಸಮಾನತೆ, ಸಹಬಾಳ್ವೆ ಸಂದೇಶ ಸಾರಿದ ಭಾರತದ ಗತ ವೈಭವ ಮತ್ತೆ ಮರುಕಳಿಸುತ್ತಿದೆ. ಭಾರತದ ಪರಂಪರೆಯ ಸಾರವನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಹಲವು ಪ್ರಯತ್ನಗಳು ನಡೆಯುತ್ತಿದೆ. ಇದರಲ್ಲಿ ಸಮಾನತೆಯನ್ನು ಪ್ರತಿಷ್ಠಾಪಿಸಲು ಜಾತಿ ವ್ಯವಸ್ಥೆಯನ್ನು ತೊಡೆದು ವಿಶ್ವಕ್ಕೆ ಜ್ಞಾನದಿಂದ ದೀಪ ಬೆಳಗಿಸಿದ ಶ್ರೀರಾಮಾನುಜಾಚಾರ್ಯ ಅವರ ಪ್ರತಿಮೆಯನ್ನು ಮೋದಿ ಅನಾವರಣ ಮಾಡಿದ್ದಾರೆ.

ಹೈದರಾಬಾದ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ 11ನೇ ಶತಮಾನದ ಸಂತ ಶ್ರೀರಾಮಾನುಜಾಚಾರ್ಯ ಅವರ 1,000ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಡೆಯುತ್ತಿರುವ ಶ್ರೀರಾಮಾನುಜಾಚಾರ್ಯ ಸಹಸ್ರಾಬ್ದಿ ಸಮಾರೋಹಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 12 ದಿನಗಳ ಕಾಲ ಈ ಸಮಾರೋಹಮ್ ಕಾರ್ಯಕ್ರಮ ನಡೆಯಲಿದೆ. ಇದೀಗ ಮೋದಿ ಭೇಟಿ ನೀಡಿ ಸಮಾನತೆಯ ಪ್ರತಿಮೆ ಅನಾವರಣ ಮಾಡಿ ಪೂಜಾ ಕೈಂಕೈರ್ಯದಲ್ಲಿ ಪಾಲ್ಗೊಂಡರು.

Tap to resize

ಶ್ರೀರಾಮಾನುಜಾಚಾರ್ಯ ಪ್ರತಿಮೆ ಸಂಕೀರ್ಣದಲ್ಲಿ ಹಲವು ದೇಗುಲಗಳಿವೆ. ಈ ದೇಗುಲಗಳಲ್ಲಿನ 108 ದಿವ್ಯದೇಶಂಗಳನ್ನು ಮರುಸ್ಥಾಪನೆ ಮಾಡಲಾಗಿದೆ. ಮರುಸ್ಥಾಪಿಸಿದ ದಿವ್ಯದೇಶಂಗಳನ್ನು ಪ್ರಧಾನಿ ಮೋದಿ ವೀಕ್ಷಿಸಿದ್ದಾರೆ.  ಇದಕ್ಕೂ ಮೊದಲು ನಡೆದ ವಿಶ್ವಕ್ಸೇನ ಯಾಗದ ಪೂರ್ಣಾಹುತಿಯಲ್ಲಿ ಮೋದಿ ಪಾಲ್ಗೊಂಡರು.
 

ನಾಮ ಧರಿಸಿದ ಮೋದಿ, ಹಳದಿ ಬಣ್ಣದ ಪಂಚೆ ಹಾಗೂ ಶಲ್ಯ ಧರಿಸಿ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.  ರಾಮಾನುಜಂ ಪ್ರತಿಮೆ ಸುತ್ತಲಿರುವ ಸುಮಾರು 108 ದೇವಸ್ಥಾನಗಳಿವೆ. ಬದ್ರಿನಾಥ, ಶ್ರೀರಂಗ, ಕಂಚಿ ಸೇರಿದಂತೆ 108 ದೇವಸ್ಥಾನಗಳ ಪ್ರದೇಶದಲ್ಲಿ ಮೋದಿ ಸುತ್ತುಹಾಕಿ ಭಕ್ತಿಯಿಂದ ನಿಮಿಸಿದ್ದಾರೆ.

ಮುಚ್ಚಿಂತಲ್ ಬಳಿ ಇರುವ ಶ್ರೀರಾಮಾನುಜಾಚಾರ್ಯ ಆಶ್ರಮ 45 ಎಕರೆ ಪ್ರದೇಶದೊಳಗೆ ಸಮಾನತೆಯ ಶ್ರೀರಾಮಾನುಜಂ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಪಂಚಲೋಹಗಳಿಂದ ನಿರ್ಮಾಣಗೊಂಡಿರುವ 216 ಅಡಿ ಎತ್ತರ ಪ್ರತಿಮೆಯಾಗಿದೆ.

ಶ್ರೀರಾಮಾನುಜಾಚಾರ್ಯ 1,000ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿಗೆ ತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿ ಸಾಥ್ ನೀಡಿದರು. ಮೋದಿಗೆ ದೇಗುಲಗಳು, ಆಚರಣೆಗಳು, ಸಂಪ್ರದಾಯ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದರು. 

ಪ್ರತಿಮೆ ಅನಾವರಣ ಬಳಿಕ ಹೊಸ ಭಾರತದಲ್ಲಿ ಭವ್ಯ ಪರಂಪರೆಯ ಮಹತ್ವವನ್ನು ಮೋದಿ ಸಾರಿದರು. ಹಲವು ದಾರ್ಶನಿಕರು, ಸಂತರು ಭಾರತದಲ್ಲಿ ಜ್ಞಾನ ದೀಪ ಬೆಳಗಿದ್ದಾರೆ. ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ, ಭಾರತೀಯರಿಗೆ ಮಾತ್ರವಲ್ಲ ವಿಶ್ವಕ್ಕೆ ಜ್ಞಾನವನ್ನು ಹಂಚಿದ ಮಹಾನ್ ಸಂತ ಶ್ರೀರಾಮಾನುಜಾಚಾರ್ಯ ಎಂದು ಮೋದಿ ಹೇಳಿದ್ದಾರೆ.

ಒಂದೇ ಸ್ಥಳದಲ್ಲಿ 108 ಮಂದಿರಗಳ ದರ್ಶನ ಇಲ್ಲಿ ಸಾಧ್ಯ. ನಶಿಸಿ ಹೋಗಿದ್ದ ಮಂದಿರಗಳನ್ನು ಪುನರ್ ನಿರ್ಮಾಣ ಮಾಡಿದ ಶ್ರೀರಾಮಾನುಜಂ ಅವರ ಅನುಯಾಯಿಗಳನ್ನು ಅಭಿನಂದಿಸಿದ ಮೋದಿ, ಮುಂದಿನ ಪೀಳಿಗೆಗೆ ಶ್ರೀರಾಮಾನುಜಾಚಾರ್ಯ ಅವರ ಪ್ರತಿಮೆ ಪ್ರೇರಣೆಯಾಗಲಿದೆ ಎಂದರು.

2014ರಲ್ಲಿ ಶ್ರೀರಾಮಾನುಜಾಚಾರ್ಯ ಪ್ರತಿಮೆ, ಇಲ್ಲಿನ ದೇಗುಲಗಳ ಪುನರ್ ನಿರ್ಮಾಣ, ಸಂಕೀರ್ಣ ಅಭಿವೃದ್ಧಿಗೆ ಅಡಿಗಲ್ಲು ಹಾಕಲಾಗಿತ್ತು. ಇದೀಗ ಎಲ್ಲವೂ ಅಚ್ಚುಕಟ್ಟಾಗಿ ನೇರವೇರಿದೆ. ಪ್ರಧಾನಿ ಮೋದಿ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತದ ಭವ್ಯ ಪರಂಪರೆಯನ್ನು ಉಳಿಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

Latest Videos

click me!