Chandrayaan 3: ಮೋದಿ ಸರ್ಕಾರದ 9 ವರ್ಷ, ಬಾಹ್ಯಾಕಾಶದಲ್ಲಿ ಇಸ್ರೋ ಹರ್ಷ

First Published | Aug 23, 2023, 12:34 PM IST

Chandrayaan 3 mission: ಚಂದ್ರಯಾನ-3 ಮೂಲಕ ಭಾರತ ಐತಿಹಾಸಿಕ ಸಾಧನೆಗೆ ಸಜ್ಜಾಗಿದೆ. ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿದ ಫಲಗಳು ಕಾಣುತ್ತಿದೆ.

India's Unforgettable Space Achievements

ಭಾರತದ ಬಾಹ್ಯಾಕಾಶ ಯೋಜನೆಗಳ ವಿಚಾರದಲ್ಲಿ 2014ರ ಹಿಂದಿನ ವರ್ಷಗಳದ್ದು ಒಂದು ಸಾಹಸವಾಗಿದ್ದರೆ, 2014ರ ಬಳಿಕ ಇನ್ನೊಂದು ಮಜಲಿಗೇರಿದೆ. ಅದಕ್ಕೆ ಕಾರಣ ನರೇಂದ್ರ ಮೋದಿ ಸರ್ಕಾರ ಇಸ್ರೋ ಹಾಗೂ ಬಾಹ್ಯಾಕಾಶ ಯೋಜನೆಗಳಿಗೆ ನೀಡಿದ ಪ್ರಾಮುಖ್ಯತೆ.

India's Unforgettable Space Achievements

ಕಳೆದ 9 ವರ್ಷಗಳಲ್ಲಿ ಇಸ್ರೋ  424 ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡಿದೆ. ಇದರಲ್ಲಿ 389 ಉಪಗ್ರಹಗಳು ವಿದೇಶದ್ದಾಗಿದೆ. 2014ಕ್ಕೂ ಮುನ್ನ 35 ಸ್ಯಾಟಲೈಟ್‌ಗಳನ್ನು ಇಸ್ರೋ ಉಡಾವಣೆ ಮಾಡಿತ್ತು.

Tap to resize

India's Unforgettable Space Achievements

ಇನ್ನು ಕಳೆದ 10 ವರ್ಷಗಳಲ್ಲಿ ಭಾರತದ ಸ್ಪೇಸ್‌ ಸೆಕ್ಟರ್‌ಗೆ ಮೀಸಲಿಟ್ಟ ಬಜೆಟ್‌ಗಳನ್ನೂ ಭಾರೀ ಏರಿಕೆಯಾಗಿದೆ. ಇಂದು ಇಸ್ರೋದ ಬಜೆಟ್‌ 12543 ಕೋಟಿ ರೂಪಾಯಿ. 

India's Unforgettable Space Achievements

ಕಳೆದ 9 ವರ್ಷಗಳಲ್ಲಿ ಇಸ್ರೋ ಉಡಾವಣೆ ಮಾಡಿದ 389 ವಿದೇಶಿ ಸ್ಯಾಟಲೈಟ್‌ಗೀಂದ ಈವರೆಗೂ 3300 ಕೋಟಿ ರೂಪಾಯಿಗೀ ಅಧಿಕ ಆದಾಯ ಬಂದಿದೆ. ಇದು ಬಾಹ್ಯಾಕಾಶದಲ್ಲಿ ಇಸ್ರೋದ ಶಕ್ತಿಯನ್ನು ಸಾಬೀತು ಮಾಡಿದೆ.

India's Unforgettable Space Achievements

ಇಸ್ರೋ ತನ್ನ ಉಪಗ್ರಹ ಉಡಾವಣೆಯ ಪರ್ಸಂಟೇಜ್‌ಅನ್ನು  ದೊಡ್ಡ ಮಟ್ಟದಲ್ಲಿ ಏರಿಸಿದೆ. 2014ಕ್ಕೂ ಮುನ್ನ ಈ ಪ್ರಮಾಣ 1.2 ಆಗಿದ್ದರೆ, 2014ರ ಬಳಿಕ ಇದು 5.7ಗೆ ಏರಿಕೆಯಾಗಿದೆ.

India's Unforgettable Space Achievements

ಭವಿಷ್ಯದ ಬಾಹ್ಯಾಕಾಶ ಸಂಶೋಧಕರಿಗೂ ಸರ್ಕಾರ ಪ್ರೇರಣೆ ತುಂಬಿದೆ. 2014ಕ್ಕೂ ಮುನ್ನ ವಿದ್ಯಾರ್ಥಿಗಳು ತಯಾರಿಸಿದ್ದ 4 ಸ್ಯಾಟಲೈಟ್‌ಅನ್ನು ಇಸ್ರೋ ಕಕ್ಷಗೆ ಸೇರಿಸಿದ್ದರೆ, 2014ರ ಬಳಿಕ 11 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಏರಿಸಲಾಗಿದೆ.

India's Unforgettable Space Achievements

ಚಂದ್ರಯಾನ-2 ಯೋಜನೆಯನ್ನು 2019ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಈ ಯೋಜನೆಯ ಆರ್ಬಿಟರ್‌ ಈಗಲೂ ಚಂದ್ರನ ಕುರಿತಾದ ಪ್ರಮುಖ ಮಾಹಿತಿಗಳನ್ನು ಇಸ್ರೋಗೆ ರವಾನಿಸುತ್ತಿದೆ.

India's Unforgettable Space Achievements

ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುವ ವಾರ್ಷಿಕ ವಿಶೇಷ ಕಾರ್ಯಕ್ರಮ ಯುವಿಕಾವನ್ನು ಸರ್ಕಾರ ಆಯೋಜನೆ ಮಾಡಿದೆ. 3 ವರ್ಷಗಳಲ್ಲಿ 603 ವಿದ್ಯಾರ್ಥಿಗಳು ಹಾಜರಾಗಿದ್ದು, ತಿರುವನಂತಪುರ, ಜಮ್ಮು ಮತ್ತು ಅಗರ್ತಲಾ ಸಂಸ್ಥೆಗಳಲ್ಲಿ 100% ಉದ್ಯೋಗಾವಕಾಶಗಳು ಸಿಕ್ಕಿವೆ.

India's Unforgettable Space Achievements

2022ರ ನವೆಂಬರ್ 25 ರಂದು, ಮೊದಲ ಖಾಸಗಿ ಲಾಂಚ್‌ಪ್ಯಾಡ್ ಮತ್ತು ಮಿಷನ್ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಇತಿಹಾಸವನ್ನು ನಿರ್ಮಿಸಲಾಯಿತು.

India's Unforgettable Space Achievements

750 ವಿದ್ಯಾರ್ಥಿನಿಯರ ಸಹಯೋಗದ ತಂಡ, ಸ್ಪೇಸ್ ಕಿಡ್ಜ್ ಮಾರ್ಗದರ್ಶನದಲ್ಲಿ, ಐತಿಹಾಸಿಕ SSLV - D2 ಮೂರು ಉಪಗ್ರಹಗಳನ್ನು ಉಡಾವಣೆ ಮಾಡಲು ಕಾರಣವಾಯಿತು.

India's Unforgettable Space Achievements

ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗಾಗಿ ಸರ್ಕಾರ ಈಗಾಗಲೇ ಕೆಲವೊಂದು ಒಪ್ಪಂದಗಳನ್ನು ಮಾಡಿಕೊಂಡಿದೆ. ನಾಸಾದ ಜೊತೆ ಆರ್ಟೆಮಿಸ್‌ ಒಪ್ಪಂದ, ಇಸ್ರೋ ಹಾಗೂ ನಾಸಾ ಜಂಟಿಯಾಗಿ ತಯಾರಿಸಲಿರುವ ನಿಸ್ಸಾರ್‌ ಸ್ಯಾಟಲೈಟ್‌ನಂಥ ಯೋಜನೆಗಳು ಮುಂದಿವೆ.

India's Unforgettable Space Achievements

140 ಸ್ಟಾರ್ಟ್-ಅಪ್‌ಗಳು 2020 ರಿಂದ ಭಾರತದ ಬಾಹ್ಯಾಕಾಶ ಆಕಾಶವನ್ನು ಬೆಳಗಿಸಿದೆ IN-SPAce ಉದ್ಯಮ, ಶೈಕ್ಷಣಿಕ ಮತ್ತು ನಾವೀನ್ಯತೆಗಳ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ, ಬಾಹ್ಯಾಕಾಶ ಪರಿಶೋಧನೆಯ ನಿರೂಪಣೆಯನ್ನು ಪುನಃ ಬರೆದಿದೆ.

Latest Videos

click me!