ಜಗತ್ತಿನ ಅತೀ ಉದ್ದದ 10 ರೈಲ್ವೇ ಫ್ಲಾಟ್‌ಫಾರ್ಮ್‌ಗಳು, ಇವುಗಳಲ್ಲಿ 7 ಭಾರತದ್ದು!

Published : Aug 20, 2023, 10:39 PM IST

ವಿಶ್ವದ ಅತಿ ಉದ್ದದ ರೈಲ್ವೇ ಫ್ಲಾಟ್‌ಫಾರ್ಮ್‌ಗಳ ವಿಚಾರದಲ್ಲಿ ಭಾರತ ಹೆಮ್ಮೆ ಪಡುವಂಥ ವಿಚಾರವಿದೆ. ಏಕೆಂದರೆ, ಅಗ್ರ 10 ರ ಪಟ್ಟಿಯಲ್ಲಿ ಭಾರತದ್ದೇ ಏಳು ಫ್ಲಾಟ್‌ಫಾರ್ಮ್‌ಗಳಿವೆ.  

PREV
110
ಜಗತ್ತಿನ ಅತೀ ಉದ್ದದ 10 ರೈಲ್ವೇ ಫ್ಲಾಟ್‌ಫಾರ್ಮ್‌ಗಳು, ಇವುಗಳಲ್ಲಿ 7 ಭಾರತದ್ದು!

10. ಚೆರಿಟನ್‌ ಶಟಲ್‌ ಟರ್ಮಿನಲ್‌: ಇಂಗ್ಲೆಂಡ್‌ನ ಕೆಂಟ್‌ ಕೌಟಿಯಲ್ಲಿರುವ ಚೆರಿಟನ್‌ ಷಟಲ್‌ ಟರ್ಮಿನಲ್‌ನ ಫ್ಲಾಟ್‌ಫಾರ್ಮ್‌ ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, 791 ಮೀಟರ್‌ ಉದ್ದವಿದೆ.

210

9. ಬಿಲಾಸ್‌ಪುರ ರೈಲ್ವೇ ಸ್ಟೇಷನ್‌: ಛತ್ತೀಸ್‌ಗಢ ರಾಜ್ಯದಲ್ಲಿರುವ ಬಿಲಾಸ್‌ಪುರ ರೈಲ್ವೇ ಸ್ಟೇಷನ್‌ನ ಫ್ಲಾಟ್‌ಫಾರ್ಮ್‌ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇದರ ಉದ್ದ 802 ಮೀಟರ್‌ ಆಗಿದೆ.

310

8. ಆಟೋ ಕ್ಲಬ್‌ ಸ್ಪೀಡ್‌ವೇ: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಆಟೋ ಕ್ಲಬ್‌ ಸ್ಪೀಡ್‌ವೇಗೆ ಹೊಂದಿಕೊಂಡಿರುವ ಈ ರೈಲ್ವೇ ಸ್ಪೇಷನ್‌ನಲ್ಲಿರುವ ಫ್ಲಾಟ್‌ಫಾರ್ಮ್‌ನ ಉದ್ದ 815 ಮೀಟರ್.

410

7.ಫಿಲಿಬಿತ್‌ ಜಂಕ್ಷನ್‌: ಉತ್ತರ ಪ್ರದೇಶದಲ್ಲಿರುವ ಫಿಲಿಬಿತ್‌ ಜಂಕ್ಷನ್‌ 1885ರಲ್ಲಿ ಆರಂಭವಾಗಿತ್ತು. 2016ರಿಂದ ಇಲ್ಲಿ ಬ್ರಾಡ್‌ಗೇಜ್‌ ಲೈನ್‌ ಆರಂಭವಾಗಿದೆ. ಇಲ್ಲಿ ವಿಶ್ವದ 7ನೇ ಅತೀ ಉದ್ದದ ಫ್ಲಾಟ್‌ಫಾರ್ಮ್‌ ಇದ್ದು, ಇದರ ಉದ್ದ 900 ಮೀಟರ್‌ ಆಗಿದೆ.

510

6.ಚೆನ್ನೈ ಎಗ್ಮೋರ್‌: 118 ವರ್ಷಗಳ ಹಿಂದೆ ಆರಂಭವಾಗಿರುವ ಚೆನ್ನೈ ಎಗ್ಮೋರ್‌ ರೈಲ್ವೇ ಸ್ಟೇಷನ್‌ನಲ್ಲಿ ವಿಶ್ವದ 6ನೇ ಅತೀ ಉದ್ದದ ಫ್ಲಾಟ್‌ಫಾರ್ಮ್‌ ಇದ್ದು, ಇದರ ಉದ್ದ 925.2 ಮೀಟರ್ ಆಗಿದೆ.

610

5.ಸ್ಟೇಟ್‌ ಸ್ಟ್ರೀಟ್‌ ಸಬ್‌ವೇ: ಅಮೆರಿಕಾದ ಇಲಿನಾಯ್ಸ್ ರಾಜ್ಯದ ಷಿಕಾಗೋ ನಗರದಲ್ಲಿರುವ ಸ್ಟೇಟ್‌ ಸ್ಟ್ರೀಟ್‌ ಸಬ್‌ವೇ ಸ್ಟೇಷನ್‌ನಲ್ಲಿ ವಿಶ್ವದ 5ನೇ ಅತೀ ಉದ್ದದ ಫ್ಲಾಟ್‌ಫಾರ್ಮ್‌ ಇದ್ದು, ಇದರ ಉದ್ದ 1067.1 ಮೀಟರ್ ಆಗಿದೆ.

710

4.ಖರಗ್‌ಪುರ ಜಂಕ್ಷನ್‌: ಪಶ್ಚಿಮ ಬಂಗಾಳದ ಖರಗ್‌ಪುರ ಜಂಕ್ಷನ್‌ನಲ್ಲಿರುವ ಫ್ಲಾಟ್‌ಫಾರ್ಮ್‌ 1072.5 ಮೀಟರ್‌ ಉದ್ದವಿದೆ. ಇದು 124 ವರ್ಷಗಳ ಹಿಂದೆ ಆರಂಭವಾದ ರೈಲ್ವೇ ಸ್ಟೇಷನ್‌ ಆಗಿದೆ.

810

3.ಕೊಲ್ಲಂ ಜಂಕ್ಷನ್‌: ಕೇರಳದ ಕೊಲ್ಲಂನಲ್ಲಿರುವ ಈ ಜಂಕ್ಷನ್‌ನ ಒಂದು ಫ್ಲಾಟ್‌ಫಾರ್ಮ್‌ 1180.5 ಮೀಟರ್‌ ಉದ್ಧವಿದೆ. ಇದು ಕೇರಳದ 2ನೇ ಅತ್ಯಂತ ಪುರಾತನ ರೈಲ್ವೇ ಸ್ಟೇಷನ್‌ ಕೂಡ ಆಗಿದೆ.

910

2. ಗೋರಖ್‌ಪುರ ಜಂಕ್ಷನ್‌: ಉತ್ತರ ಪ್ರದೇಶದ ಗೋರಖ್‌ಪುರ ಜಂಕ್ಷನ್‌ ವಿಶ್ವದ 2ನೇ ಅತೀ ಉದ್ಧದ ರೈಲ್ವೇ ಫ್ಲಾಟ್‌ಫಾರ್ಮ್‌ ಹೊಂದಿದೆ. ಇದು 1366.3 ಮೀಟರ್‌ ಉದ್ದವಿದೆ.

1010

1. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್: ಕಳೆದ ಮಾರ್ಚ್‌ನಲ್ಲಿ ಉದ್ಘಾಟನೆಯಾಗಿರುವ ಈ ಜಂಕ್ಷನ್‌ನ ಫ್ಲಾಟ್‌ಫಾರ್ಮ್‌ 1507 ಮೀಟರ್‌ ಉದ್ದವಿದೆ. ಇದು ವಿಶ್ವದ ಅತೀ ಉದ್ದದ ರೈಲ್ವೇ ಫ್ಲಾಟ್‌ಫಾರ್ಮ್‌ ಎನಿಸಿದ್ದು, ಕರ್ನಾಟಕದ ಹುಬ್ಬಳ್ಳಿಯಲ್ಲಿದೆ.
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories