ಲಡಾಖ್‌ನ ಪಾಂಗಾಂಗ್ ಸರೋವರಕ್ಕೆ ಬೈಕ್ ರೈಡ್ ಹೊರಟ ರಾಹುಲ್‌ ಗಾಂಧಿ

Published : Aug 19, 2023, 02:06 PM ISTUpdated : Aug 19, 2023, 02:27 PM IST

ಲಡಾಖ್ (ಆ.19): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರಕ್ಕೆ ಬೈಕ್ ರೈಡ್ ಆರಂಭಿಸಿದರು. ಅಲ್ಲಿ ಅವರು ಪ್ರವಾಸಿ ಶಿಬಿರದಲ್ಲಿ ರಾತ್ರಿ ತಂಗಲಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ರಾಹುಲ್ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಆಗಸ್ಟ್ 20 ರಂದು ಪ್ಯಾಂಗೊಂಗ್ ಸರೋವರದಲ್ಲಿ ಆಚರಿಸಲಿದ್ದಾರೆ.

PREV
111
ಲಡಾಖ್‌ನ ಪಾಂಗಾಂಗ್ ಸರೋವರಕ್ಕೆ ಬೈಕ್ ರೈಡ್ ಹೊರಟ ರಾಹುಲ್‌ ಗಾಂಧಿ

ಪಾಂಗಾಂಗ್ ಸರೋವರಕ್ಕೆ ನಮ್ಮ ಪಯಣ ನನ್ನ ತಂದೆ ಹೇಳುತ್ತಿದ್ದರು, ಇದು ವಿಶ್ವದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. -ರಾಹುಲ್‌ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

 

211

ಶುಕ್ರವಾರ ಲಡಾಖ್‌ಗೆ ತಮ್ಮ ಮೊದಲ ಭೇಟಿಯ ಸಂದರ್ಭದಲ್ಲಿ ಗಾಂಧಿಯವರು ಲೇಹ್‌ನಲ್ಲಿ 500 ಕ್ಕೂ ಹೆಚ್ಚು ಯುವಕರೊಂದಿಗೆ ಸಂವಾದಾತ್ಮಕ ಕಾರ್ಯಕ್ರಮ ನಡೆಸಿದರು. ಈ ಪ್ರದೇಶಕ್ಕೆ ಎರಡು ದಿನಗಳ ಭೇಟಿಗಾಗಿ ಕಾಂಗ್ರೆಸ್ ನಾಯಕ ಗುರುವಾರ ಲೇಹ್‌ಗೆ ಆಗಮಿಸಿದರು. ಆದರೆ, ರಾಹುಲ್ ಲಡಾಖ್  ಪ್ರವಾಸವನ್ನು ಆಗಸ್ಟ್ 25ರವರೆಗೆ ವಿಸ್ತರಿಸಲಾಗಿದೆ.

 

311

ಆಗಸ್ಟ್ 5, 2019 ರಂದು ಆರ್ಟಿಕಲ್ 370 ಮತ್ತು 35 (ಎ) ಅನ್ನು ತೆಗೆದುಹಾಕಿದ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಲಡಾಖ್ ಮತ್ತು ಜೆ & ಕೆ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಇದು ರಾಹುಲ್ ಅವರ ಮೊದಲ ಲಡಾಖ್ ಭೇಟಿಯಾಗಿದೆ. 

 

411

ರಾಹುಲ್‌ ತಮ್ಮ ವಾಸ್ತವ್ಯದ ಸಮಯದಲ್ಲಿ ಕಾರ್ಗಿಲ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ.   

511

ಲೇಹ್‌ನಲ್ಲಿ ಫುಟ್‌ಬಾಲ್ ಪಂದ್ಯವನ್ನೂ ವೀಕ್ಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಕಾಲೇಜು ದಿನಗಳಲ್ಲಿ ಫುಟ್ಬಾಲ್ ಆಟಗಾರರಾಗಿದ್ದರು. 

611

ರಾಹುಲ್ ಆಗಸ್ಟ್ 25 ರಂದು 30 ಸದಸ್ಯರ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ (LAHDC)-ಕಾರ್ಗಿಲ್ ಚುನಾವಣೆಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. 

711

ಕಾರ್ಗಿಲ್ ಕೌನ್ಸಿಲ್ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಸೆಪ್ಟೆಂಬರ್ 10 ರಂದು ನಡೆಯಲಿರುವ ಕಾರ್ಗಿಲ್ ಹಿಲ್ ಕೌನ್ಸಿಲ್ ಚುನಾವಣೆ ನಡೆಯಲಿದೆ.

811

ಗುರುವಾರ ಲಡಾಖ್‌ಗೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ಲೇಹ್ ವಿಮಾನ ನಿಲ್ದಾಣದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.

911

ಕಾಂಗ್ರೆಸ್ ಸಂಸದರು ಈ ವರ್ಷದ ಆರಂಭದಲ್ಲಿ ಶ್ರೀನಗರ ಮತ್ತು ಜಮ್ಮುವಿಗೆ ಎರಡು ಬಾರಿ ಭೇಟಿ ನೀಡಿದ್ದರೂ, ಅವರು ಲಡಾಖ್‌ಗೆ ಭೇಟಿ ನೀಡಿರಲಿಲ್ಲ.

1011

ಜನವರಿಯಲ್ಲಿ ಕಾಂಗ್ರೆಸ್ ನಾಯಕ ತಮ್ಮ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಜಮ್ಮು ಮತ್ತು ಶ್ರೀನಗರಕ್ಕೆ ಭೇಟಿ ನೀಡಿದ್ದರು. ಫೆಬ್ರವರಿಯಲ್ಲಿ ಮತ್ತೊಮ್ಮೆ ವೈಯಕ್ತಿಕ ಭೇಟಿಯಲ್ಲಿ ಅವರು ಗುಲ್ಮಾರ್ಗ್ ಸ್ಕೀ ರೆಸಾರ್ಟ್ಗೆ ಭೇಟಿ ನೀಡಿದರು. 

 

1111

ಇಂದು ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರಕ್ಕೆ ಬೈಕ್ ರೈಡ್ ಆರಂಭಿಸಿರುವ ರಾಹುಲ್‌ ರಾತ್ರಿ  ಪ್ರವಾಸಿ ಶಿಬಿರದಲ್ಲಿ ತಂಗಿ ಬಳಿಕ, ನಾಳೆ ತಮ್ಮ ತಂದೆ ಜನ್ಮದಿನದ ಸವಿನೆನಪು ಮಾಡಿಕೊಳ್ಳಲಿದ್ದಾರೆ.

Read more Photos on
click me!

Recommended Stories