Published : Mar 04, 2025, 12:34 PM ISTUpdated : Mar 04, 2025, 12:48 PM IST
ಎಲ್ಲರಂತೆ ಆ ವರ ಕೂಡಾ ಬಹಳ ಸಂತೋಷದಿಂದ ಮದುವೆಯಾದನು. ಮದುವೆ ದಿನವೆಲ್ಲಾ ಸಂಭ್ರಮದಿಂದ ಕೂಡಿತ್ತು. ಮಾರನೇ ದಿನ ಬೆಳಗ್ಗೆವರೆಗೂ ಎಲ್ಲವೂ ಚೆನ್ನಾಗಿತ್ತು. ಆದರೆ ಮಧ್ಯಾಹ್ನ ಆಗುವಷ್ಟರಲ್ಲಿ ವಧುವಿಗೆ ಹೊಟ್ಟೆ ನೋವು ಬಂತು. ಏನಪ್ಪಾ ಅಂತ ಆಸ್ಪತ್ರೆಗೆ ಕರೆದುಕೊಂಡು ಹೋದ್ರೆ ಡಾಕ್ಟರ್ ಹೇಳಿದ ವಿಷಯಕ್ಕೆ ವರನಿಗೆ ತಲೆಕೆಟ್ಟು ಹೋಯಿತು.
ಮದುವೆ ಮಾಡಿಕೊಳ್ಳುವುದು ಸಮಾಜದಲ್ಲಿ ಒಳ್ಳೆಯ ಬದುಕು ಕಟ್ಟಿಕೊಳ್ಳಲು. ಕುಟುಂಬ ಇದ್ದರೆ ಮಾತ್ರ ಸಮಾಜ, ದೇಶ ಚೆನ್ನಾಗಿರುತ್ತದೆ. ಈ ಸಮಾಜಕ್ಕೆ ನಾಳಿನ ತಲೆಮಾರನ್ನು ನೀಡುವ ದೊಡ್ಡ ಕಾರ್ಯ ಮದುವೆ. ಇನ್ನು ಮದುವೆಯಾದ ನಂತರ ಜೋಡಿಗಳು ಮಕ್ಕಳನ್ನು ಪ್ಲಾನ್ ಮಾಡುವುದು ಸರ್ವೇಸಾಮಾನ್ಯ ವಿಷಯ.
28
ಕೆಲವರು ಸ್ವಲ್ಪ ಟೈಮ್ ತೆಗೆದುಕೊಂಡರೆ ಇನ್ನು ಕೆಲವರು ತಕ್ಷಣ ಪ್ಲಾನ್ ಮಾಡಿಕೊಳ್ಳುತ್ತಾರೆ. ಆದರೆ ಮದುವೆಯಾದ ಎರಡನೇ ದಿನವೇ ಹೆಂಡತಿ ಮಗುವಿಗೆ ಜನ್ಮ ನೀಡಿದರೆ. ಕೇಳೋಕೆ ವಿಚಿತ್ರವಾಗಿದ್ದರೂ ಇಂತಹ ಘಟನೆ ನಿಜವಾಗಿಯೂ ನಡೆದಿದೆ.
38
ಈ ವಿಚಿತ್ರವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿವರಗಳಿಗೆ ಹೋದರೆ, ಮಹಾ ಕುಂಭಮೇಳದಿಂದ ಫೇಮಸ್ ಆದ ಪ್ರಯಾಗ್‌ರಾಜ್ ಜಿಲ್ಲೆಯ ಜಸ್ರಾ ಎಂಬ ಗ್ರಾಮದಲ್ಲಿ ಫೆಬ್ರವರಿ 24ರಂದು ಯುವಕನಿಗೆ ಮದುವೆಯಾಯಿತು. ಬಹಳ ಗ್ರಾಂಡ್ ಆಗಿ ಮದುವೆ ಮಾಡಿದರು.
48
ರಾತ್ರಿಯೆಲ್ಲಾ ಡ್ಯಾನ್ಸ್‌ನಿಂದ ಜೋಶ್‌ನಲ್ಲಿದ್ದ ಹೊಸ ಜೋಡಿ ಬೆಳಿಗ್ಗೆ ತಡವಾಗಿ ಎದ್ದರು. ನಂತರ ವಧು ಮನೆಯಲ್ಲಿ ಏನೋ ಕೆಲಸ ಮಾಡುತ್ತಾ ಅತ್ತಿತ್ತ ತಿರುಗಾಡಿದಳು. ಇದರಿಂದ ಸಂಜೆ ಆಕೆಗೆ ಒಮ್ಮೆಲೆ ಹೊಟ್ಟೆ ನೋವು ಶುರುವಾಯಿತು. ತಕ್ಷಣ ಹೊಟ್ಟೆ ನೋವಿನ ಮಾತ್ರೆ ಏನೋ ಹಾಕಿಕೊಂಡಳು. ಆದರೂ ನೋವು ತಡೆಯಲಾರದೆ ಸ್ಥಳೀಯ ಆಸ್ಪತ್ರೆಗೆ ಹೋದರು.
58
ಹೊಸ ವಧುವನ್ನು ಪರೀಕ್ಷಿಸಿದ ಡಾಕ್ಟರ್ ಶಾಕಿಂಗ್ ನ್ಯೂಸ್ ಹೇಳಿದರು. ಆ ಹುಡುಗಿ ಗರ್ಭಿಣಿಯಾಗಿದ್ದಾಳೆ, ತಿಂಗಳು ತುಂಬಿದೆ ತಕ್ಷಣ ಸರ್ಜರಿ ಮಾಡಬೇಕು ಎಂದು ತಿಳಿಸಿದರು. ನಂತರ ಬಂಧುಗಳ ಅನುಮತಿಯೊಂದಿಗೆ ಆಪರೇಷನ್ ಮಾಡಲಾಗಿ ಗಂಡು ಮಗುವಿಗೆ ಜನ್ಮ ನೀಡಿದಳು.
68
ಇನ್ನು ಅಸಲಿ ಗಲಾಟೆ ಅಲ್ಲಿಂದ ಶುರುವಾಯಿತು. ಮದುವೆಯಾದ ಎರಡನೇ ದಿನವೇ ಮಗುವಿಗೆ ಜನ್ಮ ನೀಡಿದ್ದರಿಂದ ಹುಡುಗನ ಕಡೆಯವರು ಗಲಾಟೆಗೆ ಇಳಿದರು. ಒಬ್ಬರನ್ನೊಬ್ಬರು ಹೊಡೆದಾಡುವವರೆಗೂ ಪರಿಸ್ಥಿತಿ ಬಂತು. ಆದರೆ ಮೇ ತಿಂಗಳಲ್ಲಿ ಮದುವೆ ನಿಶ್ಚಯವಾಗಿತ್ತು ಮದುವೆಗೆ ಮುಂಚೆ ಹುಡುಗಿ, ಹುಡುಗ ಭೇಟಿಯಾಗಿದ್ದರು
78
ಆ ಮಗುವಿಗೆ ತಂದೆ ಅವನೇ ಎಂದು ಹುಡುಗಿಯ ಕಡೆಯವರು ವಾದಿಸಲು ಪ್ರಾರಂಭಿಸಿದರು. ಆದರೆ ವರ ಮಾತ್ರ ಆ ವಾದವನ್ನು ಸುಳ್ಳು ಎಂದು ತಳ್ಳಿಹಾಕಿದನು. ತನ್ನ ವಿವಾಹ ನಿಶ್ಚಯ ಅಕ್ಟೋಬರ್‌ನಲ್ಲಿ ನಡೆದಿದೆ. ಆ ಮಗುವಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡನು.
88
ಇದರಿಂದ ಈ ಪಂಚಾಯಿತಿ ಸ್ವಲ್ಪ ದೊಡ್ಡ ಮನುಷ್ಯರವರೆಗೂ ಹೋಯಿತು. ಬಹಳ ಹೊತ್ತು ವಾಗ್ವಾದದ ನಂತರ ಹೊಸ ವಧು ಹುಟ್ಟಿದ ಮಗುವಿನೊಂದಿಗೆ ತನ್ನ ತಾಯಿಯ ಮನೆಗೆ ಹೋದಳು ತಿಳಿದುಬಂದಿದೆ. ಒಟ್ಟಿನಲ್ಲಿ ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.