Published : Mar 03, 2025, 01:53 PM ISTUpdated : Mar 03, 2025, 02:35 PM IST
ಪ್ರಧಾನಿ ಮೋದಿ ಗಿರ್ ಅಭಯಾರಣ್ಯದಲ್ಲಿ ಜಂಗಲ್ ಸಫಾರಿಯ ಮಜಾ ಅನುಭವಿಸಿದರು ಮತ್ತು ಏಷ್ಯಾ ಸಿಂಹಗಳನ್ನು ಹತ್ತಿರದಿಂದ ನೋಡಿದರು. ಈ ವೇಳೆ ಅವರು ಪ್ರಾಣಿಗಳ ಫೋಟೋಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಗಿರ್ ಸಫಾರಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಡು ಪ್ರಾಣಿಗಳ ಕೆಲವು ಫೋಟೋಗಳನ್ನು ತೆಗೆದರು.ಸದ್ಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
25
ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ಮಜಾ ಅನುಭವಿಸಿದರು
35
ಜಂಗಲ್ ಸಫಾರಿ ವೇಳೆ ಪ್ರಧಾನಿ ಅಪರೂಪದ ಏಷ್ಯಾ ಸಿಂಹಗಳನ್ನು ಹತ್ತಿರದಿಂದ ನೋಡಿ ಆನಂದಿಸಿದ್ದಾರೆ. ಹಾಗೆ ನಿಸರ್ಗ ಸೌಂದರ್ಯವನ್ನು ಪ್ರಧಾನಿಗಳು ಕಣ್ತುಂಬಿಕೊಂಡಿದ್ದಾರೆ.
45
ಪಿಎಂ ಮೋದಿ ತಲೆಗೆ ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ, ಕೈಯಲ್ಲಿ ಕ್ಯಾಮೆರಾ ಹಿಡಿದು ಪ್ರಕೃತಿ ಪ್ರೇಮಿಯಂತೆ ಕಾಣುತ್ತಿದ್ದರು.
55
ಗಿರ್ ಸಫಾರಿ ಬಳಿಕ ಪ್ರಧಾನಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಇಂದಿನ ಸಭೆಯಲ್ಲಿ ಸೇನಾ ಮುಖ್ಯಸ್ಥರು, ಅಧಿಕಾರಿಗಳು, ವನ್ಯಜೀವಿ ತಜ್ಞರು, NGO ಪ್ರತಿನಿಧಿಗಳು ಸೇರಿದಂತೆ 47 ಸದಸ್ಯರು ಭಾಗವಹಿಸಲಿದ್ದಾರೆ.