ಸೈಫ್‌ ಅಲಿ ಖಾನ್‌ಗೆ ಚಾಕು ಇರಿತದ ತನಿಖೆ ಹೊಣೆ ಕನ್ನಡಿಗ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾನಾಯಕ್‌ಗೆ

Published : Jan 17, 2025, 09:37 AM ISTUpdated : Jan 17, 2025, 09:43 AM IST

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ಮೂಲದ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಅವರಿಗೆ ವಹಿಸಲಾಗಿದೆ. ದಯಾನಾಯಕ್ ಅವರು 80ಕ್ಕೂ ಹೆಚ್ಚು ಭೂಗತ ಗ್ಯಾಂಗ್‌ಸ್ಟರ್‌ಗಳನ್ನು ಎನ್‌ಕೌಂಟರ್ ಮಾಡಿದ್ದಾರೆ ಎಂದು ಹೇಳಲಾಗಿದೆ.

PREV
15
ಸೈಫ್‌ ಅಲಿ ಖಾನ್‌ಗೆ ಚಾಕು ಇರಿತದ ತನಿಖೆ ಹೊಣೆ ಕನ್ನಡಿಗ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾನಾಯಕ್‌ಗೆ

ಬಾಲಿವುಡ್ ನಟ ಸೈಫ್ ಅಲಿ  ಖಾನ್‌ಗೆ ಚಾಕು ಇರಿತ ಪ್ರಕರಣ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಚಾಕು ಇರಿದ ಎನ್ನಲಾದ ಆರೋಪಿ  ಚಹರೆ ಸಹ  ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಪ್ರಕರಣದ ತನಿಖೆಯ ಜವಾಬ್ದಾರಿ ಕನ್ನಡಿಗನ ಹೆಗಲಿಗೆ ಹಾಕಲಾಗಿದೆ.

25

ಸೈಫ್‌ ಅಲಿ ಖಾನ್‌ ಮೇಲಿನ ಹಲ್ಲೆಯ ತನಿಖೆ ಹೊಣೆಯನ್ನು ಎನ್ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತಿ ಹೊಂದಿರುವ ಕನ್ನಡಿಗ ದಯಾನಾಯಕ್‌ಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಗುರುವಾರವೇ ಕ್ರೈಂ ಬ್ರಾಂಚ್‌ ಅಧಿಕಾರಿಗಳ ತಂಡದೊಂದಿಗೆ ಅವರ ನಿವಾಸಕ್ಕೆ ಆಗಮಿಸಿ ಪರಿಶೀಲಲನೆ ನಡೆಸಿದ್ದಾರೆ. 80 ಅಧಿಕ ಕುಖ್ಯಾತ ಭೂಗತ ಗ್ಯಾಂಗ್‌ಸ್ಟರ್‌ಗಳ ಎನ್‌ಕೌಂಟರ್‌ ಮಾಡಿದ ಖ್ಯಾತಿಯ ನಾಯಕ್‌, ಸೈಫ್‌ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಇಳಿದಿದ್ದಾರೆ.

35

ದಯಾನಾಯಕ್‌ ಅವರು ಕರ್ನಾಟಕದ ಉಡುಪಿ ಮೂಲದವರಾಗಿದ್ದಾರೆ. 1995ರಲ್ಲಿ ಅವರು ಮುಂಬೈ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗಿದ್ದರು. 90ರ ದಶಕದಲ್ಲಿ ಅವರು ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತಿಗಳಿಸಿದ್ದರು. ಮುಂಬೈ ಭೂಗಲೋಕದ 80ಕ್ಕೂ ಹೆಚ್ಚು ರೌಡಿಗಳನ್ನು ದಯಾನಾಯಕ್‌ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.

45

ಮಹಾರಾಷ್ಟ್ರ ಸಂಘಟಿಕ ಅಪರಾಧಗಳ ತಡೆ ಕಾಯ್ದೆ ಅಡಿ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ದಯಾನಾಯಕ್‌ ಅವರನ್ನು 2006ರಲ್ಲಿ ಅಮಾನತುಗೊಳಿಸಿತ್ತು. ಆದರೆ, ಅವರ ವಿರುದ್ಧ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ 2015ರಲ್ಲಿ ಅಮಾನತು ಶಿಕ್ಷೆ ರದ್ದುಗೊಳಿಸಲಾಗಿತ್ತು. 

55


2016ರಲ್ಲಿ ಮುಂಬೈ ಪೊಲೀಸ್‌ ಸೇವೆಗೆ ಮರಳಿದ್ದರು. ಬಳಿಕ ಅವರನ್ನು ಅಂಬೋಲಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಆಗಿ ನೇಮಕಗೊಂಡಿದ್ದರು. ದಯಾನಾಯಕ್ ಜೀವನಾಧರಿತ ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಿದೆ.

Read more Photos on
click me!

Recommended Stories