ಎಲ್‌ಟಿಸಿ ಎಂದರೇನು?
ರಜಾ ಪ್ರಯಾಣ ರಿಯಾಯಿತಿ (LTC) ಎಂಬುದು ನೌಕರರಿಗೆ ನೀಡುವ ಪ್ರವಾಸೋದ್ಯಮ ರಿಯಾಯಿತಿ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರವಲ್ಲದೆ ಖಾಸಗಿ ಕಂಪನಿಗಳೂ ಅನುಷ್ಠಾನಗೊಳಿಸುತ್ತವೆ. ಆದರೆ ಕಂಪನಿಗಳ ನಿಯಮಗಳಿಗೆ ಅನುಗುಣವಾಗಿ ರಿಯಾಯಿತಿಗಳು ಇರುತ್ತವೆ.
ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನೌಕರರು ನಾಲ್ಕು ವರ್ಷಗಳ ಅವಧಿಯಲ್ಲಿ ತಮ್ಮ ಸ್ವಂತ ಊರಿಗೆ ಅಥವಾ ಭಾರತದ ಯಾವುದೇ ಪ್ರದೇಶಕ್ಕೆ ಕುಟುಂಬದೊಂದಿಗೆ ಪ್ರಯಾಣಿಸಲು ಎಲ್‌ಟಿಸಿ ಸೌಲಭ್ಯವನ್ನು ಒದಗಿಸುತ್ತದೆ.
ಈಗ ರಾಜಧಾನಿ, ಶತಾಬ್ದಿ, ದುರಂತೋ, ತೇಜಸ್ ಎಕ್ಸ್‌ಪ್ರೆಸ್, ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕೇಂದ್ರ ಸರ್ಕಾರಿ ನೌಕರರು ಉಚಿತವಾಗಿ ಪ್ರಯಾಣಿಸಬಹುದು.