ರಾಜ್ಯಸಭೆಯ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಕೋಯೆಲ್ ಮಲಿಕ್‌ಗೆ ಅವಕಾಶ ನೀಡಿದೆ. ರಾಜ್ಯಸಭೆಗೆ ಆಯ್ಕೆಯಾಗಿದ್ದ ನಟಿ ಕೋಯೆಲ್ ಮಲಿಕ್ ಮೂರುವರೆ ತಿಂಗಳಲ್ಲಿ ರಾಜೀನಾಮೆ ನೀಡಿ ಇದೀಗ ಮತ್ತೆ ಸ್ಪರ್ಧಿಸುತ್ತಿರುವುದೇಕೆ?
ರಾಜ್ಯಸಭೆಯ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ವೇಳಾಪಟ್ಟಿ ಬಿಡುಗಡೆಯಾಗಿದೆ. ಇದೀಗ ಬಿಜೆಪಿ ಅಭ್ಯರ್ಥಿಗಳ ಅಂತಿಮಗೊಳಿಸಿದೆ. ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೋಯೆಲ್ ಮಲಿಕ್‌ಗೆ ಅವಕಾಶ ನೀಡಿದೆ. ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಕೋಯೆಲ್ ಮಲಿಕ್‌ಗೆ ರಾಜಕೀಯ ಹೊಸದಲ್ಲ. ಈಗಾಗಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕೋಯೆಲ್ ಮೂರುವರೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು.
25
ಎಪ್ರಿಲ್ 6ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದ ಕೋಯೆಲ್
ಕೋಯೆಲ್ ಮಲಿಕ್ ಬಂಗಾಳಿ ಜನಪ್ರಿಯ ನಟಿ. ಕಳೆದ ಕೆಲ ವರ್ಷಗಳಿಂದ ಮಮತಾ ಬ್ಯಾನರ್ಜಿಯ ಟಿಎಂಸಿ ಪಕ್ಷದಲ್ಲಿ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಟಿಎಂಸಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕೋಯೆಲ್ ಮಲಿಕ್ ಎಪ್ರಿಲ್ 6ರಂದು ಪ್ರಮಾಣವಚನ ಸ್ವೀಕರಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋಲಿನ ಬೆನ್ನಲ್ಲೇ ಹಲವು ನಾಯಕರು ಮಮತಾ ಬ್ಯಾನರ್ಜಿಗೆ ಶಾಕ್ ನೀಡಿದ್ದರು. ಈ ಪೈಕಿ ಕೋಯೆಲ್ ಮಲಿಕ್ ಕೂಡ ಒಬ್ಬರು.
35
ಜುಲೈ 16ಕ್ಕೆ ರಾಜೀನಾಮೆ ನೀಡಿದ್ದ ಕೋಯೆಲ್ ಮಲಿಕ್
ಮೂರುವರೇ ತಿಂಗಳಲ್ಲಿ ಟಿಎಂಸಿಯಲ್ಲಿ ಕೋಲಾಹಲ ನಡೆದಿತ್ತು. ಚುನಾವಣೆ ಸೋಲಿನ ಬೆನ್ನಲ್ಲೇ ಹಲವು ನಾಯಕರು ಪಕ್ಷ ತೊರೆದಿದ್ದರು. ಈ ಪೈಕಿ ಒಂದೇ ಒಂದು ರಾಜ್ಯಸಭೆಯ ಸಭೆಗೆ ಹಾಜರಾಗದೆ ರಾಜೀನಾಮೆ ನೀಡಿ ಹೊರಬಂದಿದ್ದರು. ಜುಲೈ 16ರಂದು ಕೋಯೆಲ್ ಮಲಿಕ್ ಟಿಎಂಸಿಗೆ ಗುಡ್ ಬೈ ಹೇಳಿ ಬಿಜೆಪಿಗೆ ಹತ್ತಿರವಾಗಿದ್ದರು.
ಕೋಯೆಲ್ ಮಲಿಕ್ ಬಂಗಾಳಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ರುಕ್ಮಿಣಿ ಮಲಿಕ್ ಇವರ ಮೂಲ ಹೆಸರು. ಬಂಗಾಳಿಯ ಹಿರಿಯ ನಟ ರಂಜಿತ್ ಮಲಿಕ್ ಹಾಗೂ ನಟಿ ದೀಪಾ ಮಲಿಕ್ ಪುತ್ರಿ. 2013ರಿಂದ ಬಂಗಾಳಿ ಸಿನಿಮಾದಿಂದ ದೂರ ಉಳಿದು ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಟಿಎಂಸಿ ನಾಯಕಿಯಾಗಿ ಗುರುತಿಸಿಕೊಂಡಿದ್ದರು.
55
ರಾಜ್ಯಸಭೆ ಉಪಚುನಾವಣೆ
ಅಕ್ಟೋಬರ್ 16ರಂದು ರಾಜ್ಯಸಭೆ ಉಪ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 6 ಕೊನೆಯ ದಿನ. ಇನ್ನು ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನವಾಗಿದೆ. ಇದೀಗ ಬಂಗಾಳದಲ್ಲಿ ಟಿಎಂಸಿ ಪಕ್ಷ ನಾಯಕರ ರಾಜೀನಾಮೆ, ಮುನಿಸಿನಿಂದ ಬಡವಾಗಿದೆ. ಮಮತಾ ಬ್ಯಾನರ್ಜಿ ಇದೀಗ ಮತ್ತೆ ಇಂಡಿಯಾ ಒಕ್ಕೂಟದ ಜೊತೆ ಸೇರಿ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ