ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ: ಇಲ್ಲಿದೆ ಏರೋ ಇಂಡಿಯಾ 2019 ಫೋಟೋಗಳು

First Published Feb 21, 2019, 3:01 PM IST

‘ಏರೋ ಇಂಡಿಯಾ’ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ವಿಶ್ವದ ದಿಗ್ಗಜ ರಾಷ್ಟ್ರಗಳೊಂದಿಗೆ ಸರಿಸಮನಾಗಿ ನಿಲ್ಲಲು ಸಹಕಾರಿಯಾಗಿದೆ. ಭಾರತ ಈವರೆಗೆ ನಾಲ್ಕು ಸಾವಿರ ಏರ್‌ಕ್ರಾಫ್ಟ್‌ಗಳನ್ನು ಉತ್ಪಾದಿಸಿದೆ.

ಏರೋ ಇಂಡಿಯಾ’ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ವಿಶ್ವದ ದಿಗ್ಗಜ ರಾಷ್ಟ್ರಗಳೊಂದಿಗೆ ಸರಿಸಮನಾಗಿ ನಿಲ್ಲಲು ಸಹಕಾರಿಯಾಗಿದೆ. ಭಾರತ ಈವರೆಗೆ ನಾಲ್ಕು ಸಾವಿರ ಏರ್‌ಕ್ರಾಫ್ಟ್‌ಗಳನ್ನು ಉತ್ಪಾದಿಸಿದೆ.
undefined
ಯಲಹಂಕದ ವಾಯುನೆಲೆಗೆ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಹಾರಿ ಬಂದಿರುವ ಲೋಹದ ಹಕ್ಕಿಗಳು ತಮ್ಮ ಕಲರವ ಮಾಡಿವೆ.
undefined
ನೀಲ ನಭದಲ್ಲಿ ‘ಸಾರಂಗ’ದ ವೈಯಾರ, ‘ಸೂರ್ಯ ಕಿರಣ ’ಗಳ ತಕಧಿಮಿ ನೃತ್ಯ, ಈ ಲೋಹದ ಹಕ್ಕಿಗಲು ಬಿಡಿಸಿದ ಬಣ್ಣ ಬಣ್ಣಗಳ ರಂಗೋಲಿಯ ಚಿತ್ತಾರ ಅಳಿಸುವ ಮುನ್ನವೇ ಅಬ್ಬರಿಸಿ ಆಕಾಶವನ್ನೇ ಸೀಳಿಕೊಂಡು ಬಂದಂತೆ ಭಾಸವಾಗುವ ಸುಖೋಯ್, ರಫೇಲ್ ಯುದ್ಧ ವಿಮಾನಗಳು ಗಮನ ಸೆಳೆದವು.
undefined
ವೈಮಾನಿಕ ಪ್ರದರ್ಶನದಲ್ಲಿ ಅತ್ಯಂತ ಹೆಚ್ಚು ಆಕರ್ಷಕವಾದ ಸೂರ್ಯ ಕಿರಣ ತಂಡದ ಸುಮಾರು ಒಂಬತ್ತು ವಿಮಾನಗಳು ವಜ್ರಾಕಾರದಲ್ಲಿ ಹಾರಾಡುತ್ತ, ಬಣ್ಣ ಬಣ್ಣದ ಹೊಗೆಯನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ರಂಗೋಲಿ ಬಿಡಿಸಿದವು. ಅಲ್ಲದೆ, ಅರ್ಧ ಗಂಟೆವರೆಗೆ ತಾಲೀಮು ನಡೆಸಿದ ಪೈಲಟ್‌ಗಳು, ವಾಯು ನೆಲೆ ಸುತ್ತಮುತ್ತಲ ಜನರಿಗೆ ಮನರಂಜನೆ ನೀಡಿದರು.
undefined
ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರೆಫೇಲ್-7 ಜಿಎಸ್ ಯುದ್ಧ ವಿಮಾನ ಯಲಹಂಕ ವಾಯುನೆಲೆಗೆ ಬಂದಿಳಿದಿದ್ದು ನಾಲ್ಕು ರಫೇಲ್ ವಿಮಾನಗಳು ಫ್ರಾನ್ಸ್‌ನಿಂದ ಯಲಹಂಕ ವಾಯು ನಲೆಗೆ ಆಗಮಿಸಿವೆ. ಮೂರು ವಿಮಾನಗಳು ತಾಲೀಮು ಪ್ರದರ್ಶನ ನಡೆಸಿದವು. ಒಂದು ವಿಮಾನ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು.
undefined
12 ನೇ ಆವೃತ್ತಿಯ ಏರೋ ಇಂಡಿಯಾ ‘ಏರ್ ಶೋ 2019’ನಲ್ಲಿ 36 ದೇಶಿಯ ವಿಮಾನಗಳು, 7 ವಿದೇಶಿ ವಿಮಾನಗಳು ಹಾಗೂ ಭಾರತೀಯ ವಾಯು ಸೇನೆಯ (ಐಎಎಫ್) 11 ವಿಮಾನಗಳು ಭಾಗಿಯಾಗಿವೆ.
undefined
ಸುಮಾರು 31 ವಿಮಾನಗಳು ಬಾನಂಗಳದಲ್ಲಿ ಪ್ರದರ್ಶನ ನೀಡಲಿವೆ. ಇನ್ನುಳಿದ 17 ವಿಮಾನಗಳನ್ನು ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.
undefined
12 ನೇ ವೈಮಾನಿಕ ಪ್ರದರ್ಶನಲ್ಲಿ ಭಾರತದ ಎಚ್‌ಎಎಲ್, ಬಿಎಚ್‌ಇಎಲ್, ಡಿಆರ್‌ಡಿಒ , ಬೆಮೆಲ್, ಅಮೆರಿಕದ ಎಫ್- 16 , ಎಫ್ - 18, ಫ್ರಾನ್ಸ್‌ನ ಡೆಸಾಲ್ಟ್, ಏರ್ ಬಸ್, ಜರ್ಮನಿ, ಕೊರಿಯಾ, ಸೌದಿ ಅರೇಬಿಯಾ, ಇಸ್ರೇಲ್, ಇಟಲಿ, ಜಪಾನ್, ರಷ್ಯಾ, ಸ್ವಿಡ್ಜರ್‌ಲ್ಯಾಂಡ್, ಉಕ್ರೇನ್, ಯುಎಇ, ದಕ್ಷಿಣ ಆಫ್ರಿಕಾ, ಬ್ರಿಟನ್ ಸೇರಿದಂತೆ ಒಟ್ಟು 370 ಕ್ಕೂ ಹೆಚ್ಚು ಕಂಪನಿಗಳು ಏರ್ ಶೋದಲ್ಲಿ ಭಾಗಿಯಾಗಿವೆ.
undefined
ಸ್ವೀಡನ್ ದೇಶ ತಯಾರಿಸಿರುವ ಗ್ರೈಪೆನ್ ಯುದ್ಧ ವಿಮಾನ ಯಲಹಂಕ ವಾಯುನೆಲೆಗೆ ಬಂದಿದ್ದು, ಬಹಳ ಆಕರ್ಷಣಿಯವಾಗಿದೆ. ಈ ಯುದ್ಧ ವಿಮಾನ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, 15.2 ಮೀ. ಉದ್ದವಿದೆ. ಇದರ ರೆಕ್ಕೆಗಳು 8.6 ಮೀ ಇದ್ದು, 16 ,500 ಕೆ.ಜಿ ತೂಕವನ್ನು ಹೊತ್ತೊಯ್ಯಬಲ್ಲದು. ಇದು ಒಂದು ತಾಸಿಗೆ 2,500 ಕಿ.ಮೀ. ಹಾರಾಟ ನಡೆಸಲಿದ್ದು, ಒಂದು ಎಂಜಿನ್‌ನನ್ನು ಹೊಂದಿದೆ.
undefined
click me!