ಬಿಹಾರ ಶಾಸಕಿ, ಗಾಯಕಿ ಮೈಥಿಲಿ ಠಾಕೂರ್ ಅವರ ಭಾವುಕ ವಿಡಿಯೋವೊಂದು ವೈರಲ್ ಆಗಿದೆ. ದೇವಸ್ಥಾನವೊಂದರಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು. 'ನನ್ನ ಜೀವನದಲ್ಲಿ ಹೀಗಾಗಿದ್ದು ಇದೇ ಮೊದಲು, ನನ್ನನ್ನು ನಾನೇ ನಿಯಂತ್ರಿಸಿಕೊಳ್ಳಲು ಆಗಲಿಲ್ಲ' ಎಂದು ಮೈಥಿಲಿ ಠಾಕೂರ್ ಹೇಳದ್ದಾರೆ.
ಬಿಹಾರದ ಅತಿ ಕಿರಿಯ ಶಾಸಕಿ ಮೈಥಿಲಿ ಠಾಕೂರ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾನುವಾರ ಜೈಪುರದ ಪ್ರಸಿದ್ಧ ಗೋವಿಂದ್‌ದೇವ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಈ ಭಾವುಕ ದೃಶ್ಯ ಕಂಡುಬಂದಿದೆ.
25
ಗೋವಿಂದ್‌ದೇವ್‌ಜಿ ದೇವಸ್ಥಾನ
ಗೋವಿಂದ್‌ದೇವ್‌ಜಿ ದೇವಸ್ಥಾನದಲ್ಲಿ ದರ್ಶನ ಪಡೆಯುವಾಗ ಮೈಥಿಲಿ ಠಾಕೂರ್ ಭಕ್ತಿ ವಾತಾವರಣದಲ್ಲಿ ಮೈಮರೆತರು. ಭಕ್ತರ ಭಜನೆ ಕೇಳಿ ಅವರು ಎಷ್ಟರಮಟ್ಟಿಗೆ ಭಾವುಕರಾದರೆಂದರೆ, ತಮ್ಮ ಕಣ್ಣೀರನ್ನು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ.
35
ನಿಯಂತ್ರಿಸಿಕೊಳ್ಳಲು ಆಗಲಿಲ್ಲ
ಮಾಧ್ಯಮಗಳೊಂದಿಗೆ ಮಾತನಾಡಿದ ಮೈಥಿಲಿ ಠಾಕೂರ್, 'ನಾನು ಈ ರೀತಿ ಹಿಂದೆಂದೂ ಅನುಭವಿಸಿರಲಿಲ್ಲ. ಗೋವಿಂದ್‌ದೇವ್‌ಜಿ ದೇವಸ್ಥಾನಕ್ಕೆ ಬಂದಾಗ, ಅಲ್ಲಿನ ವಾತಾವರಣ, ಭಕ್ತರ ಭಜನೆ, ಗಂಟೆ ಮತ್ತು ಚಪ್ಪಾಳೆಯ ಸದ್ದು ನನ್ನ ಮನಸ್ಸನ್ನು ಎಷ್ಟು ತಟ್ಟಿತೆಂದರೆ, ನನ್ನನ್ನು ನಾನೇ ನಿಯಂತ್ರಿಸಿಕೊಳ್ಳಲು ಆಗಲಿಲ್ಲ. ಕಣ್ಣೀರು ಹರಿಯುತ್ತಲೇ ಇತ್ತು, ಮನಸ್ಸಿನ ಭಾರವೆಲ್ಲಾ ಹಗುರಾದಂತೆ ಭಾಸವಾಯಿತು' ಎಂದರು.
ಮೈಥಿಲಿ ಠಾಕೂರ್ ಅವರು ಜೈಪುರದಲ್ಲಿ ಆಯೋಜಿಸಲಾಗಿದ್ದ 'ಯೂನಿಕ್ ರಂಗ್ ರಾಜಸ್ಥಾನ್ ರಂಗ್ ರಥ ಯಾತ್ರೆ' ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಭಾನುವಾರ ಅವರ ಸಂಗೀತ ಕಾರ್ಯಕ್ರಮವೂ ಇತ್ತು. ಈ ವೇಳೆ ಅವರ ಸಹೋದರರಾದ ರಿಷಭ್ ಮತ್ತು ಅಯಾಚಿ ಕೂಡ ಜೊತೆಗಿದ್ದರು.
ಮೈಥಿಲಿ ಠಾಕೂರ್ ಅವರು 25ನೇ ವಯಸ್ಸಿನಲ್ಲಿ ಶಾಸಕಿಯಾದ ಬಿಹಾರದ ಅತಿ ಕಿರಿಯ ಶಾಸಕಿ. ಅವರು ದರ್ಭಾಂಗಾದ ಅಲೈನ್‌ಗರ್‌ನಿಂದ ಬಿಜೆಪಿ ಶಾಸಕಿಯಾಗಿ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದಾರೆ. ಇದರೊಂದಿಗೆ ಅವರು ಪ್ರಸಿದ್ಧ ಭಜನಾ ಗಾಯಕಿಯೂ ಹೌದು. ಮೈಥಿಲಿ ಠಾಕೂರ್ ಭೋಜ್‌ಪುರಿ ಹಾಡುಗಳನ್ನು, ವಿಶೇಷವಾಗಿ ಛಠ್ ಪೂಜೆ ಗೀತೆ ಮತ್ತು ಕಜ್ರಿಗಳನ್ನು ಹಾಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ