ಕೈತುಂಬ ಸಂಬಳ ಪಡೆಯುವವರಿಗಿಂತ ಇಲ್ಲಿ ಭಿಕ್ಷುಕರೇ ಶ್ರೀಮಂತರು, ಎಲ್ಲರಲ್ಲೂ ಇದೆ ಪಾನ್‌ಕಾರ್ಡ್!

First Published | Oct 25, 2024, 6:33 PM IST

ಕೈತುಂಬ ಸಂಬಂಳ, ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುವ ಉದ್ಯಮಿಗಳಿಗಿಂತ ಇಲ್ಲಿ ಭಿಕ್ಷುಕರೇ ಶ್ರೀಮಂತರಾಗಿದ್ದಾರೆ. ಈ ಭಿಕ್ಷುಕರ ತಿಂಗಳ ಆದಾಯ ಲಕ್ಷಕ್ಕೂ ಅಧಿಕ. ಇಷ್ಟೇ ಅಲ್ಲ ವೀಕೆಂಡ್‌ನಲ್ಲಿ ಇವರು ಭೀಕ್ಷೆ ಬೇಡಲ್ಲ. ಸಂಪೂರ್ಣ ರಿಲ್ಯಾಕ್ಸ್. 

ಮೊದಲು ಭಿಕ್ಷೆ ಬೇಡೋದು ಅನಿವಾರ್ಯ ಕಾರಣಗಳಿಂದ ಅನ್ನೋ ಮಾತಿತ್ತು. . ದುಡ್ಡು ಸಂಪಾದಿಸೋಕೆ ಆಗದಿದ್ದಾಗ ಭಿಕ್ಷೆ ಬೇಡುತ್ತಿದ್ದರು. ಭಿಕ್ಷುಕರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಾರೆ ಅನ್ನೋ ಕಾಲವಿತ್ತು. ಜನ ನಾಚಿಕೆ, ಅನಿವಾರ್ಯತೆಯಿಂದ ಭಿಕ್ಷೆ ಬೇಡ್ತಿದ್ರು. ಹೀಗೆ ಹೊಟ್ಟೆ ತುಂಬಿಸಿಕೊಳ್ಳೋಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆದ್ರೆ ಕಾಲಕ್ರಮೇಣ ಭಿಕ್ಷೆ ಬೇಡೋದು ಒಂದು ವ್ಯಾಪಾರ ಆಗಿ ಬದಲಾಗಿದೆ. ಈಗ ಜನ ವೃತ್ತಿಪರ ಭಿಕ್ಷುಕರಾಗಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಕೆಲವು ಸಮೀಕ್ಷೆಗಳು ಮತ್ತು ಭಿಕ್ಷುಕರನ್ನ ಬಂಧಿಸುವ ಕಾರ್ಯಾಚರಣೆಯಲ್ಲಿ ವಿಚಾರಣೆ ನಡೆಸಿದಾಗ ಹೊರಬಿದ್ದ ಅಂಕಿಅಂಶಗಳು ಎಲ್ಲರನ್ನೂ ಅಚ್ಚರಿಗೊಳಿಸಿವೆ. ಹಲವು ಸಂಗತಿಗಳು ಬೆಳಕಿಗೆ ಬಂದಿವೆ. ಈ ಆಂಕಿ ಅಂಶಗಳು ತಿಂಗಳಿಗೆ ಸಂಬಂಳ ಪಡೆಯುವ ವೃತ್ತಿಪರರನ್ನೇ ನಾಚಿಸುವಂತಿದೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಭಾರತದ ಶ್ರೀಮಂತ ಭಿಕ್ಷುಕರಿದ್ದಾರೆ ಅನ್ನೋದು ಬಹಿರಂಗವಾಗಿದೆ. ಇಲ್ಲಿನ ಭಿಕ್ಷುಕರ ಮಾಸಿಕ ಸಂಪಾದನೆ ಗೊತ್ತಾದರೆ ಅಚ್ಚರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Latest Videos


ಅಧಿಕಾರಿಗಳಿಗೆ ಶಾಕ್

ಲಕ್ನೋದಲ್ಲಿ DUDA, ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಮೀಕ್ಷೆ ನಡೆಸಿದೆ. ನಗರದ ಐದು ಸಾವಿರಕ್ಕೂ ಹೆಚ್ಚು ಭಿಕ್ಷುಕರನ್ನ ವಿಚಾರಣೆ ಮಾಡಲಾಗಿದೆ. ಸರ್ಕಾರದ ಯೋಜನೆಗಳ ಲಾಭ ಕೊಡೋಕೆ ಈ ಸಮೀಕ್ಷೆ ಮಾಡಲಾಗಿತ್ತು. ಆದ್ರೆ ಹಲವು ಸಂಗತಿಗಳು ಹೊರಬಿದ್ದು ಅಧಿಕಾರಿಗಳಿಗೆ ಶಾಕ್ ಕೊಟ್ಟಿವೆ. ಹಲವು ಭಿಕ್ಷುಕರಿಂದ ಪಾನ್ ಕಾರ್ಡ್ ಮತ್ತು ಸ್ಮಾರ್ಟ್‌ಫೋನ್‌ಗಳು ಸಿಕ್ಕಿವೆ. ನಗರದ ಹಲವು ಭಿಕ್ಷುಕರು ತಿಂಗಳಿಗೆ ತೊಂಬತ್ತು ಸಾವಿರಕ್ಕೂ ಹೆಚ್ಚು ಸಂಪಾದಿಸುತ್ತಾರೆ ಅಂತ ಗೊತ್ತಾಗಿದೆ.  ವಿಶೇಷ ಅಂದರೆ ವೀಕೆಂಡ್‌ನಲ್ಲಿ ಈ ಭಿಕ್ಷುಕರು ಭಿಕ್ಷೆ ಬೇಡುವುದಿಲ್ಲ. ವೀಕೆಂಡ್‌ನಲ್ಲಿ ರಿಲ್ಯಾಕ್ಸ್ ಆಗುತ್ತಾರೆ.

ಬಂಪರ್ ಭಿಕ್ಷೆ

ಪುರುಷರಿಗಿಂತ ಮಹಿಳೆಯರು ಹೆಚ್ಚು ಭಿಕ್ಷೆ ಬೇಡ್ತಾರೆ ಅಂತ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಗರ್ಭಿಣಿಯರು ಅಥವಾ ಮಡಿಲಲ್ಲಿ ಮಗುವಿರೋ ಮಹಿಳೆಯರು ಹೆಚ್ಚು ಭಿಕ್ಷೆ ಪಡೆಯುತ್ತಾರೆ. ಅವರ ದಿನದ ಸಂಪಾದನೆ ಮೂರು ಸಾವಿರದಿಂದ ಐದು ಸಾವಿರದವರೆಗೆ. ಇದಲ್ಲದೆ ಊಟ, ಬಟ್ಟೆಗಳನ್ನ ಜನ ಉಚಿತವಾಗಿ ಕೊಡ್ತಾರೆ. ಚಾರ್ಬಾಗ್‌ನಲ್ಲಿ ಹೆಚ್ಚು ಭಿಕ್ಷುಕರಿದ್ದಾರೆ. ಇಲ್ಲಿ ಒಬ್ಬ ಭಿಕ್ಷುಕ ತನ್ನ ಖಾತೆಯಲ್ಲಿ ಲಕ್ಷಗಟ್ಟಲೆ ಹಣ ಇಟ್ಟಿದ್ದಾನೆ. ಸರ್ಕಾರದ ಯೋಜನೆಗಳ ಲಾಭ ಬೇಡ ಅಂತ ಅಧಿಕಾರಿಗಳಿಗೆ ಹೇಳಿದ್ದಾನೆ. ಭಿಕ್ಷೆ ಬೇಡೋಕೆ ಮಾತ್ರ ಅವಕಾಶ ಕೊಡಿ ಅಂತ ಕೇಳಿದ್ದಾನೆ.

click me!