ಕಪ್ಪು ಚಿರತೆ ಕರಿ ಚಿರತೆ ಅಥವಾ ಬ್ಲ್ಯಾಕ್ ಪಾಂಥೇರ್ ಎಂದು ಕರೆಯಲ್ಪಡುವ ಈ ಚಿರತೆಗಳು ಚಿರತೆಯ ತಳಿಗೆ ಸೇರಿದ್ದ ಪ್ರಾಣಿಯೇ ಆಗಿದ್ದು, ಅನುವಂಶೀಯವಾದ ಬಣ್ಣಗಳ ರೂಪಾಂತರದಿಂದ ಈ ಕಪ್ಪು ಚಿರತೆಗಳು ರೂಪುಗೊಳ್ಳುತ್ತವೆ. ಇವು ಹೆಚ್ಚಿನ ಕಪ್ಪು ವರ್ಣದ್ರವ್ಯಗಳನ್ನು ಹೊಂದಿರುತ್ತವೆ.
210
Black panther photos by Shaazjung
ಆಫ್ರಿಕಾ, ಏಷ್ಯಾದ ದೇಶಗಳು ಹಾಗೂ ದಕ್ಷಿಣ ಅಮೆರಿಕಾದಲ್ಲಿ ಈ ಕಪ್ಪು ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಚಿರತೆಗಳ ಈ ಫೋಟೋ ಸೆರೆ ಹಿಡಿದಿರುವ ಶಾಜ್ ಮೂಲತಃ ಮುತ್ತಿನ ನಗರಿ ಹೈದರಾಬಾದ್‌ನವರು.
310
Black panther photos by Shaazjung
ಇವರು ಸೆರೆ ಹಿಡಿಯುವ ಪ್ರತಿಯೊಂದು ಫೋಟೊವೂ ಪ್ರಾಣಿ ಪ್ರೇಮಿಗಳಿಗೆ ವನ್ಯಜೀವಿಗಳ ವೈಭವವನ್ನು ತೋರಿಸುತ್ತಿರುತ್ತದೆ. ಇವರ ಇನ್ಸ್ಟಾಗ್ರಾಮ್‌ನಲ್ಲಿ ವಜ್ಯಜೀವಿಗಳ ವೈಭವವನ್ನೇ ಕಾಣಬಹುದು
410
Black panther photos by Shaazjung
ಈ ಹಿಂದೆ ಇವರು ಕಬಿನಿಯಲ್ಲೇ ಸಾಯಾ ಎಂಬ ಚಿರತೆಯ ಸುಂದರ ಫೋಟೋಗಳ ಸೆರೆ ಹಿಡಿದು ಸುದ್ದಿಯಾಗಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ ತಾವು ಸೆರೆ ಹಿಡಿದ ಸುಂದರ ಫೋಟೋಗಳನ್ನು ಇವರು ಪೋಸ್ಟ್ ಮಾಡುತ್ತಿರುತ್ತಾರೆ.
510
Black panther photos by Shaazjung
ಸಿನಿಮಾಟೋಗ್ರಾಪರ್ ಆಗಿರುವ ಇವರು, ವನ್ಯಜೀವಿ ಪ್ರೇಮಿಯೂ ಆಗಿದ್ದು, ಚಿರತೆಗಳ ಹಿಂಬಾಲಿಸಿ ಸುಂದರ ಫೋಟೋ ಚಿತ್ರಿಸುವುದರಲ್ಲಿ ಎತ್ತಿದ ಕೈ ಇವರ ಕೈಯಲ್ಲಿ ಕ್ಯಾಮರಾಗಳು ಮಂತ್ರದಂಡದಂತೆ ಮ್ಯಾಜಿಕ್ ಸೃಷ್ಟಿಸುತ್ತವೆ.
610
Black panther photos by Shaazjung
ಸಿನಿಮಾಟೋಗ್ರಾಪರ್ ಆಗಿರುವ ಇವರು, ವನ್ಯಜೀವಿ ಪ್ರೇಮಿಯೂ ಆಗಿದ್ದು, ಚಿರತೆಗಳ ಹಿಂಬಾಲಿಸಿ ಸುಂದರ ಫೋಟೋ ಚಿತ್ರಿಸುವುದರಲ್ಲಿ ಎತ್ತಿದ ಕೈ ಇವರ ಕೈಯಲ್ಲಿ ಕ್ಯಾಮರಾಗಳು ಮಂತ್ರದಂಡದಂತೆ ಮ್ಯಾಜಿಕ್ ಸೃಷ್ಟಿಸುತ್ತವೆ.
710
Black panther photos by Shaazjung
ಇವರು ಸೆರೆ ಹಿಡಿದ ಚಿರತೆ ಸಾಯಾ ಫೋಟೋಗಳು ವೈರಲ್ ಆದ ನಂತರ ಇಡೀ ಜಗತ್ತು ಇವರ ಕ್ಯಾಮರಾ ಕೈ ಚಳಕ ನೋಡಿ ಬೆರಗಾಗಿತ್ತು. ಇವರು ತೆಗೆಯುವ ಫೋಟೋಗಳು ಒಂದಕ್ಕಿಂತ ಒಂದು ಸುಂದರ
810
Shaazjung
ಹೈದರಾಬಾದ್‌ನ ಪ್ರತಿಷ್ಠಿತ ಫೈಗಾ ಕುಟುಂಬಕ್ಕೆ ಸೇರಿರುವ ಶಾಜ್ ಅವರಿಗೆ ಈ ಫೋಟೋಗ್ರಾಪಿ ಕಲೆ ವಂಶವಾಹಿಯಾಗಿ ಬಂದಿದೆ. ನ್ಯಾಷನಲ್ ಜಿಯೋಗ್ರಾಫಿಗೂ ಇವರು ಫೋಟೋಗ್ರಾಫಿ ಮಾಡುತ್ತಾರೆ.
910
Shaaz Jung photography Black Panther
ಎಲ್ಲಾ ವನ್ಯಜೀವಿಗಳ ಮೇಲೆ ಇವರಿಗೆ ಆಸಕ್ತಿ ಇದ್ದರೂ, ಚಿರತೆ ಇವರ ನೆಚ್ಚಿನ ಪ್ರಾಣಿ, ಕಪ್ಪು ಚಿರತೆಯ ಸಾಮಾನ್ಯವಾಗಿ ಕಾಣ ಸಿಗುವ ಚುಕ್ಕಿ ಇರುವ ಚಿರತೆಯ ವಿವಿಧ ಭಂಗಿಗಳನ್ನು ಇವರು ಸೆರೆ ಹಿಡಿದಿದ್ದಾರೆ.
1010
Shaaz Jung photography Black Panther
ಬರೀ ಚಿರತೆ ಮಾತ್ರವಲ್ಲದೇ, ಇತರ ವನ್ಯಜೀವಿಗಳಾದ, ಹುಲಿ, ನವಿಲು, ಜಿಂಕೆ, ಸಿಂಹ ಒಂಟೆ ಹಾಗೂ ಪ್ರಕೃತಿಯ ಸುಂದರ ಫೋಟೋಗಳನ್ನು ತೆಗೆದಿದ್ದು, ಒಂದಕ್ಕಿಂತ ಒಂದು ಸುಂದರವಾಗಿದೆ.