ಕೊರೋನಾತಂಕ ನಡುವೆ ರೆಡ್‌ಲೈಟ್ ಏರಿಯಾ ಓಪನ್!
First Published | Jul 30, 2020, 5:53 PM ISTಕೆಲವೇ ತಿಂಗಳಲ್ಲಿ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳನ್ನು ಕಂಗೆಡಿಸಿದೆ. ಅಮೆರಿಕದಂತ ಬಲಿಷ್ಟ ರಾಷ್ಟ್ರವೂ ಈ ಮಹಾಮಾರಿಗೆ ಬೆಚ್ಚಿ ಬಿದ್ದಿದೆ. ಎಲ್ಲೆಡೆ ಮೃತದೇಹಗಳಿವೆ. ಕಣ್ಣಿಗೆ ಕಾಣದ ಈ ವೈರಸ್ ಯಾರ ದೇಹವನ್ನು ಬೇಕಾದ್ರೂ ಪ್ರವೇಶಿಸುವ ಕ್ಷಮತೆ ಹೊಂದಿದೆ. ಇದರಿಂದ ರಕ್ಷಿಸಿಕೊಳ್ಳಲು ಸದ್ಯ ಯಾವುದೇ ಹಾದಿ ಇಲ್ಲ. ಅನೇಕ ರಾಷ್ಟ್ರಗಳು ಲಸಿಕೆ ಹುಡುಕುವ ಪ್ರಯತ್ನದಲ್ಲಿದ್ದಾರೆ, ಆದರೆ ಇದು ಈವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ಇದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್ ಹೇರಿದ್ದವು. ಸದ್ಯ ಈ ಲಾಕ್‌ಡೌನ್‌ನ್ನು ನಿಧಾನವಾಗಿ ತೆರವುಗೊಳಿಸಲಾರಂಭಿಸಿದ್ದಾರೆ. ಹೀಗಿರುವಾಗ ಭಾರತದಲ್ಲಿ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ನೂತನ ಮಾರ್ಗಸೂಚಿ ಅನ್ವಯ ಆಗಸ್ಟ್ 5ರಿಂದ ಜಿಮ್ ತೆರೆಯಲು ಅವಕಾಶ ನೀಡಿದೆ. ಆದರೆ ಇವೆಲ್ಲರದ ನಡುವೆ ಪುಣೆಯಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ರೆಡ್ಲೈಟ್ ಏರಿಯಾ ತೆರೆಯಲಾಗಿದೆ. ಕೊರೋನಾ ಪ್ರಕರಣಗಳು ದಾಖಲಾಗದ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಹೀಗಾಗೇ ವಿಭಿನ್ನ ರಾಜ್ಯಗಳಲ್ಲಿರುವ ಸೆಕ್ಸ್ ವರ್ಕರ್ಸ್ ಸದ್ಯ ಪುಣೆ ಕಡೆ ಮುಖ ಮಾಡಿದ್ದಾರೆ. ಹಾಗಾದ್ರೆ ಬೇರೆ ರಾಜ್ಯಗಳು ರೆಡ್‌ಲೈಟ್ ಏರಿಯಾ ಯಾಕೆ ತೆರೆದಿಲ್ಲ? ಹಾಗೂ ತೆರೆಯಲಾದ ರೆಡ್‌ಲೈಟ್ ಏರಿಯಾ ಯಾವುದು? ಇಲ್ಲಿದೆ ವಿವರ