ಈ ಬಾರಿ ಲೆಹೆರಿಯಾ ಟರ್ಬನ್ ಮೂಲಕ ಮಿಂಚಿದ ಪ್ರಧಾನಿ ಮೋದಿ: ಇದರ ಹಿಂದಿದೆ ಕುತೂಹಲ ಕತೆ!

First Published | Aug 15, 2024, 10:49 AM IST

78ನೇ ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ ಲೆಹೆರಿಯಾ ಟರ್ಬನ್ ಧರಿಸಿ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಟರ್ಬನ್ ವಿಶೇಷತೆ ಏನು?

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಲವು ವಿಶೇಷತೆಗಳು ಮೇಳೈಸಿದೆ. ಕೆಲ ಮಹತ್ತರ ಬದಲಾವಣೆಯನ್ನು ಮಾಡಲಾಗಿದೆ. ಪ್ರಮುಖವಾಗಿ ಬುಲೆಟ್ ಪ್ರೂಫ್ ಗಾಜು ತೆರವುಗೊಳಿಸಿ ಭಾಷಣ ಮಾಡುವ ಪ್ರಕ್ರಿಯೆ ಮೋದಿ ಆರಂಭಿಸಿದ್ದಾರೆ. ಇದರ ಜೊತೆಗೆ ಮೋದಿ ತಮ್ಮ ಡ್ರೆಸ್ ಮೂಲಕವೂ ಭಾರಿ ಚರ್ಚೆಯಾಗುತ್ತಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಪ್ರತಿ ಬಾರಿ ನರೇಂದ್ರ ಮೋದಿ ವಿಶೇಷ ಟರ್ಬನ್ ಮೂಲಕ ಮಿಂಚುತ್ತಾರೆ. ಈ ಬಾರಿ ಮೋದಿ ಲೆಹೆರಿಯಾ ಟರ್ಬನ್ ಮೂಲಕ ಕಂಗೊಳಿಸಿದ್ದಾರೆ. 

Latest Videos


78ನೇ ಸ್ವಾತಂತ್ರ್ಯ ದಿನಾಚರಣೆಗೆ ಮೋದಿ ಧರಿಸಿದ್ದು ರಾಜಸ್ಥಾನದ ಲೆಹೆರಿಯಾ ಟರ್ಬನ್. ಇದು ರಾಜಸ್ಥಾನದ ಭೌಗೋಳಿಕ ಹಿರಿಮೆಯನ್ನು ಸಾರುವ ಟರ್ಬನ್ ಆಗಿದೆ.

ಹೌದು ಲೆಹೆರಿಯಾ ಟರ್ಬನ್ ಪ್ರಮುಖವಾಗಿ ಮರುಭೂಮಿಯಲ್ಲಿ ಬೀಸುವ ಗಾಳಿ ಹಾಗೂ ಅದರಿಂದ ಮರಳಿಲ್ಲಿ ಸೃಷ್ಟಿಯಾಗುವ ಗೆರೆಗಳನ್ನು ಪ್ರತಿಬಿಂಬಿಸುತ್ತದೆ.

ಹಲವು ಬಣ್ಣಗಳಲ್ಲಿ ಲೆಹೆರಿಯಾ ಟರ್ಬನ್ ಲಭ್ಯವಿದೆ. ಪ್ರತಿ ಲೆಹೆರಿಯಾ ಟರ್ಬನ್‌ಗಳಲ್ಲಿ ವಿವಿಧ ಬಣ್ಣಗಳ ಗೆರೆಗಳನ್ನು ಕಾಣಬಹುದು. ಈ ಬಾರಿ ಮೋದಿ ಕಡು ಕೇಸರಿಯಲ್ಲಿ ಹಸಿರು ಹಾಗು ಹಳದಿ ಬಣ್ಣದ ಗೆರೆ ಟರ್ಬನ್ ಧರಿಸಿದ್ದಾರೆ.

ಪ್ರಿಟೆಂಟ್ ಲೆಹೆರಿಯಾ ಟರ್ಬನ್ ಜೊತೆಗೆ ಮೋದಿ ಬಿಳಿ ಬಣ್ಣದ ಕುರ್ತಾ ಮೇಲೆ ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಈ ಮೂಲಕ ಮತ್ತೆ ಮೋದಿ ತಮ್ಮ ಉಡುಪಿನಲ್ಲಿ ಭಾರತೀಯತೆಯನ್ನು ಮೆರೆದಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ವೇಳೆ ಮೋದಿ, ರಾಜಸ್ಥಾನದ ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಟರ್ಬನ್‌ಗಳನ್ನೇ ಹೆಚ್ಚಾಗಿ ಧರಿಸಿದ್ದಾರೆ. ಬಣ್ಣಬಣ್ಣ, ಅತ್ಯಾಕರ್ಷಕ ಟರ್ಬನ್‌ಗಳಲ್ಲಿ ರಾಜಸ್ಥಾನವೇ ಅತ್ಯಂತ ಅಗ್ರಗಣ್ಯ.

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಮೋದಿ ರಾಜಸ್ಥಾನದ ಕಂಟೆಂಪರಿರಿ ಟರ್ಬನ್ ಧರಿಸಿ ಮಿಂಚಿದ್ದರು. ಪ್ರತಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮೋದಿ ಟರ್ಬನ್ ಧರಿಸಿದ್ದಾರೆ. 

ಕೆಲವು ಬಾರಿ ಕೇಸರಿ ಟರ್ಬನ್, ಹಳದಿ ಮಿಶ್ರಿತ, ಪ್ರಿಂಟೆಡ್ ಸೇರಿದಂತೆ ಕರಕುಶಲ ವೈಶಿಷ್ಠ್ಯದ ಟರ್ಬನ್ ಧರಿಸಿ ಮಿಂಚಿದ್ದಾರೆ. ಇದೀಗ ಲೆಹರಿಯಾ ಮೂಲಕ ಮತ್ತೊಮ್ಮೆ ಮೋದಿ ಕಂಗೊಳಿಸಿದ್ದಾರೆ. 

click me!