ಬಾಯ್‌ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಭೀಕರ ಘಟನೆ ಬೆಳಕಿಗೆ

Published : Feb 24, 2026, 09:45 PM IST

ಬಾಯ್‌ಫ್ರೆಂಡ್ ಎದುರೇ 8 ಕಾಮುಕರಿಂದ ಯುವತಿ ಮೇಲೆ ಅತ್ಯಾ**ರ, ಕಾರಿನಲ್ಲಿ ಬಂದು ಅಡ್ಡಗಟ್ಟಿ ಚಾಕು ಹಿಡಿದು ಕೃತ್ಯ ಎಸಗಿದ್ದಾರೆ. ಬಳಿಕ ಯುವತಿಯಿಂದ 10 ಸಾವಿರ ರೂಪಾಯಿ ಕಿತ್ತುಕೊಂಡ ಘಟನೆ ಬೆಳಕಿಗೆ ಬಂದಿದೆ. 

PREV
15
ಯುವತಿ ಮೇಲೆರಗಿದ 8 ಕಾಮುಕರು

ಬಾಯ್‌ಫ್ರೆಂಡ್ ಜೊತೆ ಕಾರಿನಲ್ಲಿ ಕುಳಿತಿರುವಾಗ 8 ಮಂದಿಯ ತಂಡ ಮಹೀಂದ್ರ ಥಾರ್ ಮೂಲಕ ಆಗಮಿಸಿ ಜೋಡಿಗಳ ಮೇಲೆ ದಾಳಿ ಮಾಡಿದೆ. 8 ಮಂದಿಯ ಪೈಕಿ ಕೆಲವರು ಬಾಯ್‌ಫ್ರೆಂಡ್ ಹಿಡಿದರೆ, ಮತ್ತೆ ಕೆಲವರು ಯುವತಿಯನ್ನು ಹಿಡಿದು ಸಾಮೂಹಿಕ ಅತ್ಯಾ**ರ ಎಸಗಿದ ಘಟನೆ ಅಸ್ಸಾಂ ರಾಜಧಾನಿ ಗುವ್ಹಾಟಿಯಲ್ಲಿ ನಡೆದಿದೆ.

25
ಸಂತ್ರಸ್ತೆಯಿಂದ ದೂರು

ಸಿಲ್ಚಾರ್ ಪಟ್ಟಣದಿಂದ ಕೆಲ ಕಿಲೋಮೀಟರ್ ದೂರದಲ್ಲಿರುವ ಬೈಪಾಸ್ ರಸ್ತೆ ಬಳಿಕ ಕಾರಿನಲ್ಲಿರುವಾಗ ಈ ದಾಳಿ ನಡೆದಿದೆ. ದಾಳಿ ನಡೆಸಿದ 8 ಮಂದಿ ಜೋಡಿಗಳನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಬಾಯ್‌ಫ್ರೆಂಡ್ ಗಟ್ಟಿಯಾಗಿ ಹಿಡಿದು ಚಾಕು ಮುಂದಿಟ್ಟು ಬೆದರಿಸಿದ್ದಾರೆ. ಇತ್ತ ಗೆಳತಿ ಮೇಲೆ ನಿರಂತರ ಸಾಮೂಹಿಕ ಅತ್ಯಾ**ರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಕೃತ್ಯ ಎಸಗಿದ ಬಳಿಕ ಯುವತಿ ಬಳಿ ಇದ್ದ 10 ಸಾವಿರ ರೂಪಾಯಿ ಕಿತ್ತು ಪರಾರಿಯಾಗಿದ್ದಾರೆ.

35
ಇಬ್ಬರು ಅರೆಸ್ಟ್

ಈ ಘಟನೆ ನಡೆದಿರುವುದು ಫೆಬ್ರವರಿ 19ರಂದು. ದೂರಿನ ಬಳಿಕ ತನಿಖೆ ಆರಂಭಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ. ಈ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದಾರೆ. ನಿಲೋಟಪಲ್ ದಾಸ್(25) ಹಾಗೂ ಸುಬೋಲ್ ದಾಸ್ (25) ಬಂಧಿತ ಆರೋಪಿಗಳು. ಇನ್ನುಳಿದ 6 ಮಂದಿ ತಲೆಮರೆಸಿಕೊಂಡಿದ್ದಾರೆ.

45
ಭುಗಿಲೆದ್ದ ಆಕ್ರೋಶ

ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸಂತ್ರಸ್ತೆ ಕುಟುಂಬಸ್ಥರು ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇಂತಹ ಘಟನೆ ಇನ್ನೆಂದು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆರೋಪಿಗಳ ನಮ್ಮ ಕೈಗೆ ನೀಡಿ ಎಂದು ಆಗ್ರಹಿಸಿದ್ದಾರೆ.

55
ಎನ್‌ಕೌಂಟರ್‌ಗೆ ಆಗ್ರಹ

ರಾಜಕೀಯ ನಾಯಕರು, ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ತ್ರಿಣಮೂಲ ನಾಯಕ, ರಾಜ್ಯಸಭಾ ಸಂಸದಾ ಸುಶ್ಮಿತ್ ದೇವ್ ಈ ಘಟನೆ ಖಂಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕ್ರೌರ್ಯಕ್ಕೆ ತಕ್ಕ ಶಿಕ್ಷೆಯಾಗಬೇಕು. ಆರೋಪಿಗಳ ಎನ್‌ಕೌಂಟರ್ ಮಾಡುವಂತೆ ಆಗ್ರಹ ಕೇಳಿಬರುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories