ಜೈಲಿನಿಂದ ಹೊರಗೆ ಬಂದ ಅರವಿಂದ್ ಕೇಜ್ರಿವಾಲ್ ಸಂಭ್ರಮ ಹೇಗಿತ್ತು? ಫೋಟೋಗಳಲ್ಲಿ ನೋಡಿ

First Published | Sep 14, 2024, 9:27 AM IST

ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆಯಾದರು. ಅವರನ್ನು ಸ್ವಾಗತಿಸಲು AAP ನಾಯಕರು ಮತ್ತು ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು.

ಅರವಿಂದ ಕೇಜ್ರಿವಾಲ್ ಜೈಲಿನಿಂದ ಹೊರಬಂದಾಗ ಅವರ ಬೆಂಬಲಿಗರು "ಜೈಲಿನ ಬೀಗ ಮುರಿದು, ಕೇಜ್ರಿವಾಲ್ ಬಿಡುಗಡೆ" ಎಂದು ಘೋಷಣೆಗಳನ್ನು ಕೂಗಿದರು. ದೆಹಲಿ ಸಿಎಂ ತಮ್ಮ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದರು.

ಕೇಜ್ರಿವಾಲ್ ಜೈಲಿನಿಂದ ಹೊರಬಂದಾಗ ಮಳೆ ಬರುತ್ತಿತ್ತು. ಕೇಜ್ರಿವಾಲ್ ಅವರೊಂದಿಗೆ ಅವರ ಪತ್ನಿ ಸುನೀತಾ ಕೇಜ್ರಿವಾಲ್, AAP ನಾಯಕರಾದ ಮನೀಶ್ ಸಿಸೋಡಿಯಾ, ಆತಿಶಿ, ಸಂಜಯ್ ಸಿಂಗ್ ಮತ್ತು ಭಗವಂತ್ ಮಾನ್ ಇದ್ದರು.

Tap to resize

ಅರವಿಂದ ಕೇಜ್ರಿವಾಲ್ ಕಾರಿನ ಸನ್‌ರೂಫ್‌ನಲ್ಲಿ ನಿಂತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ರೋಡ್ ಶೋ ನಡೆಸಿ ಮನೆಗೆ ತೆರಳಿದರು. ಅರವಿಂದ್ ಕೇಜ್ರಿವಾಲ್ ಮನೆ ತಲುಪವರೆಗೂ ಆಪ್  ಕಾರ್ಯಕರ್ತರು  ಘೋಷಣೆಗಳು ಕೂಗಿದರು.

'ಭಾರತ್ ಮಾತಾ ಕಿ ಜೈ', 'ವಂದೇ ಮಾತರಂ' ಮತ್ತು 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಗಳೊಂದಿಗೆ ಅರವಿಂದ ಕೇಜ್ರಿವಾಲ್ ತಮ್ಮ ಭಾಷಣವನ್ನು ಆರಂಭಿಸಿದರು. ಅವರು ತಮ್ಮ ಆಶೀರ್ವಾದಕ್ಕಾಗಿ ದೆಹಲಿ ಜನತೆಗೆ ಧನ್ಯವಾದ ಅರ್ಪಿಸಿದರು.

ಕೇಜ್ರಿವಾಲ್ ಅವರನ್ನು ಸ್ವಾಗತಿಸಲು ಬಂದಿದ್ದ ಭಗವಂತ್ ಮಾನ್, ಮನೀಶ್ ಸಿಸೋಡಿಯಾ ಮತ್ತು ಇತರ ನಾಯಕರು ಟ್ರಕ್‌ನಲ್ಲಿ ನಿಂತಿದ್ದರು. ಭಾರೀ ಮಳೆಯಲ್ಲಿ ಸಂಪೂರ್ಣವಾಗಗಿ ನೆನೆದರು.

ದೆಹಲಿ ಮದ್ಯ ಹಗರಣದ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ED ಮತ್ತು ನಂತರ ಜೂನ್‌ನಲ್ಲಿ CBI ಬಂಧಿಸಿತ್ತು.

ಮೊದಲು ED ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಶುಕ್ರವಾರ CBI ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಇದಾದ ಬಳಿಕ ಅರವಿಂದ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾದರು.

ನವೆಂಬರ್ 2021 ರಲ್ಲಿ, ದೆಹಲಿ ಸರ್ಕಾರ ಹೊಸ ಮದ್ಯ ನೀತಿಯನ್ನು ಜಾರಿಗೆ ತಂದಿತ್ತು. ಇದರಲ್ಲಿ ದೆಹಲಿ ಸರ್ಕಾರ ಮದ್ಯದ ಚಿಲ್ಲರೆ ಮಾರಾಟದಿಂದ ಹಿಂದೆ ಸರಿದು ಖಾಸಗಿ ಪರವಾನಗಿದಾರರಿಗೆ ಅಂಗಡಿಗಳನ್ನು ನಡೆಸಲು ಅವಕಾಶ ನೀಡಿತು.

ತಮ್ಮ ಆಪ್ತ ಉದ್ಯಮಿಗಳಿಗೆ ಅಕ್ರಮವಾಗಿ ಲಾಭ ಮಾಡಿಕೊಡಲಾಗಿದೆ ಎಂದು AAP ಸರ್ಕಾರದ ಮೇಲೆ ಆರೋಪ ಕೇಳಿಬಂದಿತ್ತು. ಇದಕ್ಕೆ ಪ್ರತಿಯಾಗಿ ಭಾರಿ ಲಂಚ ಪಡೆಯಲಾಗಿದೆ ಎನ್ನಲಾಗಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಕರಣದ ತನಿಖೆ ನಡೆಸಲು CBIಗೆ ಸೂಚಿಸಿದರು. ಸೆಪ್ಟೆಂಬರ್ 2022 ರಲ್ಲಿ, ರಾಜ್ಯ ಸರ್ಕಾರ ಹೊಸ ನೀತಿಯನ್ನು ಹಿಂಪಡೆದು ಹಳೆಯ ನೀತಿಯನ್ನು ಮರುಸ್ಥಾಪಿಸಿತು.

Latest Videos

click me!