ಚೆನ್ನೈನ ಅಯನಾವರಂನಲ್ಲಿ ಮಾನಸಿಕ ಅಸ್ವಸ್ಥ ಯುವತಿ ಮಹಿಳಾ ಕಾಲೇಜಿನಲ್ಲಿ 3ನೇ ವರ್ಷದಲ್ಲಿ ಓದುತ್ತಿದ್ದಾರೆ. ತಾಯಿ ತೀರಿಕೊಂಡಿದ್ದರಿಂದ ತಂದೆಯ ಆರೈಕೆಯಲ್ಲಿದ್ದಾರೆ. ಈ ನಡುವೆ ಮಗಳಿಗೆ ಆರೋಗ್ಯದಲ್ಲಿ ಏರುಪೇರಾದಾಗ ತಂದೆ ಕೇಳಿದ್ದಾರೆ, ಆಗ, ತನ್ನ ಜೊತೆ ಓದುತ್ತಿದ್ದ ಗೆಳತಿಯ ಮೂಲಕ ಪರಿಚಯವಾದ ಸ್ನೇಹಿತರು ಆಗಾಗ ಹೊರಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ಹೇಳಿದ್ದಾಳೆ. ಈ ಬಗ್ಗೆ ಅಯನಾವರಂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು 8 ಜನರನ್ನು ಪೊಲೀಸರು ಎಚ್ಚರಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ರಾಜಕೀಯ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.