ಕೆಲಸಕ್ಕೆ ಮಹತ್ವ ಕೊಟ್ಟ ಮೋದಿ: ಸಮೋಸಾ, ಕೇಕ್‌ ತಿನ್ನೋದ್ರಲ್ಲಿ ಬ್ಯುಸಿಯಾದ ನಾಯಕರು ಫುಲ್ ಟ್ರೋಲ್!

First Published | Sep 23, 2021, 1:11 PM IST

ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಷಿಂಗ್ಟನ್ ಡಿಸಿ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಈ ವೇಳೆ ಅನಿವಾಸಿ ಭಾರತೀಯರು ಮೋದಿಯನ್ನು ನೋಡಲು ವಿಮಾನ ನಿಲ್ದಾಣದ ಬಳಿ ಭಾರೀ ಪ್ರಮಾಣದಲ್ಲಿ ನೆರೆದಿದ್ದರು. ಈ ವೇಳೆ ಏರ್‌ಪೋರ್‌ ಹೊರಭಾಗದಲ್ಲಿ ಕೇವಲ ಮೋದಿ-ಮೋದಿ ಎಂಬ ಧ್ವನಿಯಷ್ಟೇ ಕೇಳಿ ಬರುತ್ತಿತ್ತು. ಇನ್ನು ಇದಕ್ಕೂ ಮುನ್ನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೆಗೆದ ಪ್ರಧಾನಿ ಮೋದಿಯ ಫೋಟೋ ಒಂದು ಭಾರೀ ವೈರಲ್ ಆಗಿದೆ. ಈ ಫೋಟೋ ಶೇರ್ ಮಾಡಿಕೊಂಡಿರುವ ಪಿಎಂ ಮೋದಿ 'ದೀರ್ಘ ಕಾಲದ ವಿಮಾನದ ಪ್ರಯಾಣ ಪೇಪರ್ ವರ್ಕ್‌ ಹಾಗೂ ಕೆಲ ಫೈಲ್‌ ಪರಿಶೀಲನೆಗೆ ಸಮಯ ಮಾಡಿಕೊಡುತ್ತದೆ' ಎಂದಿದ್ದಾರೆ. ಪಿಎಂ ಮೋದಿಗೆ ಕೆಲಸದ ಮೇಲಿರುವ ಶ್ರದ್ಧೆಗೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಇದೇ ವೇಳೆ ಇನ್ನಿತರ ಕೆಲ ನಾಯಕರ ವಿಮಾನ ಪ್ರಯಾಣದ ಚಿತ್ರಗಳನ್ನು ಸಹ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಮೋದಿ ಹಾಗೂ ಇನ್ನುಳಿದ ನಾಯಕರಿಗಿರುವ ವ್ಯತ್ಯಾಸ ಇದೇ ಎಂಬ ಸಂದೇಶದಲ್ಲಿ ವೈರಲ್ ಆಗುತ್ತಿವೆ.

ಮೊದಲ ಚಿತ್ರದಲ್ಲಿ, ಪ್ರಧಾನಿ ಮೋದಿ ತಮ್ಮ ಅಮೆರಿಕ ಭೇಟಿಯ ವೇಳೆ ವಿಮಾನದಲ್ಲಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಈ ಚಿತ್ರವನ್ನು ಸ್ವತಃ ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಈ ಚಿತ್ರಕ್ಕೆ ಡೆವಲಪರ್ ಎಂದು ನೆಟ್ಟಿಗರು ಶೀರ್ಷಿಕೆ ನೀಡಿದ್ದಾರೆ. ಎರಡನೇ ಚಿತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರದ್ದು. ಈ ಹಳೆಯ ಚಿತ್ರಕ್ಕೆ ಟೇಸ್ಟರ್ ಎಂದು ನೆಟ್ಟಿಗರು ಶೀರ್ಷಿಕೆ ನೀಡಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿ ಪ್ರಯಾಣದ ವೇಳೆ ಸಮೋಸಾ ತಿನ್ನುತ್ತಿರುವ ದೃಶ್ಯವಿದೆ.

ಪ್ರಧಾನಿ ನರೇಂದ್ರ ಮೋದಿ ಕಳೆದ 7 ವರ್ಷಗಳಲ್ಲಿ ಒಂದೇ ಒಂದು ದಿನ ರಜೆ ತೆಗೆದುಕೊಂಡಿಲ್ಲ ಎಂದು ಇತ್ತೀಚೆಗೆ ಬಹಿರಂಗಗೊಂಡಿತ್ತು. ಅವರು ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದೂ ಹೇಳಲಾಗಿದೆ. ಇನ್ನು ವೈರಲ್ ಆಗುತ್ತಿರುವ ಎರಡನೇ ಚಿತ್ರದಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರು ಪ್ರಯಾಣದ ಮಧ್ಯೆ ವಿಶ್ರಾಂತಿ ಪಡೆಯುವ ದೃಶ್ಯವಿದೆ.

Tap to resize

ಇನ್ನು ವೈರಲ್ ಆಗುತ್ತಿರುವ ಮತ್ತೊಂದು ಫೋಟೋ ಮಾಜಿ ದಿವಂಗತ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಪ್ರಧಾನಿ ಮೋದಿಯದ್ದಾಗಿದೆ. ಈ ಮೂಲಕ ನೆಹರೂ ಹಾಗೂ ಮೋದಿ ಕೆಲಸಕ್ಕೆಷ್ಟು ಮಹತ್ವ ನೀಡಿದ್ದಾರೆ ಎಂಬ ಧಾಟಿಯಲ್ಲಿ ಫೋಟೋ ಶೇರ್ ಮಾಡಲಾಗುತ್ತಿದೆ.

ಇನ್ನು ಭಾರತದ ಮಾಜಿ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಫೋಟೋ ಜೊತೆಗೂ ಮೋದಿ ಫೊಟೋ ಹೋಲಿಸಲಾಗುತ್ತಿದೆ. ಈ ಮೂಲಕ ಇಬ್ಬರು ನಾಯಕರ ಕೆಲಸದ ಮೇಲಿನ ಶ್ರದ್ಧೆ ಶ್ಲಾಘಿಸಲಾಗುತ್ತಿದೆ.

Teaswi

ಇನ್ನು ವೈರಲ್ ಆಗುತ್ತಿರುವ ಮತ್ತೊಂದು ಫೊಟೋದಲ್ಲಿ ಬಿಹಾರದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿಮಾನದಲ್ಲಿ ಕೇಕ್‌ ಕತ್ತರಿಸುತ್ತಿರುವ ದೃಶ್ಯಗಳಿವೆ. 

ಥಿಂಕಿಂಗ್ ಹ್ಯಾಟ್ ಎಂಬ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ನಂತರ ಭಯೋತ್ಪಾದನೆ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ಉತ್ತಮ ಸಂಬಂಧದಿಂದ ಪಾಕಿಸ್ತಾನಕ್ಕೆ ತೊಂದರೆಯಾಗಿದೆ. ಇನ್ನು ದಕ್ಷಿಣ ಏಷ್ಯನ್ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್) ದೇಶಗಳ ವಿದೇಶಾಂಗ ಮಂತ್ರಿಗಳ ಸಭೆಯನ್ನು ಸೆಪ್ಟೆಂಬರ್ 25 ರವರೆಗೆ ರದ್ದುಗೊಳಿಸಲಾಗಿದೆ ಎಂಬುವುದು ಉಲ್ಲೇಖನೀಯ. ಸುದ್ದಿ ಸಂಸ್ಥೆ ANI ಯ ಮೂಲಗಳ ಪ್ರಕಾರ, ಪಾಕಿಸ್ತಾನವು ಈ ಸಭೆಯಲ್ಲಿ ತಾಲಿಬಾನ್ ಪ್ರತಿನಿಧಿಸುವಂತೆ ಪ್ರಯತ್ನಿಸುತ್ತಿದೆ. ಆದರೆ ಭಾರತ ಮತ್ತು ಇತರ ದೇಶಗಳು ಇದಕ್ಕೆ ಅವಕಾಶ ನೀಡಲಿಲ್ಲ ಎನ್ನಲಾಗಿದೆ. 

Latest Videos

click me!