ಮಹಾಕುಂಭದಲ್ಲಿ ಏಲಿಯನ್‌ಗಳ ಆಗಮನ; ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್‌ಗಳು

Published : Jan 25, 2025, 02:59 PM IST

ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಏಲಿಯನ್‌ಗಳು ಮಹಾಕುಂಭ ಮೇಳಕ್ಕೆ ಆಗಮಿಸಿದ ರೀತಿಯಲ್ಲಿ ಫೋಟೋಗಳನ್ನು ಕ್ರಿಯೇಟ್ ಮಾಡಲಾಗಿದೆ.

PREV
16
ಮಹಾಕುಂಭದಲ್ಲಿ ಏಲಿಯನ್‌ಗಳ ಆಗಮನ; ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್‌ಗಳು

ಜಗತ್ತಿನ ಅತಿದೊಡ್ಡ ಮೇಳ ಎಂದೇ ಜನಪ್ರಿಯವಾಗಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಜನರು ಭಾಗಿಯಾಗುತ್ತಿದ್ದಾರೆ. ನದಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ

26

ಪ್ರಪಂಚದ ಮೂಲೆ ಮೂಲೆಯಿಂದಲೂ ಭಕ್ತರು ಮಹಾಕುಂಭಕ್ಕೆ ಇನ್ನು ಬರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಹಾಕುಂಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

36

ಇಂದು AI ತಂತ್ರಜ್ಞಾನದಿಂದ ಹಲವು ಫೋಟೋಗಳನ್ನು ಕ್ರಿಯೇಟ್ ಮಾಡಲಾಗುತ್ತದೆ. ಇದೀಗ AIನಿಂದ ಏಲಿಯನ್‌ಗಳು ಮಹಾಕುಂಭ ಮೇಳಕ್ಕೆ ಆಗಮಿಸಿದ ರೀತಿಯಲ್ಲಿ ಫೋಟೋ ಕ್ರಿಯೇಟ್ ಮಾಡಲಾಗಿದೆ. ಏಲಿಯನ್‌ ಗಳು ಪುಣ್ಯಸ್ನಾನ, ಪೂಜೆ ಮಾಡುವ ರೀತಿಯಲ್ಲಿ ಫೋಟೋಗಳನ್ನು ಕ್ರಿಯೇಟ್ ಮಾಡಲಾಗಿದೆ. 

46

ಏಲಿಯನ್‌ಗಳು ಭಕ್ತಿಭಾವದಿಂದ ನಗುತ್ತಾ ಮಹಾಕುಂಭ ಮೇಳದಲ್ಲಿ ಭಾಗಿಯಾಗಿವೆ. ನಾಗಾ ಸಾಧುಗಳ ಜೊತೆಯಲ್ಲಿಯೂ ಏಲಿಯನ್‌ಗಳಿರೋದನ್ನು ವೈರಲ್ ಆಗಿರುವ ಫೋಟೋಗಳಲ್ಲಿ ನೋಡಬಹುದಾಗಿದೆ. 

56

ಜ.29ಕ್ಕೆ ಮಹಾಕುಂಭ
ಜ.29ರ ಮೌನಿ ಅಮಾವಾಸ್ಯೆಯಂದು 10 ಕೋಟಿ ಜನ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡುವ ನಿರೀಕ್ಷೆಯಿದೆ. ಯಾತ್ರಿಕರ ಸುರಕ್ಷತೆ, ಜನದಟ್ಟನೆ ಮತ್ತು ಸಂಚಾರ ವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

66

ಅಮೃತ ಸ್ನಾನ /ಶಾಹಿ ಸ್ನಾನ
ಮಹಾಕುಂಭ ಮೇಳದಲ್ಲಿ ಕೆಲವು ವಿಶೇಷ ದಿನಗಳ ಸ್ನಾನವನ್ನು ‘ಅಮೃತ ಸ್ನಾನ /ಶಾಹಿ ಸ್ನಾನ’ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿ, ಪುಷ್ಯ ಹುಣ್ಣಿಮೆ ಬಳಿಕ ಮೌನಿ ಅಮಾವಾಸ್ಯೆ ಅಂಥ 3ನೇ ವಿಶೇಷ ದಿನವಾಗಿದೆ. ನಂತರ ಫೆ.3ರಂದು ಬಸಂತ ಪಂಚಮಿ, ಫೆ.12ರಂದು ಮಾಘಿ ಪೂರ್ಣಿಮಾ ಹಾಗೂ ಫೆ.26ರ ಶಿವರಾತ್ರಿಯಂದೂ ಶಾಹಿ ಸ್ನಾನಗಳು ನಡೆಯಲಿವೆ.

click me!

Recommended Stories