ಏರ್ ಇಂಡಿಯಾ ಗಗನಸಖಿ, ಪೈಲೆಟ್‌ಗೆ ಮನೀಶ್ ಮಲ್ಹೋತ್ರಾ ಕೈಚಳದ ಹೊಸ ಸಮವಸ್ತ್ರ!

First Published | Dec 13, 2023, 5:45 PM IST

ಟಾಟಾ ಸಮಹೂದ ಏರ್ ಇಂಡಿಯಾ ಮಾಲೀಕತ್ವ ಪಡೆದ ಬಳಿಕ ಹಲವು ಬದಲಾವಣೆ ಮಾಡಿದೆ. ವಿಮಾನ ಸೇವೆಯಿಂದ ಹಿಡಿದು ಬಹುತೇಕ ವಿಭಾಗದಲ್ಲಿ ಬದಲಾವಣೆಯಾಗಿದೆ. ಇದೀಗ ಏರ್ ಇಂಡಿಯಾ ಸಿಬ್ಬಂದಿಗಳ ಯೂನಿಫಾರ್ಮ್ ಬದಲಿಸಿದೆ. ಭಾರತೀಯ ಸಂಪ್ರದಾಯಕ್ಕೆ ತಕ್ಕಂತೆ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರ ಯೂನಿಫಾರ್ಮ್ ಡಿಸೈನ್ ಮಾಡಿದ್ದಾರೆ.

ಏರ್ ಇಂಡಿಯಾ ಹೊಸ ಸಮವಸ್ತ್ರಗಳನ್ನು ಬಿಡುಗಡೆ ಮಾಡಿದೆ. ಕ್ಯಾಬಿನ್ ಕ್ರೂ,ಕಾಕ್‌ಪಿಟ್ ಸಿಬ್ಬಂದಿಗಳಿಗೆ ಏರ್ ಇಂಡಿಯಾ ಹೊಸ ಯೂನಿಫಾರ್ಮ್ ಪರಿಚಯಿಸಿದೆ.

ಹಂತ ಹಂತವಾಗಿ ಈ ಸಮವಸ್ತ್ರಗಳನ್ನು ಏರ್ ಇಂಡಿಯಾ ಜಾರಿಗೊಳಿಸಲಿದೆ. A350 ಏರ್‌ಬಸ್ ಸಿಬ್ಬಂದಿಗಳಿಗೆ ಮೊದಲ ಹಂತದಲ್ಲಿ ಈ ಯೂನಿಫಾರ್ಮ್ ನೀಡಲಿದೆ.

Tap to resize

ಏರ್ ಇಂಡಿಯಾ ಗಗನಸಖಿಯರಿಗೆ ಭಾರತೀಯ ಸಂಪ್ರದಾಯ ಉಡುಗೆ ಸೀರೆಯಲ್ಲಿ ವಿಶೇಷ ಡಿಸೈನ್ ಮಾಡಲಾಗಿದೆ. ಇನ್ನು ಪುರುಷಕರಿಗೆ ಸ್ಯೂಟ್ ಡಿಸೈನ್ ಮಾಡಲಾಗಿದೆ. 

ಕಾಕ್‌ಪಿಟ್ ಸಿಬ್ಬಂದಿಗಳಾದ ಪೈಲೆಟ್ಸ್, ಕೋ ಪೈಲೆಟ್‌ಗಳಿಗೆ  ಕೋಟ್ ರೀತಿಯ ಡಿಸೈನ್ ಮಾಡಲಾಗಿದೆ. ಇದೀಗ ಈ ಹೊಸ ಸಮವಸ್ತ್ರಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
 

ಏರ್ ಇಂಡಿಯಾ ಹೊಸ ಸಮವಸ್ತ್ರಗಳನ್ನು ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರ ವಿನ್ಯಾಸಗೊಳಿಸಿದ್ದಾರೆ. ಭಾರತದ ವಿವಿದ ಉಡುಗೊ ತೊಡುಗೆ, ವಿವಿದ ಸಂಸ್ಕ್ರತಿಗಳ ಆಧಿರಿಸಿ ಹೊಸ ಯೂನಿಫಾರ್ಮ್ ವಿನ್ಯಾಸಗೊಳಿಸಿದ್ದಾರೆ.

ಸಾಂಪ್ರದಾಯಿಕ ಉಡುಗೆ, ಮಾಡರ್ನ್ ಟಚ್ ನೀಡಿ ಹೊಸ ಸಮವಸ್ತ್ರ ವಿನ್ಯಾಸ ಮಾಡಲಾಗಿದೆ. ಏರ್ ಇಂಡಿಯಾ ಹೊಸ ಸಮವಸ್ತ್ರ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಭಾರತದ ವಿವೈದ್ಯಮಯ ಸಂಸ್ಕೃತಿ ಮತ್ತು ಸಂಪ್ರದಾಯದವನ್ನು ಗಮನದಲ್ಲಿಟ್ಟುಕೊಂಡು ಡಿಸೈನ್ ಮಾಡಿದ್ದೇನೆ. ಆಧುನಿಕತೆ ಹಾಗೂ ಸಂಪ್ರದಾಯ ಎರಡರ ಮಿಶ್ರಣ ಇದಾಗಿದೆ ಎಂದು ಮನೀಶ್ ಮಲ್ಹೋತ್ರ ಹೇಳಿದ್ದಾರೆ.

ಈ ಸಮವಸ್ತ್ರ ಏರ್ ಇಂಡಿಯಾ ಸಿಬ್ಬಂದಿಗಳಿಗೆ ಹೆಮ್ಮೆಯ ಭಾವನೆ ಮೂಡಿಸುತ್ತದೆ ಅನ್ನೋ ವಿಶ್ವಾಸ ನನ್ನದು. ಅತ್ಯುತ್ತಮ ಆತಿಥ್ಯ ನೀಡುತ್ತಿರುವ ಏರ್ ಇಂಡಿಯಾ ಹೊಸ ಸಮವಸ್ತ್ರದ ಮೂಲಕ ಮತ್ತಷ್ಟು ಯಸಸ್ಸು ಕಾಣಲಿ ಎಂದು ಮನೀಶ್ ಹಾರೈಸಿದ್ದಾರೆ. 
 

Latest Videos

click me!