ಅದಾರ್ ಪೂನಾವಾಲಾ ಅವರ ತಂದೆ ಬಿಲಿಯನೇರ್ ಸೈರಸ್ ಪೂನವಲ್ಲ. ಪೂನವಲಾ ಕುಟುಂಬವು ಮುಂಬೈನಲ್ಲಿ ಲಿಂಕನ್ ಹೌಸ್ ಎಂಬ ಬೃಹತ್ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದು ಅಲ್ಟಾಮೌಂಟ್ ರಸ್ತೆಯಲ್ಲಿ ನೆಲೆಗೊಂಡಿವೆ. ಇದು ನಗರದ ರಿಯಲ್ ಎಸ್ಟೇಟ್ ಸ್ವರ್ಗವಾಗಿದೆ. 50,000 ಚದರ ಅಡಿಯಲ್ಲಿ ಈ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಲಿಂಕನ್ ಹೌಸ್ ಅನ್ನು 1933 ರಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಕ್ಲೌಡ್ ಬ್ಯಾಟ್ಲಿ ವಿನ್ಯಾಸಗೊಳಿಸಿದರು, ಇದನ್ನು ಮೂಲತಃ ವಾಂಕನೇರ್ ಮಹಾರಾಜ, HH ಸರ್ ಅಮರಸಿಂಹಜಿ ಬನೆಸಿನ್ಹ್‌ಜಿ ಮತ್ತು ಅವರ ಮಗ ಪ್ರತಾಪ್ಸಿನ್ಹ್‌ಜಿ ಝಾಲಾಗಾಗಿ ನಿರ್ಮಿಸಲಾಯಿತು. ಸೆಪ್ಟೆಂಬರ್ 2015 ರಲ್ಲಿ, ಸೈರಸ್ ಪೂನವಲ್ಲ ಅವರು ಲಿಂಕನ್ ಹೌಸ್ ಅನ್ನು ಖರೀದಿಸಿದರು.