ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗೂ ಪ್ರತ್ಯೇಕ ಮತಪೆಟ್ಟಿಗೆ ಇಡಲಾಗಿತ್ತು. 24,73,850 ಲೋಹದ ಪೆಟ್ಟಿಗೆಗಳು ಮತ್ತು 1,11,095 ಮರದ ಪೆಟ್ಟಿಗೆಗಳನ್ನು ದೇಶಾದ್ಯಂತ ಮತಗಟ್ಟೆಗಳಿಂದ ಮತಪತ್ರಗಳನ್ನು ಸಂಗ್ರಹಿಸಲು ಬಳಸಲಾಗಿತ್ತು. 1951ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕೆಲವು ಮತಪೆಟ್ಟಿಗೆಗಳಲ್ಲಿ ಕುಂಕುಮ, ಅಕ್ಕಿ ಮತ್ತು ಹೂವುಗಳು ಕಂಡುಬಂದವು. ಕೆಲವು ಮತದಾರರು ಚುನಾವಣೆ ಅನ್ನೋದು ದೈವಿಕಾರ್ಯ ಎನ್ನುವಂತೆ ಕಂಡಿದ್ದರು ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು.