ಹಿಮಾಚಲದ ರಾಜಧಾನಿ ಶಿಮ್ಲಾದಲ್ಲಿ ಪ್ರಿಯಾಂಕಾ ಗಾಂಧಿ ಮನೆ ಇದೆ. ಆಗಸ್ಟ್‌ನಲ್ಲಿ ಅವರು ಈ ಮನೆಗೆ ತೆರಳಿದ್ದು, ತನ್ನ ಮಗನ ಹುಟ್ಟುಹಬ್ಬವನ್ನೂ ಆಚರಿಸಿದ್ದರು. ಸದ್ಯ ಕಂಗನಾ ರನಾವತ್ ಮನೆ ವಿವಾದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿಯ ಮನೆಯನ್ನೂ ಕೆಡವಿ ಹಾಕಲು ಕೂಗೆದ್ದಿದೆ.
ಹಿಮಾಚಲ ಪ್ರದೇಶದ ಮಂಡೀ ಜಿಲ್ಲೆಯವರಾದ ಕಂಗನಾರ ಮುಂಬೈ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪದಡಿಯಲ್ಲಿ ಬಿಎಂಸಿ ಅದರ ಒಂದು ಭಾಗವನ್ನು ಕೆಡವಿ ಹಾಕಿದೆ. ಹೀಗಿರುವಾಗ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪ್ರಕರಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಹಿಮಾಚಲ ಪ್ರದೇಶದಲ್ಲಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ಅಕ್ರಮವಾಗಿ ನಿರ್ಮಿಸಲಾಗಿರುವ ಮನೆಯನ್ನೂ ಧ್ವಂಸಗೊಳಿಸುವಂತೆ ಆಗ್ರಹಿಸಿದ್ದಾರೆ.
ಹಿಮಾಚಲ ರಾಜಧಾನಿ ಶಿಮ್ಲಾದಲ್ಲಿ ಪ್ರಿಯಾಂಕಾ ಗಾಂಧಿಯ ಮನೆ ಇದೆ. ಆಗಸ್ಟ್‌ನಲ್ಲಿ ಅವರು ಅಲ್ಲಿಗೆ ತೆರಳಿದ್ದಾರೆ. ಇಲ್ಲೇ ಅವರು ತನ್ನ ಮಗನ ಹುಟ್ಟುಹಬ್ಬವನ್ನೂ ಆಚರಿಸಿದ್ದರು. ಅವರೊಂದು ಗಂಡ ರಾಬರ್ಟ್ ವಾದ್ರಾ ಕೂಡಾ ಇದ್ದರು.
ಸಾಮಾನ್ಯವಾಗಿ ರಾಹುಲ್ ಗಾಂಧಿ ಹೊರತುಪಡಿಸಿ ಸೋನಿಯಾ ಗಾಂಧೀ ಕೂಡಾ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಸುಮಾರು ನಾಲ್ಕೂವರೆ ಭೀಘಾ ಜಮೀನಿನಲ್ಲಿ ಪ್ರಿಯಾಂಕಾ ತಮ್ಮ ಮನೆಯನ್ನು 2008 ರಲ್ಲಿ ನಿರ್ಮಿಸಲು ಆರಂಭಿಸಿದ್ದರು. ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕ ಕೆಹರ್ ಸಿಂಗ್ ಖಾಜಿ ಹೆಸರಲ್ಲಿ ಈ ಜಮೀನಿನ ಪವರ್ ಆಫ್ ಅಟಾರ್ನಿಯೂ ಇದೆ.
2011ರಲ್ಲಿ ಎರಡು ಅಂತಸ್ತು ನಿರ್ಮಿಸಿದ ಬಳಿಕ ಡಿಸೈನ್ ಇಷ್ಟವಾಗಲಿಲ್ಲವೆಂದು ಇದನ್ನು ಕೆಡವಲಾಗಿತ್ತು.
ಪ್ರಿಯಾಂಕಾ ಗಾಂಧಿಗೆ ಈ ಮನೆ ನಿರ್ಮಿಸಲು ಅಂದಿನ ಕಾಂಗ್ರೆಸ್ ಸರ್ಕಾರ ಲ್ಯಾಂಡ್ ರಿಫಾರ್ಮ್ಸ್ ಆಕ್ಟ್ ಸೆಕ್ಷನ್ 118ನ್ನು ಸಡಿಲಗೊಳಿಸಿತ್ತು. ಈ ಸೆಕ್ಷನ್ ಅನ್ವಯ ಹಿಮಾಚಲದ ಹೊರಗಿನವರ ಜಮೀನು ಖರೀದಿಸಲು ಸಾಧ್ಯವಿರಲಿಲ್ಲ. 2007ರಲ್ಲಿ ಈ ಜಮೀನಿನ ಮಾರುಕಟ್ಟೆ ಮೌಲ್ಯ ಪರತಿ ಬೀಘಾಗೆ ಒಂದು ಕೋಟಿ ರೂ. ಇತ್ತು. ಆದರೆ ಪ್ರಿಯಾಂಕಾಗೆ ಮನೆ ನಿರ್ಮಿಸಲು ನಾಲ್ಕು ಬೀಘಾ ಜಮೀನನ್ನು ಕೇವಲ 47 ಲಕ್ಷ ರೂಪಾಯಿಗೆ ನೀಡಲಾಗಿತ್ತು.
ಪ್ರಿಯಾಂಕಾರ ಈ ಮನೆ ಶಿಮ್ಲಾದಿಂದ 13 ಕಿ. ಮೀ ದೂರ ಹಾಗೂ ಸಮುದ್ರ ಮಟ್ಟದಿಂದ 8 ಸಾವಿರ ಅಡಿ ಎತ್ತರದಲ್ಲಿದೆ. ಈ ಮನೆಯನ್ನು ಗುಟ್ಟಗಾಡು ಶೈಲಿಯಲ್ಲಿ ನಿರ್ಮಿಸಲಾಗಿದೆ.