ಆಸ್ಪತ್ರೆಗೆ ಸೇರಿಸಲು ವೈದ್ಯರ ನಕಾರ, ನರಳಾಡ್ತಾ ಪ್ರಾಣ ಬಿಟ್ಟ ತುಂಬು ಗರ್ಭಿಣಿ!

First Published Jun 6, 2020, 3:48 PM IST

ಕೊರೋನಾ ಸಂಕಷ್ಟದ ನಡುವೆ ನೊಯ್ಡಾದಲ್ಲಿ ಮಾನವರು ತಲೆ ತಗ್ಗಿಸುವ ಘಟನೆ ವರದಿಯಾಗಿದೆ. ಇಲ್ಲಿ 8 ತಿಂಗಳ ಗರ್ಭಿಣಿ ಚಿಕಿತ್ಸೆ ಸಿಗದೇ ನರಳಾಡುತ್ತಾ ಪ್ರಾಣ ಬಿಟ್ಟಿದ್ದಾಳೆ. ಇಲ್ಲಿನ ಆಸ್ಪತ್ರೆಗಳು ಆಕೆಯನ್ನು ದಾಖಲಿಸಲು ಹಿಂದೆ ಸರಿದ ಪರಿಣಾಮ ಇಂತಹ ದುರಂತ ಸಂಭವಿಸಿದೆ. ಮೃತ ಮಹಿಳೆಯ ಅನಾರೋಗ್ಯದಿಂದ ಬಳಲುತ್ತಿದ್ದ ಹೆಂಡತಿಗೆ ಚಿಕಿತ್ಸೆ ಕೊಡಿಸಲು ಪತಿ ರಾತ್ರಿ ಇಡೀ ಒಂದಾದ ಬಳಿಕ ಮತ್ತೊಂದು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೆ ಯಾರೊಬ್ಬರೂ ಚಿಕಿತ್ಸೆ ನೀಡಲು ಮುಂದಾಗದ ಪರಿಣಾಮ ಗರ್ಭಿಣಿ ಮಹಿಳೆ ಆಂಬುಲೆನ್ಸ್‌ನಲ್ಲೇ ಕೊನೆಯುಸಿರೆಳೆದಿದ್ದಾಳೆ.

ಈ ಘಟನೆ ನೊಯ್ಡಾದ ಖೋಡಾದಲ್ಲಿ ನಡೆದಿದೆ. ಇಲ್ಲಿನ ಮಹಿಳೆಯೊಬ್ಬಳು ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ಆದರೆ ಶುಕ್ರವಾರ ಸಂಜೆ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ಆಕೆಯ ಗಂಡ ಕೂಡಲೇ ಆಂಬುಲೆನ್ಸ್‌ಗೆ ಫೋನ್ ಮಾಡಿದ್ದಾರೆ ಹಾಗೂ ಕೂಡಲೇ ಜಿಲ್ಲಾಸ್ಪಪತ್ರೆಗೆ ಕರೆದೊಯ್ದಿದ್ದಾರೆ.
undefined
ಆದರೆ ಉಸಿರಾಟದ ಸಮಸ್ಯೆ ಎಂದು ಜಿಲ್ಲಾಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಇದಾದ ಬಳಿಕ ಗಂಡ ತನ್ನ ಹೆಂಡತಿಯನ್ನು ಬೇರೊಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲೂ ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.
undefined
ಪತಿ ಹೇಳುವ ಅನ್ವಯ ಅವರು ತನ್ನ ಹೆಂಡತಿಯನ್ನು ಎರಡು ಆಸ್ಪತ್ರೆಗಳಿಗೆ ಕರೆದೊಯ್ದಿದ್ದು, ಎರಡೂ ಕಡೆ ಚಿಕಿತ್ಸೆಗೆ ನಿರಾಕರಿಸಿದ್ದಾರೆ. ಹೀಗಿರುವಾಗ ಹೆಂಡತಿ ಉಸಿರಾಡಲಾಗದೇ ಆಂಬುಲೆನ್ಸ್‌ನಲ್ಲೇ ಕೊನೆಯುಸಿರೆಳರೆದಿದ್ದಾಳೆ.
undefined
ಇನ್ನು ಗರ್ಭಿಣಿಯನ್ನು ವೈದ್ಯರೆಲ್ಲರೂ ದೂರದಿಂದಲೇ ನೋಡಿ ಹಿಂದೆ ಸರಿದಿದ್ದಾರೆ. ತನ್ನ ಹೆಂಡತಿಗೆ ಕೊರೋನಾ ವೈರಸ್ ಇದೆ ಎಂದು ವೈದ್ಯರು ಹೀಗೆ ನಡೆದುಕೊಂಡರು. ಹೀಗಾಗಿ ಚಿಕಿತ್ಸೆ ಕೊಡಲೂ ಮುಂದೆ ಬರಲಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
undefined
ಇನ್ನು ಇಲ್ಲಿನ ಜಿಲ್ಲಾಧಿಕಾರಿ ಸುಹಾನ್ ಎಲ್‌ ವೈ ಗರ್ಭಿಣಿ ಮಹಿಳೆಯ ಸಾವಿನ ತನಿಖೆ ನಡೆಸಲು ಆದೇಶಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
undefined
click me!