ಕೋರೋನಾ ಮಹಾದೇವನ ಚಮತ್ಕಾರ, ಇಲ್ಲಿ ಒಬ್ಬರಿಗೂ ಸೋಂಕಿಲ್ಲ!

First Published Jun 3, 2020, 5:21 PM IST

ಇಡೀ ವಿಶ್ವದಲ್ಲಿ ಈವರೆಗೆ ಕೊರೋನಾ ನಿವಾರಿಸಬಲ್ಲ ಔಷಧಿ ಸಿಕ್ಕಿಲ್ಲ. ಆದರೆ ಭಾರತದ ಹಲವೆಡೆ  ಈ ಸಂಬಂಧ ಮೂಢನಂಬಿಕೆ ಹೆಚ್ಚಾಗಿದೆ.. ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯಲ್ಲಿ ಮಹಾಮಾರಿಯಿಂದ ಕಾಪಾಡಿಕೊಳ್ಳಲು ಶಿವನ ಮಂದಿರ ನಿರ್ಮಿಸಲಾಗಿದೆ. ಇದನ್ನು ಜನರು ಕೊರೋನಾ ಮಹಾದೇವ್ ಮಂದಿರ ಎಂದು ಕರೆಯಲಾರಂಭಿಸಿದ್ದಾರೆ. ಇದು ಬೈತೂಲ್ ಜಿಲ್ಲೆಯಿಂದ ಸುಮಾರು 35ಕಿ. ಮೀ ದೂರದ ಚಿಚೌಲಿ ಕಸ್ಬಾದಲ್ಲಿ ನಡೆದಿದೆ. ಇಲ್ಲಿನ ಓರ್ವ ನಿವೃತ್ತ ಪೊಲೀಸ್ ಆರ್‌ಡಿ ಶರ್ಮಾ ಠಾಣಾ ವ್ಯಾಪ್ತಿಯಲ್ಲಿದ್ದ ಹಳೆಯ ಮಂದಿರದ ಜೀರ್ಣೋದ್ಧಾರ ನಡೆಸಿ ಹೊಸದಾಗಿ ಶಿವನ ಮೂರ್ತಿ ಪ್ರತಿಷ್ಟಾಪಿಸಿದ್ದಾರೆ. 

ಲಾಕ್‌ಡೌನ್ ವೇಳೆ ಮಂದಿರ ನಿರ್ಮಾಣ: ಪೊಲೀಸ್ ಅಧಿಕಾರಿ ಆರ್‌ಡಿ ಶರ್ಮಾ ಈ ಸಂಬಂಧ ಪ್ರತಿಕ್ರಿಯಿಸಿದ್ದು, ನಾನು ಮಢ. 31 ರಂದು ನಿವೃತ್ತನಾಗಲಿದ್ದೆ. ಆದರೆ ಸೇವೆಯಿಂದ ನಿವೃತ್ತಿಯಾಗುವುದಕ್ಕೂ ಮೊದಲೇ ಈ ಮಂದಿರ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡಿದ್ದೆ. ನಿವೃತ್ತಿ ದಿನ ಹತ್ತಿರವಾಗುತ್ತಿತ್ತು. ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಲೇ ಇದನ್ನು ನಿರ್ಮಿಸಿದೆ. ಇಬ್ಬರು ಪಂಡಿತರೊಂದಿಗೆ ಸೇರಿ ವಿಧಿ ವಿಧಾನದ ಅನ್ವಯ ಭಗವಾನ್ ಶಂಕರನನ್ನು ಪ್ರತಿಷ್ಠಾಪಿಸಿದ್ದೇನೆ. ಹೀಗಿರುವಾಗಲೇ ಬೈತೂಲ್‌ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಕೇಳಿ ಬಂದವು. ಆದರೆ ಚಿಚೋಲಿಯಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ ಎಂದಿದ್ದಾರೆ.
undefined
ಮಹಾದೇವ ಜನರನ್ನು ಕಾಪಾಡ್ತಿದ್ದಾರೆ: ಇನ್ನು ಚಿಚೋಲಿಯಲ್ಲಿ ಒಂದೇ ಒಂದು ಕೊರೋನಾ ಪಗ್ರಕರಣ ವರದಿಯಾಗದಾಗ ಜನರು ಇದನ್ನು ಮಹಾದೇವನ ಚಮತ್ಕಾರ ಎಂದು ನಂಬಿದ್ದಾರೆ. ಅವರೆಷ್ಟು ಶ್ರದ್ಧೆಯಿಂದ ಈ ಮಂದಿರದಲ್ಲಿ ಪೂಜೆ ನಡೆಸುತ್ತಾರೆಂದರೆ, ಈ ಶಿವನೇ ತಮ್ಮನ್ನು ಕಾಪಾಡುತ್ತಾನೆ ಎಂಬ ದೃಢ ನಂಬಿಕೆ ಅವರಲ್ಲಿದೆ.
undefined
ಮಹಾದೇವ ಜನರನ್ನು ಕಾಪಾಡ್ತಿದ್ದಾರೆ: ಇನ್ನು ಚಿಚೋಲಿಯಲ್ಲಿ ಒಂದೇ ಒಂದು ಕೊರೋನಾ ಪಗ್ರಕರಣ ವರದಿಯಾಗದಾಗ ಜನರು ಇದನ್ನು ಮಹಾದೇವನ ಚಮತ್ಕಾರ ಎಂದು ನಂಬಿದ್ದಾರೆ. ಅವರೆಷ್ಟು ಶ್ರದ್ಧೆಯಿಂದ ಈ ಮಂದಿರದಲ್ಲಿ ಪೂಜೆ ನಡೆಸುತ್ತಾರೆಂದರೆ, ಈ ಶಿವನೇ ತಮ್ಮನ್ನು ಕಾಪಾಡುತ್ತಾನೆ ಎಂಬ ದೃಢ ನಂಬಿಕೆ ಅವರಲ್ಲಿದೆ.
undefined
ಮಂದಿರ ನಿರ್ಮಿಸಿದ ಕತೆ: ಲಭ್ಯವಾದ ಮಾಹಿತಿ ಅನ್ವಯ ಚಿಚೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಾದೇವನ ಹಳೆ ಮಂದಿರವಿದ್ದು, ಇದು ಒಂದು ಅಶ್ವತ್ಥ ಮರದಡಿಯಲ್ಲಿತ್ತು. ಆದರೆ 2018ರಲ್ಲಿ ಈ ಮರದ ಕೊಂಬೆಯೊಂದು ಮುರಿದು ಮಂದಿರದ ಮೇಲೆ ಬಿದ್ದು, ಮೂರ್ತಿ ತುಂಡಾಯಿತು. ಹೀಗಿರುವಾಗ ಪೊಲೀಸ್ ಅಧಿಕಾರಿ ಇದನ್ನು ಪುನರ್ ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡರು. ಹೀಗಾಗಿ ನಿವೃತ್ತಿ ಪಡೆಯುವ ಹಂತದಲ್ಲಿ ಅವರು ಇದನ್ನು ನಿರ್ಮಿಸುವ ಕೆಲಸ ಆರಂಭಿಸಿದರು.
undefined
ಚಿಚೋಲಿ ಆದಿವಾಸಿಗಳ ಪ್ರಾಬಲ್ಯವಿರುವ ಪ್ರದೇಶ. ಇಲ್ಲಿನ ಜನ ಮಹಾದೇವನ ಆರಾಧಕರು.
undefined
ಫೋಟೋದಲ್ಲಿರುವವರು ನಿವೃತ್ತ ಪೊಲೀಸ್ ಅಧಿಕಾರಿ ಆರರ್‌ಡಿ ಶರ್ಮಾ
undefined
click me!