120 ರೂಪಾಯಿ ದಾಟಿದ ಈರುಳ್ಳಿ; ಬೆಲೆ ಏರಿಕೆಗೆ ಇದೆ 4 ಕಾರಣ!

Published : Oct 23, 2020, 04:56 PM IST

ಮಹಾರಾಷ್ಟ್ರ, ಉತ್ತರ ಕರ್ನಾಟಕ ಭಾಗದಲ್ಲಿನ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಇದೀಗ ದೇಶದಲ್ಲೇ ಈರುಳ್ಳಿ ಬೆಲೆ ಗಗನಕ್ಕೇರಿದೆ. ಪ್ರವಾಹದ ಕಾರಣ ಬೆಳೆ ಮುಳುಗಿ ಹೋಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಈರುಳ್ಳಿ ಬೆಲೆ ಭಾರಿ ಏರಿಕೆಯಾಗಿದೆ.  ಕರ್ನಾಟಕ ಸೇರಿದಂತೆ ದೇಶದ ವಿವಿದ ರಾಜ್ಯಗಳಲ್ಲಿ ಈರುಳ್ಳಿ ಬೆಲೆ 120 ರೂಪಾಯಿ ದಾಟಿದೆ. ಈರುಳ್ಳಿ ಬೆಲೆ ಏರಿಕೆಗೆ ಮಳೆ, ಪ್ರವಾಹದ ಜೊತೆಗೆ ಇನ್ನೂ ನಾಲ್ಕು ಕಾರಣಗಳಿವೆ,  

PREV
18
120 ರೂಪಾಯಿ ದಾಟಿದ ಈರುಳ್ಳಿ; ಬೆಲೆ ಏರಿಕೆಗೆ ಇದೆ 4 ಕಾರಣ!

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಈರುಳ್ಳಿ ಬೆಲೆ 120 ರೂಪಾಯಿ ದಾಟಿದೆ. ಹಬ್ಬದ ಸಂದರ್ಭದಲ್ಲೇ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ

28

ಹವಾಮಾನ ವೈಪರಿತ್ಯ ಈರುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ, ಸೇರಿದಂತೆ ಹಲವು ರಾಜ್ಯಗಳಲ್ಲಿ ಸುರಿದ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಪ್ರವಾಹದಲ್ಲಿ ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಮುಳುಗಿ ಹೋಗಿದೆ.

38

ಬೇಡಿಕೆಗೆ ತಕ್ಕಂತೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಬೆಲೆ ದುಬಾರಿಯಾಗುತ್ತಿದೆ. ಮಳೆಯಿಂದಾಗಿ ರೈತರ ಬಳಿ ಈರುಳ್ಳಿ ಬೆಳೆಗೆ ಬೇಕಾದ ಬೀಜಗಳು ನೀರುಪಾಲಾಗಿದೆ. 

48

ಭಾರತದ ಈರುಳ್ಳಿ ಬೆಳೆಯ ಶೇಕಡಾ 50ರಷ್ಟು ಮಹಾರಾಷ್ಟ್ರ ಒಂದರಲ್ಲೇ ಬೆಳೆಯಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಉಂಟಾದ ಪ್ರವಾಹದಲ್ಲಿ ರೈತರ ಬೆಳೆ ಮಾತ್ರವಲ್ಲ ಬದುಕೇ ಕೊಚ್ಚಿ ಹೋಗಿದೆ.

58

ಹಬ್ಬದ ಋತುವಾಗಿರುವ ಕಾರಣ ಸಹಜವಾಗಿ ಈರುಳ್ಳಿ ಬೆಲೆ ಏರಿಕೆಯಾಗಲಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಬರುವ ಕಾರಣ ಬೆಲೆ ಏರಿಕೆ ಪ್ರತಿ ವರ್ಷ ಸಾಮಾನ್ಯವಾಗಿದೆ. ಈ ಬಾರಿ ಬೇಡಿಕೆ ಜೊತೆಗೆ ಮಳೆ ಹಾಗೂ ಪ್ರವಾಹ ಕೂಡ ಸೇರಿಕೊಂಡಿದೆ.

68

ಕಳೆದ ವರ್ಷ ಡಿಸೆಂಬರ್ ತಿಂಗಳ ವೇಳೆಗೆ ಭಾರತದಲ್ಲಿ ಈ ಈರುಳ್ಳಿ ಬೆಳೆ 150 ರಿಂದ 180 ರೂಪಾಯಿವರೆಗೆ ತಲುಪಿತ್ತು. ಇದೀಗ ದೇಶಾದ್ಯಂತ 120 ರೂಪಾಯಿ ಗಡಿ ದಾಟಿದೆ. 

78

ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡಿದೆ. ಈರುಳ್ಳಿ ಆಮದಿ ಮಾಡಿಕೊಳ್ಳಲು ಇದೀಗ ನಿಯಮ ಕೂಡ ಸಡಿಲ ಮಾಡಲಾಗಿದೆ.

88

ಈಜಿಪ್ಟ್ ಸೇರಿದಂತೆ ಇತರ ದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದೆ. ಆಯಾ ರಾಜ್ಯ ಸರ್ಕಾರಗಳು ನಾಷ್ಯನಲ್ ಅಗ್ರಿಕಲ್ಚರ್ ಕೋಆಪರೇಟಿವ್ ಮಾರ್ಕೆಂಟಿಂಗ್ ಫೆಡರೇಶನ್(Nafed)ನಿಂದ ಟನ್‌ಗಟ್ಟಲೇ ಈರುಳ್ಳಿ ಆಮದು ಮಾಡಿಕೊಂಡು 45 ರಿಂದ 50 ರೂಪಾಯಿ ನಿಗದಿ ಮಾಡಿ ಗ್ರಾಹರಿಗೆ ಪೂರೈಸುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories