4,042 ಅಕ್ಕಿ ಕಾಳಿನ ಮೇಲೆ ಭಗವದ್ಗೀತೆ ಬರೆದ ಸ್ವರಿಕಾ!

First Published Oct 20, 2020, 5:23 PM IST

ಅಕ್ಕಿ ಕಾಳಿನಲ್ಲಿ ಭಗವದ್ಗೀತೆ ಬರೆದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಅಚ್ಚರಿ ಪಡಬೇಡಿ. ಹೈದರಾಬಾದ್ ಮೂಲದ ಯುವತಿಯೊಬ್ಬಳು ಇಂತಹುದ್ದೊಂದು ಸಾಧನೆ ಮಾಡಿ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟಕ್ಕೂ ಯಾರು ಆ ಯುವತಿ? ಇಲ್ಲಿದೆ ಮಾಹಿತಿ

ಹೈದರಾಬಾದ್​ನ ಯುವತಿ, ರಾಮಗಿರಿ ಸ್ವಾರಿಕಾ 4,042 ಅಕ್ಕಿ ಕಾಳುಗಳ ಮೇಲೆ ಭಗವದ್ಗೀತೆ ಬರೆಯುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕಾನೂನು ವಿದ್ಯಾರ್ಥಿನಿಯಾಗಿರುವ ಸ್ವರಿಕಾ, ಮೈಕ್ರೋ ಆರ್ಟ್​ 1800 ಶ್ಲೋಕಗಳಿರುವ ಭಗವದ್ಗೀತೆಯನ್ನು , 150 ಗಂಟೆಯಲ್ಲಿ ಬರೆದಿದ್ದಾರೆ.
undefined
2000ಕ್ಕೂ ಹೆಚ್ಚು ಮೈಕ್ರೋ ಕಲಾಕೃತಿಗಳನ್ನು ರಚಿಸಿರುವ ಸ್ವರಿಕಾ, ಅಕ್ಕಿಯ ಮೇಲೆ ಮೈಕ್ರೋ ಆರ್ಟ್ ಮಾಡುವಾಗ ಭೂತಗನ್ನಡಿಯನ್ನೂ ಬಳಕೆ ಮಾಡೋದಿಲ್ವಂತೆ. ಕೇವಲ ಅಕ್ಕಿ ಮಾತ್ರವಲ್ಲದೇ ಹಾಲು, ಕಾಗದ ಹಾಗೂ ಎಳ್ಳುಗಳನ್ನ ಬಳಕೆ ಮಾಡಿ ಕಲಾಕೃತಿ ರಚಿಸಿದ್ದಾರೆ. ಹಾಲಿನ ಕಲಾಕೃತಿ, ಪೇಪರ್​​ ಕೆತ್ತನೆ ಮುಂತಾದ ಆರ್ಟ್​ಗಳನ್ನೂ ಅವರು ಮಾಡುತ್ತಾರೆ.
undefined
ಇನ್ನು ಈ ಹಿಂದೆ ಕೂದಲನ್ನು ಬಳಸಿ ಸಂವಿಧಾನದ ಮುನ್ನುಡಿ ಬರೆದಿದ್ದರು. ಈ ಸಾಧನೆಗಾಗಿ ತೆಲಂಗಾಣ ಸರ್ಕಾರ ಕೊಡುವ ತೆಲಂಗಾಣದ ಸರ್ಕಾರದ ತಮಿಳಿಸೈ ಸೌಂದರರಾಜನ್ ಪುರಸ್ಕಾರಕ್ಕೆ ಭಾಜನರಾಗಿದ್ರು. 2019ರಲ್ಲಿ ದೆಹಲಿಯ ಸಾಂಸ್ಕೃತಿಕ ಅಕಾಡೆಮಿ ಇವರನ್ನು ಭಾರತದ ಮೊದಲ ಮೈಕ್ರೋ ಆರ್ಟಿಸ್ಟ್​ ಎಂದು ಗುರುತಿಸಿ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ
undefined
ಸದ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಯತ್ನಿಸುತ್ತಿರುವ ನಾನು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ಕಲಾಕೃತಿಗಳನ್ನ ಪ್ರದರ್ಶಿಸುವ ಇರಾದೆ ಹೊಂದಿದ್ದೇನೆ ಅಂತಾರೆ ಕಲಾವಿದೆ ಸ್ವರಿಕಾ.
undefined
ಭಾರತದ ಮೊದಲ ಸೂಕ್ಷ್ಮ ಕಲಾವಿದೆ ಎಂಬ ಹೆಸರು ಪಡೆದಿರುವ ಸ್ವರಿಕಾರನ್ನ 2019ರಲ್ಲಿ ದೆಹಲಿ ಸಾಂಸ್ಕೃತಿಕ ಅಕಾಡೆಮಿ ರಾಷ್ಟೀಯ ಪ್ರಶಸ್ತಿ ನೀಡಿ ಗೌರವಿಸಿದೆ.
undefined
ಅಲ್ಲದೇ 2017ರಲ್ಲಿ ಇಂಟರ್​ನ್ಯಾಷನಲ್​ ಆರ್ಡರ್​ ಬುಕ್​ ಆಫ್​​ ರೆಕಾರ್ಡ್​ ಪ್ರಶಸ್ತಿಯನ್ನೂ ಸ್ವರಿಕಾ ಪಡೆದುಕೊಂಡಿದ್ದಾರೆ.
undefined
click me!