ನಾಗ್ ಮಿಸೈಲ್ ಪರೀಕ್ಷೆ ಯಶಸ್ವಿ : ಇಲ್ಲಿವೆ ಫೋಟೋಸ್

ರಾಜಸ್ಥಾನದ ಪೋಖ್ರಾನ್ ಬಯಲಿನಲ್ಲಿ ಪ್ರಯೋಗ |ನೆಲ ಮತ್ತು ವಾಯುಮಾರ್ಗದಲ್ಲೂ ಕಾರ್ಯನಿರ್ವಹಣೆ

ಭಾರತ ನಾಗ್ ATGM ಯಶಸ್ವಿಯಾಗಿ ಪ್ರಯೋಗ ಮಾಡಿದ್ದಾರೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ನಾಗ್ ಆ್ಯಂಟಿ ಟ್ಯಾಂಗ್ ಗೈಡೆಡ್ ಮಿಸೈಲ್ ವಾರ್‌ಹೆಡ್ ಯಶಸ್ವಿ ಪ್ರಯೋಗವಾಗಿದೆ.
ರಾಜಸ್ಥಾನದ ಪೋಖ್ರಾನ್ ಬಯಲಿನಲ್ಲಿ ಬೆಳಗ್ಗೆ 6.45ಕ್ಕೆ ಪ್ರಯೋಗ ನಡೆಸಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಇದು ಲೇಟೆಸ್ಟ್ ಮಿಸೈಲ್ ಲಾಂಚ್ ಆಗಿದೆ.
ಈ ಹಿಂದೆ ಡಿಆರ್‌ಡಿಒ ಹೈಪರ್‌ಸೋನಿಕ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ವೆಹಿಕಲ್ ಸೆ.07ರಂದು ಟೆಸ್ಟ್ ನಡೆದಿತ್ತು. ನಂತರ ಲಾಂಗ್ ರೇಂಜ್ ಸೂಪರ್ ಸೋನಿಕ್ ಕ್ರೋಝ್ ಮಿಸೈಲ್ ಬ್ರಹ್ಮೋಸ್, ಬಾಲಸ್ಟಿಕ್ ಮಿಸೈಲ್ ಶೌರ್ಯ ರುದ್ರಂ 1 ಪ್ರಯೋಗ ನಡೆದಿತ್ತು.
ನಾಗ್ ಎಟಿಜಿಎಂ: ಮಾರಕ ಆಯುಧ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ ದೇಶಿಯ ಮಿಸೈಲ್ ಇದಾಗಿದೆ.
ಇದನ್ನು ನೆಲ ಮತ್ತು ವಾಯು ಮೂಲಕವೂ ಪ್ರಯೋಗ ಮಾಡಬಹುದಾಗಿದೆ.
4-7 ಕಿ.ಮೀ ರೇಂಜ್‌ನ ಮಿಸೈಲ್ ದೇಶೀಯ ನಿರ್ಮಿತವಾಗಿದ್ದು, ವಿಶ್ವದ ಕೆಲವೇ ರಾಷ್ಟ್ರಗಳು ಹೊಂದಿದ ವಿಶೇಷ ಸಾಮರ್ಥ್ಯವಿದೆ.

Latest Videos

click me!