ಕೊರೋನಾ 2ನೇ ಅಲೆಯಿಂದ ಶೇ.77 ರಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ; ಸಮೀಕ್ಷೆ ಬಹಿರಂಗ!

First Published | Apr 3, 2021, 3:48 PM IST

ದೇಶದಲ್ಲೀಗ ಕೊರೋನಾ 2ನೇ ಅಲೆ ಬೀಸುತ್ತಿದೆ ಅನ್ನೋ ಮಾತು ಬಲಗೊಳ್ಳುತ್ತಿದೆ. ಕಾರಣ ಪ್ರತಿ ದಿನ ದಾಖಲೆಯ ಪ್ರಮಾಣದಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಕೊರೋನಾ ಲಸಿಕೆ ಅಭಿಯಾನ ಆರಂಭವಾದಾಗ ಸರಾಸರಿ 39% ಮಂದಿ ಲಸಿಕೆ ಹಾಕಿಸಿಕೊಳ್ಳಲು ಸಿದ್ಧರಿದ್ದರು. ಆದರೆ 2ನೇ ಅಲೆ ಆರಂಭಗೊಂಡ ಬಳಿಕ ಈ ಸಂಖ್ಯೆ 77ಕ್ಕೇರಿದೆ. ಕುತೂಹಲ ಮಾಹಿತಿ ಕುರಿತ ಸಮೀಕ್ಷೆ ವರದಿ ಇಲ್ಲಿದೆ.

ಕಳೆದ ಮಾರ್ಚ್‌ನಲ್ಲಿ ಭಾರತದಲ್ಲಿ ಕೊರೋನಾ ಆರ್ಭಟ ಆರಂಭಗೊಂಡ ಬಳಿಕ ಲಾಕ್‌ಡೌನ್, ನಿರ್ಬಂಧಗಳು ಸೇರಿದಂತೆ ಹಲವು ನಿಯಮ ಜಾರಿಯಾಗಿತ್ತು. ಬಳಿಕ ಸೆಪ್ಟೆಂಬರ್‌ನಿಂದ ಪ್ರಕರಣ ಇಳಿಕೆಯಾಗಿತ್ತು. ಡಿಸೆಂಬರ್ ವೇಳೆಗೆ ಜನರ ಮನಸ್ಸಿನಿಂದ ಕೊರೋನಾ ದೂರವಾಗಿತ್ತು. ಹೀಗಾಗಿ ಲಸಿಕೆ ಪಡೆಯಲು ಬಹುತೇಕ ಹಿಂಜರಿದ್ದರು.
ಭಾರತದ ಜನವರಿಯಲ್ಲಿ ಲಸಿಕೆ ಅಭಿಯಾನ ಆರಂಭಿಸಿತು. ಆದರೆ ಹೆಚ್ಚಿನವರು ಲಸಿಕೆ ಪಡೆಯುವ ಯಾವುದೇ ಆಸಕ್ತಿ ತೋರಲಿಲ್ಲ. ಇದೀಗ ಕೊರೋನಾ 2ನೇ ಅಲೆ ಆರಂಭಗೊಳ್ಳುತ್ತಿದ್ದಂತೆ ಜನರ ಆತಂಕ ಹೆಚ್ಚಾಗಿದೆ. ಹೀಗಾಗಿ ಶೇಕಡಾ 77 ರಷ್ಟು ಮಂದಿ ಲಸಿಕೆ ಪಡೆಯಲು ಸಿದ್ಧರಾಗಿದ್ದಾರೆ. 2020ರ ಅಕ್ಟೋಬರ್ ತಿಂಗಳಲ್ಲಿ ಕೇವಲ 30 ಶೇಕಡಾ ಜನರು ಮಾತ್ರ ಲಸಿಕೆ ಪಡೆಯಲು ಸಿದ್ಧ ಎಂದಿದ್ದರು ಇದೀಗ ಈ ಸಂಖ್ಯೆ 77ಕ್ಕೇರಿಕೆಯಾಗಿದೆ
Tap to resize

ಲಸಿಕೆಯಿಂದ ತಲೆ ಸುತ್ತು, ಜ್ವರ ಸೇರಿದಂತೆ ಹಲವು ಅಡ್ಡ ಪರಿಣಾಮಗಳು ಇವೆ ಅನ್ನೋ ಆತಂಕ ಬಹುತೇಕರಲ್ಲಿದೆ. ಹೀಗಾಗಿ ಸಮೀಕ್ಷೆಯಲ್ಲಿ ಕೊರೋನಾ ಲಸಿಕೆ ಪಡೆದವರಲ್ಲಿ ಯಾವೆಲ್ಲಾ ಅಡ್ಡ ಪರಿಣಾಮ ನಿಮಗಾಗಿದೆ ಎಂದು ಪ್ರಶ್ನೇ ಕೇಳಲಾಗಿತ್ತು. ಇದಕ್ಕೆ ಶೇಕಡಾ 52ರಷ್ಟು ಮಂದಿ ಯಾವುದೇ ಅಡ್ಡ ಪರಿಣಾಮ ಎದುರಿಸಿಲ್ಲ. ಶೇ.10 ರಷ್ಟು ಮಂದಿ ಜ್ವರ, ತಲೆನೋವು ಸೇರಿದಂತೆ ಸಣ್ಣ ಪ್ರಮಾಣದ ನೋವು ಎದುರಿಸಿದ್ದಾರೆ.
ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ ಯಾವುದು ಪಡೆಯಲು ಇಚ್ಚಿಸತ್ತೀರಿ ಅನ್ನೋ ಪ್ರಶ್ನೆಗೆ ಶೇಕಡಾ 37 ರಷ್ಟು ಯಾವುದಾದರು ಸರಿ ಎಂದಿದ್ದಾರೆ. ಇನ್ನು ಶೇ.33 ರಷ್ಟು ಮಂದಿ ಕೋವಾಕ್ಸಿನ್, ಶೇ.25 ರಷ್ಟು ಮಂದಿ ಕೋವಿಶೀಲ್ಡ್ ಹಾಗೂ ಶೇಕಡಾ 5 ರಷ್ಟು ಹೊಸ ಲಸಿಕೆ ಎಂದಿದ್ದಾರೆ.
ಭಾರತದಲ್ಲಿ ಈಗಾಗಲೇ 6.5 ಕೋಟಿ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಇದೀಗ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿತ್ತು. ಎಲ್ಲಾ ದಿನ ಲಸಿಕೆ ನೀಡಲು ನಿರ್ಧರಿಸಲಾಗಿದೆ.
ಜನವರಿ 16, 2021ರಿಂದ ಭಾರತದಲ್ಲಿ ಲಸಿಕೆ ನೀಡಲು ಆರಂಭಿಸಲಾಗಿದೆ. ಆರಂಭದಲ್ಲಿ ಆಸ್ಪತ್ರೆ ಸಿಬ್ಬಂದಿ, ಕೊರೋನಾ ವಾರಿಯರ್ಸ್, ಫ್ರಂಟ್‌ಲೈನ್ ವಾರಿಯರ್ಸ್‌ಗೆ ಉಚಿತವಾಗಿ ಲಸಿಕೆ ನೀಡಲಾಗಿತ್ತು.
ಇದಾದ ಬಲಿಕ 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಯಿತು. ಎಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.

Latest Videos

click me!