ಪರಸ್ಪರ ಮದುವೆಯಾದ್ರು ಯುವಕರು: ಗೆಳೆಯನನ್ನೇ ವರಿಸಿದ ಗಂಡು!

First Published | Apr 1, 2021, 3:19 PM IST

ಈವರೆಗೆ ಅನೇಕ ಬಗೆಯ ವಿಚಿತ್ರ ಮದುವೆಗಳು ಸದ್ದು ಮಾಡಿವೆ. ಆದರೆ ರಾಜಸ್ಥಾನದ ಭಾಂಸ್‌ವಾಡಾದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಜನರು ಇಬ್ಬರು ಯುವಕರನ್ನು, ವಧು ವರರಂತೆ ಅಲಂಕರಿಸಿ ಮದುವೆ ಮಾಡಿಸಿದ್ದಾರೆ. ಎಲ್ಲಾ ಗ್ರಾಮಸ್ಥರು ಈ ವಿಶೇಷ ಮದುವೆಗೆ ಸಾಕ್ಷಿಯಾಗಿದ್ದರು. ಆದರೆ ಇಂತಹ ವಿಚಿತ್ರ ಮದುವೆಯ ಹಿಂದೆ ಕಾರಣವೊಂದಿತ್ತು. ಈ ಬಗೆಯ ಮದುವೆಯಿಂದ ಇಡೀ ಗ್ರಾಮದಲ್ಲಿ ಸಂತೋಷ ಮನೆ ಮಾಡಿರುತ್ತಂತೆ.

ಈ ಘಟನೆ ನಡೆದಿದ್ದು ಬಾಂಸ್‌ವಾಡಾ ಜಿಲ್ಲೆಯ ಬಡೋದಿಯಾ ಎಂಬ ಹಳ್ಳಿಯಲ್ಲಿ. ಇಲ್ಲಿ ಆದಿವಾಸಿ ಕ್ಷೇತ್ರದ ಜನರು ಹಳ್ಳಿಯ ನೆಮ್ಮದಿ, ಸುಖ, ಸಂತೋಷಕ್ಕಾಗಿ ಈ ವಿಸೇಷ ಪರಂಪರರೆಯನ್ವಯ ಮದುವೆ ನೆರವೇರಿಸಲಾಗಿದೆ. ಅಲ್ಲದೇ ಮಂದಿರದ ಆವರಣದಲ್ಲೇ ಮದುವೆ ಮಂಟಪ ನಿರ್ಮಿಸಿ ಅರ್ಚಕರು ಮಂತ್ರ ಪಠಿಸಿ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿಸಿದ್ದಾರೆ.
ಹಳ್ಳಿ ಜನರು ಯುವಕನಿಗೆ ಹೆಣ್ಣಿನಂತೆ ಸೀರೆಯುಡಿಸಿ, ಅಲಂಕರಿಸಿದ್ದಾರೆ. ಹಣೆಗೆ ಬಿಂದಿ ಹಾಗೂ ಕೈಗಳಿಗೆ ಬಳೆ ತೊಡಿಸಿದ್ದಾರೆ. ಇದಾದ ಬಳಿಕ ರಾತ್ರಿ ವಾದ್ಯಗಳನ್ನು ನುಡಿಸುತ್ತಾ ಅದ್ಧೂರಿಯಾಗಿ ಮಂದಿರಕ್ಕೆ ಕರೆದೊಯ್ದಿದ್ದಾರೆ. ಈ ವಾತಾವರಣ ನೋಡಿದ್ರೆ ಇಲ್ಲಿ ನಿಜವಾದ ಮದುವೆ ನಡೆಯುತ್ತಿದೆ ಎನ್ನುವಷ್ಟು ಅದ್ಧೂರಿಯಾಗಿತ್ತು. ಇದಾದ ಬಳಿಕ ಕುಂಡಕ್ಕೆ ಬೆಂಕಿ ಹಚ್ಚಿ, ಮಂತ್ರಗಳನ್ನು ಪಠಿಸಿ ಮದುವೆ ನೆರವೇರಿಸಲಾಗಿದೆ. ಬಳಿಕ ಯುವಕ ವಧುವಿನ ಬಟ್ಟೆಯಿಂದ ಅಲಂಕೃತನಾದ ಯುವಕನ ಹಣೆಗೆ ಕುಂಕುಮವಿಟ್ಟು, ಮಂಗಳಸೂತ್ರ ತೊಡಿಸಿದ್ದಾನೆ.
Tap to resize

ಹಳ್ಳಿ ಜನರು ಕತ್ತಲ ರಾತ್ರಿಯಲ್ಲಿ ವಾದ್ಯಗಳನ್ನು ತೊಡಿಸುತ್ತಾ ಮದುವೆ ದಿಬ್ಬಣ ಕೊಂಡೊಯ್ದಿದ್ದಾರೆ. ಇದರಲ್ಲಿ ಭಾಗಿಯಾದವರೆಲ್ಲಾ ಖುಷಿಯಿಂದ ಕುಣಿದಿದ್ದಾರೆ. ಗ್ರಾಮಸ್ಥರೆಲ್ಲಾ ತಮ್ಮ ಮನೆ ಎದುರು ಆರತಿ ತಟ್ಟೆಯಿಂದ ಈ ಜೋಡಿಗೆ ತಿಲಕವಿಟ್ಟು ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಅಲ್ಲದೇ ಕೆಲವರು ಹಣ ನೀಡಿದ್ದರೆ, ಇನ್ನು ಕೆಲವರು ಚಾಕೋಲೆಟ್‌ ಸೇರಿ ಇತರ ಉಡುಗೊರೆ ನೀಡಿದ್ದಾರೆ. ಇನ್ನು ಕೆಲವರು ಕೊರೋನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನೀಡಿದ್ದಾರೆ.
ಇನ್ನು ಕಳೆದ ತೊಂಭತ್ತು ವರ್ಷದಿಂದ ಈ ಪರಂಪರೆ ನಡೆದು ಬರುತ್ತಿದೆ ಎಂಬುವುದು ಗ್ರಾಮಸ್ಥರ ಮಾತಾಗಿದೆ. ಇಲ್ಲಿ ಪಾಲ್ಗುಣಿ ಮಾಸದ ಹೋಳಿಯ ಒಂದು ದಿನ ಹಳ್ಳಿಯ ನೆಮ್ಮದಿ, ಸುಖ, ಸಂತೋಷಕ್ಕಾಗಿ ಹಾಗೂ ಉತ್ತಮ ಮಳೆಗಾಗಿ ಈ ಪರಂಪರೆಯಂತೆ ಮದುವೆ ಮಾಡಿಸುತ್ತಾರೆ. ಹಲವಾರು ವರ್ಷದ ಹಿಂದೆ ಈ ಹಳ್ಳಿಗೆ ಬರಗಾಲ ಎದುರಾಗಿ ಜನರು ಸಾಯುವ ಸ್ಥಿತಿಯಲ್ಲಿದ್ದರು. ಇದಾಧ ಬಳಿಕ ಅರ್ಚಕರೊಬ್ಬರ ಮಾತಿನಂತೆ ಈ ಮದುವೆಯನ್ನು ಆರಂಭಿಸಲಾಗಿತ್ತು. ಇದಾದ ಬಳಿಕ ಭಾರೀ ಮಳೆ ಸುರಿದಿತ್ತಂತೆ. ಅಂದಿನಿಂದ ಈ ಪರಂಪರೆ ನಡೆದು ಬಂದಿದೆ.

Latest Videos

click me!