ಶಾಸಕಿಯ ವರ್ತನೆಯಿಂದ ಸರ್ಕಾರಕ್ಕೆ ಮುಜುಗರ!

Published : Mar 31, 2021, 05:17 PM IST

ಕೊರೋನಾ ಅಬ್ಬರ ಹೆಚ್ಚಾದ ಪರಿಣಾಮ, ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳು ಹೋಳಿ ಹಬ್ಬದ ಸಾರ್ವಜನಿಕ ಆಚರಣೆ ನಿರ್ಬಂಧಿಸಿತ್ತು. ಆದರೆ ಝಾರ್ಖಂಡ್‌ನ ಕಾಂಗ್ರೆಸ್‌ ಶಾಸಕಿ ಕೊರೋನಾದ ಎಲ್ಲಾ ಮಾರ್ಗಸೂಚಿಯ ಎಲ್ಲಾ ನಿಯಮಗಳನ್ನು ಮುರಿದಿದ್ದಾರೆ. ಅಲ್ಲದೇ ಖುದ್ದು ಮಡಿಕೆ ಒಡೆದಿದ್ದಲ್ಲದೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಿರುವಾಗ ಬಳಕೆದಾರರು ಇಲ್ಲಿನ ಸಿಎಂ ಹೇಮಂತ್ ಸುರೇನ್ ಹಾಗೂ ಶಾಸಕಿಗೆ ಕೆಟ್ಟ ಕಮೆಂಟ್‌ಗಳನ್ನು ನೀಡುತ್ತಿದ್ದಾರೆ.

PREV
15
ಶಾಸಕಿಯ ವರ್ತನೆಯಿಂದ ಸರ್ಕಾರಕ್ಕೆ ಮುಜುಗರ!

ಹೌದು ಬಡ್ಕಾಗಾಂವ್‌ನ ಶಾಸಕಿ ಅಂಬಾ ಪ್ರಸಾದ್‌ಗೆ ಕೊರೋನಾ ಮಾರ್ಗಸೂಚಿಗಿಂತ ತಮ್ಮ ಪರಂಪರರೆಯೇ ಹೆಚ್ಚಾಗಿದೆ. ಹೀಗಾಗೇ ಅವರು ತಮ್ಮ ಹಳ್ಳಿ ಪಹ್ರಾದಲ್ಲಿ ಮಡಿಕೆ ಒಡೆಯುವ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಲ್ಲಿ ಅವರು ಹಲವರ ಗುಂಪು ಸೇರಿಸಿ, ಮಡಿಕೆ ಒಡೆದು ಹೋಳಿ ಆಚರಿಸಿದ್ದಾರೆ. ಇದಾದ ಬಳಿಕ ಅವರು ಟ್ವಿಟರ್‌ನಲ್ಲೂ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. 
 
25

ಹೀಗಿರುವಾಗ ಶಾಸಕಿಯ ಈ ವರ್ತನೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಮೊದಲನೆಯದಾಗಿ ಅವರು ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿ ತಪ್ಪೆಸಗಿದ್ದರೆ, ಅತ್ತ ಮಾಸ್ಕ್ ಕೂಡಾ ಧರಿಸಿರಲಿಲ್ಲ. ಸಾಮಾಜಿಕ ಅಂತರದ ಮಾತೇ ಇಲ್ಲ. ಈ ಮೂಲಕ ಅವರು ತಮ್ಮ ಸರ್ಕಾರವನ್ನೇ ಮುಜುಗರಕ್ಕೀಡು ಮಾಡಿದ್ದಾರೆ. ಇನ್ನು ಮಾಧ್ಯಮಗಳು ಈ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಲೂ ಹಿಂದೇಟು ಹಾಕಿದ್ದಾರೆ.

35

ಸದ್ಯ ನೆಟ್ಟಿಗರು ಶಾಸಕಿಗೆ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

45

ಶಾಸಕಿ ಅಂಬಾ ಪ್ರಸಾದ್ ಹೀಗೆ ವಿವಾದ ಸೃಷ್ಟಿಸಿದ್ದು ಇದು ಮೊದಲಲ್ಲ. ಇದಕ್ಕೂ ಮುನ್ನ ಮಾರ್ಚ್ ಎಂಟರಂದು ವಿಧಾನಸಭಾ ಕಲಾಪಕ್ಕೆ ಅವರು ಕುದುರೆ ಏರಿ ಬಂದಿದ್ದರು.

55

ಅಂಬಾರವರು ಹಜಾರಿಬಾಗ್‌ ಜಿಲ್ಲೆಯ ಬಡ್ಕಾಗಾಂವ್‌ ವಿಧಾನಸಭಾ ಕ್ಷೇತ್ರದಿಂದ 27 ನೇ ವಯಸ್ಸಿಗೆ ಚುನಾವಣೆ ಗೆದ್ದಿದ್ದರು. ಈ ಮೂಲಕ 2019ರಲ್ಲಿ ಅತ್ಯಂತ ಕಡಿಮೆ ವಯಸ್ಸಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories