ಕೊರೋನಾ ವೈರಸ್ ಮತ್ತು ಲಾಕ್ ಡೌನ್ ಎಲ್ಲ ವರ್ಗದವರನ್ನು ಸಮಸ್ಯೆಗೆ ದೂಡಿದೆ. ಆರ್ಥಿಕ ಮುಗ್ಗಟ್ಟು ಎದುರಿಸಬೇಕಾದ ಪರಸ್ಥಿತಿ ಬಂದು ನಿಂತಿದೆ.
ಕೊರೋನಾ ಲಾಕ್ ಡೌನ್ ಕಾರಣಕ್ಕೆ ತಾಯಿ ಕೆಲಸ ಕಳೆದುಕೊಂಡ ಮೇಲೆ 14 ವರ್ಷದ ಈ ಬಾಲಕ ಟೀ ಮಾರಾಟ ಮಾಡಲು ಆರಂಭಿಸಿದ್ದಾನೆ. ಮುಂಬೈನ ನಾಗ್ಪಾಡಾ, ಭೆಂಡಿ ಬಜಾರ್ ಮತ್ತು ಮುಂಬೈನ ಇತರ ಪ್ರದೇಶಗಳಲ್ಲಿ ಟೀ ಮಾರಾಟವನ್ನು ಬಾಲಕ ಸುಭಾನ್ ಆರಂಭಿಸಿ ತನ್ನ ಕುಟುಂಬ ಸಲಹುವ ಕೆಲಸ ಮಾಡುತ್ತಿದ್ದಾನೆ.
ಬಾಲಕನ ತಾಯಿ ಶಾಲಾ ಬಸ್ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ನಂರ ಶಾಲೆ ಬಂದ್ ಆಗಿದ್ದು ಕೆಲಸ ಕಳೆದುಕೊಂಡರು. ಬಾಲಕನ ತಂದೆ 12 ವರ್ಷಗಳ ಹಿಂದೆ ನಿಧನರಾಗಿದ್ದಾರೆ.
ನನ್ನದು ಅಂಗಡಿ ಇಲ್ಲ .. ಟೀ ಸಿದ್ಧ ಮಾಡಿಕೊಂಡು ಹೋಗಿ ಮಾರಾಟ ಮಾಡುತ್ತೇನೆ. ದಿನಕ್ಕೆ 300-400 ರೂ. ಗಳಿಸುತ್ತೇನೆ. ನನ್ನ ಸಹೋದರಿಯರೂ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿದ್ದಾರೆ ಎಂದು ಬಾಲಕ ತನ್ನ ದೈನಂದಿನ ಕತೆ ಹೇಳಿದ್ದು ಸೋಶಿಯಲ್ ಮೀಡಿಯಾದಲ್ಲಿಯೂ ಮೆಚ್ಚುಗೆ ಹರಿದು ಬಂದಿದೆ.
ನವದೆಹಲಿಯ ವೃದ್ಧ ದಂಪತಿಗಳ ಹೋಟೆಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾ ಪರಿಣಾಮ ಹೊಟೇಲ್ ಗೆ ಸಾಕಷ್ಟು ಗ್ರಾಹಕರು ಬಂದಿದ್ದರು.