1 ರುಪಾಯಿ ಲಾಯರ್ ಹರೀಶ್ ಸಾಳ್ವೆ ಅವರ 'ಸಾಕ್ಷಿ' ಈಕೆ..!

First Published | Oct 29, 2020, 6:08 PM IST

ವಕೀಲ ಹರೀಶ್‌ ಸಾಳ್ವೆ ಅವರ ಪುತ್ರಿ ಸಾಕ್ಷಿ ಸಾಳ್ವೆ ಬಗ್ಗೆ ನಿಮಗೆ ಗೊತ್ತಾ..? 1 ರೂಪಾಯಿ ವಕೀಲನ ಪುತ್ರಿ ಈಕೆ. ಇಲ್ಲಿವೆ ಫೋಟೋಸ್

ಪಾಕಿಸ್ತಾನದ ವಶದಲ್ಲಿರುವ ಕುಲಭೂಷಣ್‌ ಜಾಧವ್‌ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್‌ ಸಾಳ್ವೆ ಅವರ ಪುತ್ರಿ ಸಾಕ್ಷಿ ಸಾಳ್ವೆ ಬಗ್ಗೆ ನಿಮಗೆ ಗೊತ್ತಾ..? 1 ರೂಪಾಯಿ ವಕೀಲನ ಪುತ್ರಿ ಈಕೆ. ಇಲ್ಲಿವೆ ಫೋಟೋಸ್
ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಹಿರಿಯ ಪುತ್ರಿ ಸಾಕ್ಷಿ ಸಾಳ್ವೆ ಅವರು ಪ್ರಸಿದ್ಧ ಲೇಖಕಿ.
Tap to resize

ದಿ ಬಿಗ್ ಇಂಡಿಯನ್ ವೆಡ್ಡಿಂಗ್, ದಿ ಅಲ್ಟಿಮೇಟ್ ಗೈಡ್ ಫಾರ್ ಡಮ್ಮೀಸ್ ಅನ್ನೋ ಪುಸ್ತಕಗಳನ್ನು ಬರೆದಿದ್ದಾರೆ ಸಾಕ್ಷಿ.
ಈ ಪುಸ್ತಕಗಳು ಬೆಸ್ಟ್ ಸೆಲ್ಲರ್ ಆಗಿ ಹೊರಹೊಮ್ಮಿದ್ದು, ಪುಸ್ತಕಕ್ಕೆ ಪ್ರಶಂಸೆ ಮತ್ತು ಟೀಕೆಯೂ ವ್ಯಕ್ತವಾಗಿದೆ.
ಆಧುನಿಕ ಭಾರತೀಯ ವಿವಾಹಗಳ ಮಿತಿಮೀರಿದ ಆಡಂಬರವನ್ನು ವಿವರಿಸುವಲ್ಲಿ ಸಾಕ್ಷಿ ಸಾಲ್ವೆ ಅವರ ವಿಡಂಬನಾತ್ಮಕ ಶೈಲಿಯ ಪುಸ್ತಕಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ನಟ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್‌ನಂತರ ಹಿರಿಯ ನಟರೂ ಸಾಕ್ಷಿ ಅವರ ಪುಸ್ತಕಗಳನ್ನು ಪ್ರಮೋಟ್ ಮಾಡಿದ್ದರು.
ಈ ಪುಸ್ತಕ ಪ್ರಕಟಣೆ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ, ಮುಖೇಶ್ ಅಂಬಾನಿ, ರತನ್ ಟಾಟಾ, ವಹೀದಾ ರೆಹಮಾನ್, ಸೈರಾ ಬಾನು, ಅನುಪಮ, ವಿಷ್ಣು ವಿನೋದ್ ಚೋಪ್ರಾ, ಟ್ವಿಂಕಲ್ ಖನ್ನಾ, ಡಿಂಪಲ್ ಕಪಾಡಿಯಾ, ಮಾನ್ಯತಾ ದತ್, ಅನಿಲ್ ಕಪೂರ್, ಸೈರಸ್ ಬ್ರೋಚಾ, ಮೋಹಿತ್ ಮಾರ್ವಾ ಮತ್ತು ಗೌತಮ್ ಗುಲಾಟಿ ಭಾಗವಹಿಸಿದ್ದರು.
ಸಾಕ್ಷಿ ಅವರ ಪುಸ್ತಕವನ್ನು ಕನ್ನಿಕಾ ಕಪೂರ್ ಹಾಗೂ ಇಕ್ಕಾ ಅವರು ಹಾಡಿನ ಮೂಲಕ ಪ್ರಮೋಟ್ ಮಾಡಿದ್ದರು. ಹಾಡಿನಲ್ಲಿ ಗೌತಮ್ ಗುಲಾಟಿ ಅಭಿನಯಿಸಿದ್ದರು.
ಟೆಡ್ಡಿ ಬೇರ್ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸುಮಾರು 6,679,745 ಮತ್ತು 1109 ಕಮೆಂಟ್ಸ್ ಬಂದಿತ್ತು.
1983ರಲ್ಲಿ ಹುಟ್ಟಿದ ಸಾಕ್ಷಿಗೆ ಈಗ 34 ವರ್ಷ. ಸ್ಟ್ರಿಕ್ಟ್ ವ್ಯಾಯಾಮ ಮತ್ತು ಡಯೆಟ್‌ನಿಂದ ಸಾಕ್ಷಿ ಇನ್ನಷ್ಟು ಯಂಗ್ ಕಾಣಿಸ್ತಾರೆ ಅನ್ನೋದು ಸತ್ಯ.
ಫುಲ್‌ಟೈಂ ಲೇಖಕಿಯಾಗುವ ಮೊದಲು ಸಾಕ್ಷಿ ಲಾ ಪ್ರಾಕ್ಟೀಸ್ ಮಾಡುವ ಪ್ರಯತ್ನ ಮಾಡಿದ್ದರು. ತಂದೆ ಹರೀಶ್ ಸಾಳ್ವೆ ಜೊತೆ ಸೇರಿ ಕೆಲಸ ಮಾಡಿದ್ದರು.
ಸಾಕ್ಷಿ ಸಾಳ್ವೆ 2017 ಡಿಸೆಂಬರ್ 2ರಂದು ಕರಣ್ ಬೇಡಿ ಅವರನ್ನು ವರಿಸಿದ್ದಾರೆ.
ಸಾಕ್ಷಿ ವಿವಾಹ ಮುನ್ನ ತಮ್ಮ ಗೆಳತಿಯರೊಂದಿಗೆ ಬ್ಯಾಚುರಲ್ ಪಾರ್ಟಿಗಾಗಿ ಫ್ರಾನ್ಸ್‌ಗೆ ತೆರಳಿದ್ದರು.

Latest Videos

click me!