ವರ್ಕ್ ಫ್ರಮ್ ಹೋಂ ಖಿನ್ನತೆಗೆ ಕಾರಣವಾಗ್ತಾ ಇದ್ಯಾ?

First Published | Dec 14, 2020, 3:50 PM IST

ಕೋವಿಡ್ - 19  ಕಾರಣ ಮನೆಯಿಂದ ಕೆಲಸ ಮಾಡಲು ಆರಂಭಿಸಿದಾಗಿನಿಂದ ಖಿನ್ನತೆಗೆ ಒಳಗಾಗುವವರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಒಬ್ಬಂಟಿಯಾಗಿರುವುದು ಮತ್ತು ಸ್ನೇಹಿತರಿಂದ ದೂರವಾಗಿರುವುದು ಖಿನ್ನತೆಯ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ಖಿನ್ನತೆ ಉಂಟಾಗುವುದು ಮಾನಸಿಕ ಅಸ್ವಸ್ಥತೆಗೂ ಕಾರಣವಾಗುತ್ತದೆ.ಈ ಎಲ್ಲಾ ಸ್ಥಿತಿಯಿಂದ ಹೊರ ಬರಲು ನೀವು ಒಂದಿಷ್ಟು ಪರಿಹಾರ ಮಾರ್ಗಗಳನ್ನೂ ಅನುಸರಿಸಬೇಕು. 

ವರ್ಕ್ ಫ್ರಮ್ ಹೋಮ್ ಸಮಯದಲ್ಲಿ ನೀವು ನಿಮ್ಮ ಮನಸ್ಥಿತಿಯನ್ನು ಸರಿಯಾಗಿಡಲು ಹೆಣಗಾಡುತ್ತಿರುವವರಾಗಿದ್ದರೆ, ನಿಮಗಾಗಿ ಮತ್ತು ನಿಮ್ಮ ಮೆದುಳಿಗೆ ವಿಷಯಗಳನ್ನು ಸುಲಭಗೊಳಿಸಲು ಕೆಲವು ಸಲಹೆಗಳು ಇಲ್ಲಿವೆ.
undefined
ಸಣ್ಣ ಸಣ್ಣ ಕ್ಷಣಗಳನ್ನು ಆನಂದಿಸಿ :ಖಿನ್ನತೆಯು ನಿಮ್ಮನ್ನು ತೀವ್ರವಾಗಿ ಕಾಡುತ್ತಿದ್ದರೆ, ಹೆಚ್ಚು ಚಿಂತೆ ಮಾಡಬೇಡಿ. ಸಾಧ್ಯವಾದಾಗಲೆಲ್ಲಾ, ನೀವು ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಬೇಕು, ಒಂದೆರಡು ತಮಾಷೆಯ ವೀಡಿಯೊಗಳನ್ನು ನೋಡಬೇಕು.
undefined

Latest Videos


ನಿಮ್ಮ ಮುಖದ ಮೇಲೆ ಸ್ವಲ್ಪ ಸೂರ್ಯನ ಬೆಳಕು ಪಡೆಯಿರಿ ಮತ್ತು ಸ್ವಲ್ಪ ವಿಶ್ರಾಂತಿ ಪಡೆಯಬೇಕು. ಈ ಸಣ್ಣ ಕ್ರಿಯೆಗಳು ಹೆಚ್ಚಿನ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ ಎಂದು ಅನಿಸಬಹುದು, ಆದರೆ ಇದು ಪ್ರತಿ ದಿನದ ಕೊನೆಯಲ್ಲಿ ನಿಮಗೆ ನಿರಾಳತೆ ದೊರೆಯುತ್ತದೆ.
undefined
ಸಹೋದ್ಯೋಗಿಗಳೊಂದಿಗೆ ಚಿಟ್ ಚಾಟ್ನಿಮ್ಮ ಸಹೋದ್ಯೋಗಿಗಳೊಂದಿಗೆ ಸಂಪರ್ಕಿಸುವ ಏಕೈಕ ಮಾರ್ಗವೆಂದರೆ ವರ್ಕ್ ಮೀಟಿಂಗ್ಗಳು. ಇದರ ನಂತರವೂ ಒಟ್ಟಿಗೆ ಲಂಚ್ ಕಾಲ್ಸ್ ಮಾಡಿ, ವರ್ಚುವಲ್ ಕಾಫಿ ಡೇಟ್ ಗಳು ಸಹ ನಿಮ್ಮ ಬೋರಿಂಗ್ ನೆಸ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪರಸ್ಪರ ಕೆಲಸ ಮಾಡುವುದನ್ನು ಹೊರತುಪಡಿಸಿ ಇತರ ವಿಷಯಗಳ ಬಗ್ಗೆ ಮಾತನಾಡಿ ಮತ್ತು ಮನಸ್ಥಿತಿಯನ್ನು ಹಗುರಗೊಳಿಸಿ.
undefined
ನಿಮ್ಮ ಕೆಲಸಗಾರರೊಂದಿಗೆ ಬೆರೆಯುವುದು ಮಾನಸಿಕವಾಗಿ ಆರೋಗ್ಯವಾಗಿರಲು ಒಂದು ನಿರ್ಣಾಯಕ ಭಾಗವಾಗಿದೆ, ವಿಶೇಷವಾಗಿ ನೀವು ದೂರದಿಂದ ಕೆಲಸ ಮಾಡುತ್ತಿರುವಾಗ ಇದು ಉತ್ತಮ ಟಿಪ್ಸ್.
undefined
ಹೆಚ್ಚು ಹೆಚ್ಚು ನೀರು ಕುಡಿಯಿರಿಏನನ್ನಾದರೂ ತಿನ್ನದೇ ಅಥವಾ ನೀರು ಸಿಪ್ ಮಾಡದೆ ಗಂಟೆಗಳ ಕಾಲ ನಿಮ್ಮ ಕೆಲಸದಲ್ಲಿ ಸಿಲುಕಿಕೊಳ್ಳುವುದು ಸುಲಭ. ಆದರೆ ಈ ಒತ್ತಡದ ಸಮಯದಲ್ಲಿ, ನಿಮ್ಮ ದೇಹವನ್ನು ನೀವು ಹೆಚ್ಚು ಹೆಚ್ಚು ಕ್ರಮಬದ್ಧವಾಗಿರಿಸಿಕೊಳ್ಳಬೇಕು. ಏಕಾಗ್ರತೆಯಿಂದ ಕೆಲಸ ಮಾಡಲು ಸಾಧ್ಯವಾಗದೆ ಇದ್ದರೆ ಚಹಾ ಅಥವಾ ಕಾಫಿ ಸಿಪ್ ಮಾಡಿ. ನಿಮ್ಮ ದೇಹವನ್ನು ಪೋಷಿಸುವ ಲಘು ಆಹಾರವನ್ನು ಸೇವಿಸಿ.
undefined
ಹೆಚ್ಚು ಸ್ಕ್ರೀನ್ ನೋಡಬೇಡಿ :ನೀವು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ, ನಿಮ್ಮ ಲ್ಯಾಪ್ಟಾಪ್ ಮತ್ತು ನಿಮ್ಮ ಫೋನ್ನಲ್ಲಿ ನೀವು ಯಾವಾಗಲೂ ಇರಬೇಕು ಎಂದಲ್ಲ. ನಿರಂತರ ಸ್ಕ್ರೀನ್ ವೀಕ್ಷಣೆ ನಿಮ್ಮ ಶಕ್ತಿಯನ್ನು ಕುಗ್ಗಿಸುತ್ತದೆ. ಬದಲಾಗಿ, ನಿಮ್ಮ ಮೆದುಳನ್ನು ರಿಲಾಕ್ಸ್ ಮಾಡಲು ಆಗಾಗ್ಗೆ ವಿರಾಮಗಳನ್ನು ತೆಗೆದುಕೊಳ್ಳಿ. ಪುಸ್ತಕವನ್ನು ಓದಿ, ಸ್ವಲ್ಪ ಸಂಗೀತ ನುಡಿಸಿ, ಇತರರಿಂದ ಸುರಕ್ಷಿತ ದೂರವನ್ನು ಕಾಪಾಡಿಕೊಂಡು ವಾಕ್ ಹೋಗಿ.
undefined
ಅಟೆನ್ಷನ್ ಬಯಸುವುದು ತಪ್ಪಲ್ಲಶಾಂತವಾಗಿರುವುದು ನಿಮ್ಮ ಖಿನ್ನತೆ ದೂರ ಮಾಡಲು ಸಹಾಯ ಮಾಡುವುದಿಲ್ಲ ಎಂದು ನೀವು ಭಾವಿಸಿದಾಗ ಇತರರ ಅಟೆನ್ಷನ್ ಬಯಸುವುದು ತಪ್ಪಲ್ಲ. ಸ್ನೇಹಿತರು, ಸಂಬಂಧಿಕರರಿಗೆ ಕಾಲ್ ಮಾಡಿ ಅಥವಾ ಮನೆಯಲ್ಲಿರುವ ಜನರೊಂದಿಗೆ ಮಾತನಾಡಿ.
undefined
ಮಾನವ ಸಂವಹನವನ್ನು ಹೊಂದಿರುವುದು ಖಿನ್ನತೆಗೆ ಒಳಗಾದಾಗ ನಿಮ್ಮ ಮನಸ್ಸಿನಲ್ಲಿ ನಿರಂತರವಾಗಿ ಉಂಟಾಗುವ ಉದ್ವೇಗ ಮತ್ತು ಒತ್ತಡವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.
undefined
click me!