ಕೊರೋನಾ ಯುದ್ಧಕ್ಕೆ ಅಕ್ಷಯ್ 25 ಕೋಟಿ ರೂ, ಮನ ಗೆದ್ದಿತು ಪತ್ನಿಗೆ ನೀಡಿದ ಉತ್ತರ
First Published | Mar 30, 2020, 12:05 PM ISTಇಡೀ ವಿಶ್ವಕ್ಕೇ ಸಿಂಹಸ್ವಪ್ನವಾಗಿದೆ ಕೊರೋನಾ ವೈರಸ್. ಭಾರತದಲ್ಲಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಿನಿ ತಾರೆಯರು ತಮ್ಮ ಕೈಲಾದ ಧನ ಸಹಾಯ ಮಾಡುತ್ತಿದ್ದಾರೆ. ಇಂಥ ಕಾರ್ಯಗಳಲ್ಲಿ ಮೊದಲ ಕೈ ಜೊಡಿಸುವ ಬಾಲಿವುಡ್ ನಟ 25 ಕೋಟಿ ರೂ. ನೆರವು ನೀಡಿದ್ದಾರೆ. ಇಷ್ಟು ಮೊತ್ತದ ಹಣ ಏಕೆ ನೀಡುತ್ತೀರಿ ಎಂದು ಪತ್ನಿ ಟ್ವಿಂಕಲ್ ಖನ್ನಾ ಕೇಳಿದ ಪ್ರಶ್ನೆಗೆ ಅಕ್ಷಯ್ ನೀಡಿರುವ ಉತ್ತರ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದೆ.