'ಇದು ನಾವು...ಸ್ವಲ್ಪ ಫಿಲ್ಮಿ, ಸ್ವಲ್ಪ ಪ್ಲೇಫುಲ್, lil religious, ಸ್ವಲ್ಪ ಸೀರಿಯಸ್ ಅದರೆ ತುಂಬಾ ರಿಯಲ್. ಈ 6 ವರ್ಷವನ್ನು ಬ್ಯೂಟಿಫುಲ್ ಮಾಡಿದಕ್ಕೆ ಥ್ಯಾಂಕ್ಸ್. ನಿಮ್ಮ ಜೊತೆ ನನ್ನ ಜೀವನ ಮ್ಯಾಜಿಕಲ್ ಮತ್ತು ರಿಯಲ್. ಹ್ಯಾಪಿ ಅನಿವರ್ಸರಿ. ಲವ್ ಯು' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
47
ಹಲವು ವರ್ಷಗಳ ಕಾಲ ಇಬ್ಬರು ಪ್ರೀತಿಸಿ ಆನಂತರ ಪೋಷಕರ ಒಪ್ಪಿಗೆ ಪಡೆದು 2016ರಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದರು.ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಮದುವೆ ಹಾಗೂ ಅರಮನೆ ಮೈದಾನದಲ್ಲಿ ಆರತಕ್ಷತೆ ಮಾಡಿದ್ದರು.
57
2018ರಲ್ಲಿ ಯಶ್ ಮತ್ತು ರಾಧಿಕಾ ತಮ್ಮ ಕುಟುಂಬಕ್ಕೆ ಡಿಸೆಂಬರ್ 2ರಂದು ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡರು. ಐರಾ ಹುಟ್ಟುತ್ತಿದ್ದಂತೆ ಸೆಲೆಬ್ರಿಟಿ ಕಿಡ್ ಲಿಸ್ಟ್ ಸೇರಿಕೊಂಡಳು.
67
2019ರಲ್ಲಿ ಅಕ್ಟೋಬರ್ 30 ಕುಟುಂಬಕ್ಕೆ ಯುವರಾಜ ಯಥರ್ವ್‌ನ ಬರ ಮಾಡಿಕೊಂಡರು. ಇಬ್ಬರು ಮುದ್ದಾದ ಮಕ್ಕಳು ಜೊತೆ ಹ್ಯಾಪಿ ಫ್ಯಾಮಿಲಿ ಲೀಡ್ ಮಾಡುತ್ತಿದ್ದಾರೆ.
77
ಮಕ್ಕಳು ಹುಟ್ಟಿದ ನಂತರ ರಾಧಿಕಾ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಬದಲಿಗೆ ಯಶ್ ಜೊತೆ ಸೇರಿಕೊಂಡು ಜಾಹೀರಾತುವೊಂದರಲ್ಲಿ ಅಭಿನಯಿಸಿದ್ದಾರೆ.