ಆ್ಯಪಲ್ ಐಫೋನ್ 14 ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023ರ ಶೋ ಸ್ಟಾಪರ್ ಆಗಿತ್ತು. ಅತೀ ಕಡಿಮೆ ಬೆಲೆಗೆ ಐಫೋನ್ ಲಭ್ಯವಾಗಿತ್ತು. ಈಗ
ಆ್ಯಪಲ್ ಐಫೋನ್ 12, ಕೇವಲ 4,849 ರೂಗಳಲ್ಲಿ ಲಭ್ಯವಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ವಿವರ.
ಆ್ಯಪಲ್ ಐಫೋನ್ 12 ಕಂಪನಿಯಿಂದ ಹೆಚ್ಚು ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದು ಈಗ ಸುಮಾರು 3 ವರ್ಷ ಹಳೆಯದಾಗಿದ್ದರೂ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಇದು ಇನ್ನೂ ಉತ್ತಮವಾಗಿದೆ.
ಆ್ಯಪಲ್ ಐಫೋನ್ 15 ಸರಣಿಯ ಪ್ರಾರಂಭದ ನಂತರ ಆ್ಯಪಲ್ ಐಫೋನ್ 12ನ್ನು ಆ್ಯಪಲ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಶೀಘ್ರದಲ್ಲೇ ಇದನ್ನು ಇಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದಲೂ ತೆಗೆದುಹಾಕಲಾಗುತ್ತದೆ.
ಆ್ಯಪಲ್ ಐಫೋನ್ 12 ಪ್ರಸ್ತುತ ಕಡಿಮೆ ಬೆಲೆಗೆ ಲಭ್ಯವಿದೆ. ಆ್ಯಪಲ್ ಐಫೋನ್ 12ನ್ನು 79,900 ರೂಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಐಫೋನ್ ಮಾದರಿಗಳಲ್ಲಿ ಒಂದಾಗಿದೆ. ಆ್ಯಪಲ್ ಐಫೋನ್ 12 ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 39,150 ರೂ.ನಷ್ಟು ರಿಯಾಯಿತಿಯ ನಂತರ 4,849 ರೂ.ಗೆ ಲಭ್ಯವಿದೆ.
ಆ್ಯಪಲ್ ಐಫೋನ್ 12 ಪ್ರೀಮಿಯಂ ಹಲವು ವೈಶಿಷ್ಟ್ಯಗಳೊಂದಿಗೆ ಬೆಸ್ಟ್ ಆಫರ್‌ಗೆ ಬೆಸ್ಟ್ ಸ್ಮಾರ್ಟ್‌ಫೋನ್ ಆಗಿದೆ. 6.1-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಹುಡ್ ಅಡಿಯಲ್ಲಿ, ಐಫೋನ್ A14 ಬಯೋನಿಕ್ ಚಿಪ್‌ನಿಂದ ಚಾಲಿತವಾಗಿದೆ. ಆ್ಯಪಲ್ ಐಫೋನ್ 12 ಅನ್ನು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 43,999 ರೂ.ನಲ್ಲಿ ಮಾರಾಟ ಮಾಡಲಾಗ್ತಿದೆ.
ಆದರೆ, ಇದರ ಜೊತೆಗೆ, ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಫ್ಲಿಪ್‌ಕಾರ್ಟ್ 39,150 ರೂ . ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರರ್ಥ ಎಲ್ಲಾ ಬ್ಯಾಂಕ್ ಕೊಡುಗೆಗಳು ಮತ್ತು ರಿಯಾಯಿತಿಗಳ ನಂತರ, ಆ್ಯಪಲ್ ಐಫೋನ್ 12ನ್ನು ಫ್ಲಿಪ್‌ಕಾರ್ಟ್‌ನಲ್ಲಿ 39,150 ರೂಗಳ ರಿಯಾಯಿತಿಯ ನಂತರ ಕೇವಲ 4,849 ರೂಗಳಲ್ಲಿ ಪಡೆಯಬಹುದು.
ಆ್ಯಪಲ್ ಐಫೋನ್ 12 ಸೆರಾಮಿಕ್ ಶೀಲ್ಡ್ ಮತ್ತು IP68 ವಾಟರ್ ಪ್ರೂಫ್ ಫೆಸಿಲಿಟಿಯೊಂದಿಗೆ ಬರುತ್ತದೆ. ಕ್ಯಾಮೆರಾ ವಿಷಯಕ್ಕೆ ಬಂದಾಗ, ಮೊಬೈಲ್ ಹಿಂಭಾಗದಲ್ಲಿ 12MP ಡ್ಯುಯಲ್ ಕ್ಯಾಮೆರಾ ಸೆಟಪ್ ಪಡೆಯುತ್ತದೆ.
ಇದು ನೈಟ್ ಮೋಡ್, 4K ಡಾಲ್ಬಿ ವಿಷನ್ HDR ರೆಕಾರ್ಡಿಂಗ್ ಜೊತೆಗೆ 12MP TrueDepth ಫ್ರಂಟ್ ಕ್ಯಾಮೆರಾವನ್ನು ಸಹ ಪಡೆಯುತ್ತದೆ. ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 64GB ಸ್ಟೋರೇಜ್‌ನೊಂದಿಗೆ ಬ್ರ್ಯಾಂಡ್‌ನ ಕೊನೆಯ ಫೋನ್ ಆಗಿದೆ.