Flipkart sale: ಭರ್ತಿ 20000 ರೂ.ನ ಆ್ಯಪಲ್ ಏರ್‌ಪಾಡ್‌ ಜಸ್ಟ್‌ 1,199 ರೂ.ಗೆ ಲಭ್ಯ!

First Published | Oct 27, 2023, 2:43 PM IST

ಆ್ಯಪಲ್ ಏರ್‌ಪಾಡ್‌ಗಳು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾದ ಇಯರ್‌ಬಡ್‌ಗಳಾಗಿವೆ. ಇಯರ್‌ಬಡ್‌ಗಳ ಪ್ರೊ ಆವೃತ್ತಿಯು ಬಳಕೆದಾರರಿಗೆ ಸಾಕಷ್ಟು ನೆಚ್ಚಿನದಾಗಿದೆ. ಆದರೆ ಎಲ್ಲರೂ ಈ ಕಾಸ್ಟ್ಲೀ ಇಯರ್ ಬಡ್ ಕೊಳ್ಳುವುದು ಕಷ್ಟ. ಅಂಥವರಿಗೆಂದೇ ಫ್ಲಿಪ್‌ಕಾರ್ಟ್ ಸೇಲ್ ಭರ್ಜರಿ ಆಫರ್ ನೀಡುತ್ತಿದೆ.

ಮೊದಲೆಲ್ಲಾ ಜನರು ಹಾಡು ಕೇಳಲು, ಮೊಬೈಲ್‌ನಲ್ಲಿ ಮಾತನಾಡಲು ಕಿವಿಗಳಿಗೆ ಇಯರ್‌ಫೋನ್ ಅಥವಾ ಹೆಡ್‌ಫೋನ್ ಗಳನ್ನು ಬಳಸುತ್ತಿದ್ದರು. ಆದರೆ ಈಗ ಏರ್‌ಪಾಡ್‌ಗಳು ಹೆಚ್ಚು ಬಳಕೆಯಲ್ಲಿವೆ. ಈ ಏರ್‌ಪಾಡ್ ಗಳನ್ನು ಬಳಸುವುದರಿಂದ ನಮಗೆ ಮೊಬೈಲ್ ಫೋನ್ ಅನ್ನು ಗಂಟೆಗಟ್ಟಲೆ ಕೈಯಲ್ಲಿ ಹಿಡಿದುಕೊಳ್ಳುವ ಅವಶ್ಯಕತೆ ಇರುವುದಿಲ್ಲ

ಪ್ರೀಮಿಯಂ ಸೌಂಡ್ ಗುಣಮಟ್ಟ, ಸುಲಭ ಸಂಪರ್ಕ ಮತ್ತು ಐಕಾನಿಕ್ ಇಯರ್ ಬಡ್ಸ್ ವಿನ್ಯಾಸದಿಂದಾಗಿ ಆ್ಯಪಲ್​ನ​​​​ ಮೊದಲ ವೈರ್‌ಲೆಸ್ ಬ್ಲೂಟೂತ್ ಇಯರ್ ಬಡ್ ಗಳು ಬೇಗನೆ ಹಿಟ್ ಆದವು. ಆದರೆ ಎಲ್ಲರೂ ಈ ಕಾಸ್ಟ್ಲೀ ಇಯರ್ ಬಡ್ ಕೊಳ್ಳುವುದು ಕಷ್ಟ. ಅಂಥವರಿಗೆಂದೇ ಫ್ಲಿಪ್‌ಕಾರ್ಟ್ ಸೇಲ್ ಭರ್ಜರಿ ಆಫರ್ ನೀಡುತ್ತಿದೆ.

Tap to resize

ಆ್ಯಪಲ್ ಏರ್‌ಪಾಡ್‌ಗಳು ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯವಾದ ಇಯರ್‌ಬಡ್‌ಗಳಾಗಿವೆ. ಇಯರ್‌ಬಡ್‌ಗಳ ಪ್ರೊ ಆವೃತ್ತಿಯು ಬಳಕೆದಾರರಿಗೆ ಸಾಕಷ್ಟು ನೆಚ್ಚಿನದಾಗಿದೆ. ಆ್ಯಪಲ್ ಏರ್‌ಪಾಡ್ಸ್ ಸಣ್ಣದಾಗಿದ್ದು, ಅಗಲವಾದ ಚಾರ್ಜಿಂಗ್ ಕೇಸ್ ಮತ್ತು ಸಿಲಿಕೋನ್ ಇಯರ್‌ಟಿಪ್‌ಗಳೊಂದಿಗೆ ಹಗುರವಾದ ವಿನ್ಯಾಸವನ್ನು ಹೊಂದಿದೆ.
 

ಆ್ಯಪಲ್‌ನ ಅಧಿಕೃತ ವೆಬ್‌ಸೈಟ್ ಪ್ರಸ್ತುತ ಹೊಸ AirPods Proವನ್ನು  24,900 ರೂ.ನಲ್ಲಿ ಮಾರಾಟ ಮಾಡುತ್ತಿದೆ ಮತ್ತು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಇಯರ್‌ಬಡ್‌ಗಳು ಉತ್ತಮ ರಿಯಾಯಿತಿಯಲ್ಲಿ ಲಭ್ಯವಿವೆ. ಫ್ಲಿಪ್‌ಕಾರ್ಟ್ ಹಬ್ಬದ ಮಾರಾಟದಲ್ಲಿ 17,800 ರೂ ರಿಯಾಯಿತಿಯ ನಂತರ Apple AirPods ಪ್ರೊ 1,199 ರೂ.ಗಿಂತ ಕಡಿಮೆ ಲಭ್ಯವಿದೆ.

ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಫ್ಲಿಪ್‌ಕಾರ್ಟ್ ವಿವಿಧ ವರ್ಗಗಳಲ್ಲಿ ಉತ್ಪನ್ನಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡಾಗ ಪ್ಲಾಟ್‌ಫಾರ್ಮ್ ಯೋಗ್ಯ ಬೆಲೆಯನ್ನು ಸಹ ನೀಡುತ್ತದೆ. ಹೀಗೆಯೇ ಬಂಪರ್ ಆಫರ್‌ನಲ್ಲಿ ಆ್ಯಪಲ್ ಏರ್‌ಪಾಡ್ಸ್ ಪ್ರೊ ಅನ್ನು 1,199 ರೂ.ಗಿಂತ ಕಡಿಮೆ ಬೆಲೆಗೆ ಪಡೆಯಬಹುದು.

ಏರ್‌ಪಾಡ್ಸ್ ಪ್ರೊ ಜೊತೆಗಿನ ಮೊನಚಾದ ಸಿಲಿಕೋನ್ ವಾಟರ್‌ ಪ್ರೂಫ್ ಆಗಿದೆ. ಕಂಪನಿಯ ಪ್ರಕಾರ,  ಆ್ಯಪಲ್ ಏರ್‌ಪಾಡ್ಸ್  Pro ಮ್ಯಾಗ್‌ಸೇಫ್ ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು 24 ಗಂಟೆಗಳಿಗಿಂತ ಹೆಚ್ಚು ಆಲಿಸುವ ಸಮಯವನ್ನು ನೀಡುತ್ತದೆ. AirPods Pro ಪಾರದರ್ಶಕತೆ ಮೋಡ್‌ನ್ನು ಹೊಂದಿದೆ ಹೀಗಾಗಿ ಏರ್‌ಪಾಡ್ಸ್ ಬಳಸುತ್ತಿದ್ದರೂ ಹೊರಗೆ ನಡೆಯುವ ಚಟುವಟಿಕೆಗಳನ್ನೂ ಆಲಿಸಬಹುದು.

ಆಪಲ್ ಇತ್ತೀಚೆಗೆ Apple iPhone 15 ಸರಣಿಯ ಜೊತೆಗೆ AirPods Pro ನ USB-C ಆವೃತ್ತಿಯನ್ನು ಸಹ ಬಿಡುಗಡೆ ಮಾಡಿತು. ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಮಾತ್ರ ಈ ಆಫರ್ ಲಭ್ಯವಿರಲಿದೆ.

Latest Videos

click me!