ಭಾರತದಲ್ಲಿ ಅತೀ ಅಗ್ಗದ 5G ಫೋನ್ ಬಿಡುಗಡೆ ಮಾಡಲಿದೆ ರಿಲಯನ್ಸ್‌ ಜಿಯೋ, ಬೆಲೆ ಇಷ್ಟೊಂದ್ ಕಡಿಮೆನಾ?

First Published Mar 1, 2024, 2:36 PM IST

ಆಕಾಶ್‌ ಅಂಬಾನಿಯ ರಿಲಯನ್ಸ್ ಜಿಯೋ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದೆ. ಕಳೆದ ಕೆಲವು ವರ್ಷಗಳಿಂದ, ರಿಲಯನ್ಸ್ ಜಿಯೋ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯ ಉತ್ಪನ್ನಗಳು ಮತ್ತು ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಈ ಬಾರಿ  ಅಗ್ಗದ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 

ಆಕಾಶ್‌ ಅಂಬಾನಿಯ ರಿಲಯನ್ಸ್ ಜಿಯೋ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದೆ. ಕಳೆದ ಕೆಲವು ವರ್ಷಗಳಿಂದ, ರಿಲಯನ್ಸ್ ಜಿಯೋ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯ ಉತ್ಪನ್ನಗಳು ಮತ್ತು ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ.

ಆಕಾಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಈಗ ಭಾರತದಲ್ಲಿ ಕ್ವಾಲ್ಕಾಮ್ ಸಹಭಾಗಿತ್ವದಲ್ಲಿ ಅಗ್ಗದ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 

ವರದಿಗಳ ಪ್ರಕಾರ, ಈ ವರ್ಷದ ಅಂತ್ಯದ ವೇಳೆಗೆ ರಿಲಯನ್ಸ್ ಜಿಯೋ ಮತ್ತು ಕ್ವಾಲ್ಕಾಮ್ ರೂ 8000 ಕ್ಕಿಂತ ಕಡಿಮೆ 5 ಜಿ ಫೋನ್ ಅನ್ನು ಪ್ರಾರಂಭಿಸಬಹುದು ಎಂದು ತಿಳಿದುಬಂದಿದೆ. ಹೊಸ ಸಾಧನವು ಭಾರತದಲ್ಲಿ 250 ಮಿಲಿಯನ್ 2G ಮತ್ತು 3G ಬಳಕೆದಾರರು ಸುಲಭವಾಗಿ 4G ಮತ್ತು 5Gಗೆ ಶಿಫ್ಟ್ ಆಗಲು ನೆರವಾಗುತ್ತದೆ. ಕೇವಲ 9000 ರೂ.ಗೆ ಈ ಮೊಬೈಲ್ ಲಭ್ಯವಾಗಲಿದೆ. 

ರಿಲಯನ್ಸ್ ಜಿಯೋದ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಬಗ್ಗೆ ಈಗಾಗಲೇ ಹಲವು ವಿಚಾರ ಇಂಟರ್‌ನೆಟ್‌ನಲ್ಲಿ ಹರಿದಾಡ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ, Jio 5G ಫೋನ್‌ಗೆ ಸಂಬಂಧಿಸಿದ ಹಲವಾರು ವಿಷಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ

ಆದರೆ ಕ್ವಾಲ್ಕಾಮ್‌ನಲ್ಲಿ SVP ಮತ್ತು ಕ್ವಾಲ್ಕಾಮ್‌ನ ಹ್ಯಾಂಡ್‌ಸೆಟ್‌ಗಳ ಜನರಲ್ ಮ್ಯಾನೇಜರ್ ಕ್ರಿಸ್ ಪ್ಯಾಟ್ರಿಕ್ ಅವರ ಹೇಳಿಕೆಯು ಈ ಚೀಪೆಸ್ಟ್‌ ಮೊಬೈಲ್ ಶೀಘ್ರವೇ ಜನರ ಕೈಗೆ ತಲುಪಲಿದೆ ಎಂಬುದನ್ನು ಸೂಚಿಸುತ್ತದೆ.

'ಹೊಸ ಚಿಪ್‌ಸೆಟ್‌ನೊಂದಿಗೆ, ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಸಂಪೂರ್ಣ 5G ಅನುಭವವನ್ನು ನೀಡಲು ನಾವು ಮುಂದಾಗಿದ್ದೇವೆ. 4G ಮತ್ತು 5G ನಡುವಿನ ಪರಿವರ್ತನೆಯ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇವೆ' ಎಂದು SVP ಮತ್ತು ಹ್ಯಾಂಡ್‌ಸೆಟ್‌ಗಳ ಜನರಲ್ ಮ್ಯಾನೇಜರ್ ಕ್ರಿಸ್ ಪ್ಯಾಟ್ರಿಕ್ ಹೇಳಿದರು.

ಜಿಯೋ ಕೈಗೆಟುಕುವ ಫೋನ್‌ಗಾಗಿ ಜಾಗತಿಕ ಟೆಕ್ ದೈತ್ಯರೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆಕಾಶ್ ಅಂಬಾನಿಯವರ ಜಿಯೋ ಸಹ ಕೈಗೆಟುಕುವ ಬೆಲೆಯ 4G ಸಾಧನಕ್ಕಾಗಿ Google ನೊಂದಿಗೆ ಪಾಲುದಾರಿಕೆ ಹೊಂದಿದೆ.

ಆದರೆ, ಇದು ಜನರಿಂದ ಹೆಚ್ಚು ಗಮನ ಸೆಳೆಯಲು ವಿಫಲವಾಗಿದೆ. ಆದರೆ ಮುಂಬರುವ 5G ಫೋನ್‌ನಿಂದ ವಿಭಿನ್ನ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ.

click me!