24K ಗೋಲ್ಡ್‌, 159 ವಜ್ರ ಹೊದಿಸಿದ ಜಗತ್ತಿನ ಅತೀ ದುಬಾರಿ ಐಫೋನ್‌, ಅಬ್ಬಬ್ಬಾ.ಬೆಲೆ ಇಷ್ಟೊಂದಾ?

First Published | Feb 15, 2024, 2:50 PM IST

ಜನಪ್ರಿಯ ರಷ್ಯಾದ ಐಷಾರಾಮಿ ಬ್ರಾಂಡ್ ಕ್ಯಾವಿಯರ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್‌ನ ಸ್ಪೆಷಲ್‌ ಎಡಿಷನ್‌ ಬಿಡುಗಡೆ ಮಾಡಿದೆ. ಆದ್ರೆ ಬೆಲೆ ಮಾತ್ರ ಜನಸಾಮಾನ್ಯರ ಊಹೆಗೂ ಮೀರುವಂತಿದೆ.

ಜನಪ್ರಿಯ ರಷ್ಯಾದ ಐಷಾರಾಮಿ ಬ್ರಾಂಡ್ ಕ್ಯಾವಿಯರ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್‌ನ ವಿಶೇಷ ವ್ಯಾಲೆಂಟೈನ್ಸ್ ಡೇ ಆವೃತ್ತಿಯ ಮಾದರಿಗಳನ್ನು ಬಿಡುಗಡೆ ಮಾಡಿದೆ. ಇವುಗಳೊಂದಿಗೆ, ಕಂಪನಿಯು ಹೃದಯ ಆಕಾರದ ಆಪಲ್ ಏರ್‌ಟ್ಯಾಗ್ ಕೇಸ್‌ನ್ನು ಸಹ ಪರಿಚಯಿಸಿದೆ. ವಿಶೇಷ ಆವೃತ್ತಿಯನ್ನು "ಗಾರ್ಡನ್ ಆಫ್ ಈಡನ್" ಕಲೆಕ್ಷನ್ ಎಂದು ಹೆಸರಿಸಲಾಗಿದೆ.

ಡೈಮಂಡ್ ಮತ್ತು ಗೋಲ್ಡ್ ಸ್ಟಡೆಡ್ ಐಫೋನ್‌
ಕಂಪನಿಯು ಐಫೋನ್‌ 15 ಪ್ರೊ ಮತ್ತು ಐಪೋನ್‌ 15 ಪ್ರೊ ಮ್ಯಾಕ್ಸ್‌ ಮಾದರಿಗಳಿಗಾಗಿ ಗಾರ್ಡನ್ ಆಫ್ ಈಡನ್ ಸಂಗ್ರಹವನ್ನು ಪ್ರಾರಂಭಿಸಿದೆ. ಹೊಸ ಐಫೋನ್ ಸಂಗ್ರಹವು 18k ಚಿನ್ನದ ಡಿಸೈನ್‌ ಮತ್ತು ಕಪ್ಪು ವಜ್ರಗಳನ್ನು ಹೊಂದಿದೆ

Tap to resize

ಗಾರ್ಡನ್ ಆಫ್ ಈಡನ್ ಸಂಗ್ರಹ
ಕ್ಯಾವಿಯರ್‌ನಿಂದ 'ಗಾರ್ಡನ್ ಆಫ್ ಈಡನ್' ಸಂಗ್ರಹವು ಐದು ಕಸ್ಟಮ್ ಐಫೋನ್ 15 ಪ್ರೊ ಮಾದರಿಗಳನ್ನು ಒಳಗೊಂಡಿದೆ. ಪ್ರತಿಯೊಂದು ಮಾದರಿಯು ವಜ್ರಗಳು, ರತ್ನದ ಕಲ್ಲುಗಳು ಮತ್ತು Swarovski ಸ್ಫಟಿಕಗಳನ್ನು ಒಳಗೊಂಡಿದೆ.

ಮಿಸ್ಟಿಕಲ್ ಪ್ಯಾಂಥರ್' 18K ಚಿನ್ನದ ಮಾದರಿ
'ಗಾರ್ಡನ್ ಆಫ್ ಈಡನ್' ಸಂಗ್ರಹದ 'ಮಿಸ್ಟಿಕಲ್ ಪ್ಯಾಂಥರ್' ಮಾದರಿಯನ್ನು 18 ಕೆ ಚಿನ್ನ ಮತ್ತು ಕಪ್ಪು ವಜ್ರಗಳನ್ನು ಬಳಸಿ ತಯಾರಿಸಲಾಗುತ್ತದೆ. ಐಫೋನ್ ಮಾದರಿಯು ಕಪ್ಪು ವಜ್ರಗಳಿಂದ ಕೂಡಿದ ಗೋಲ್ಡ್ ಪ್ಯಾಂಥರ್ ಅನ್ನು ಹೊಂದಿದೆ.

'ಬರ್ಡ್ ಆಫ್ ದಿ ಪ್ಯಾರಡೈಸ್' 
'ಬರ್ಡ್ ಆಫ್ ಪ್ಯಾರಡೈಸ್' ಮಾದರಿಯು ಚಿನ್ನದಿಂದ ಮಿನುಗುವ ಸ್ವರೋವ್ಸ್ಕಿ ಹರಳುಗಳನ್ನು ಹೊಂದಿದೆ. ವಿನ್ಯಾಸವು ಪ್ರಕೃತಿಯ ಸೌಂದರ್ಯವನ್ನು ಪ್ರದರ್ಶಿಸುತ್ತದೆ. 24-ಕ್ಯಾರಟ್ ಚಿನ್ನ ಮತ್ತು ಬಣ್ಣದ ದಂತಕವಚದ ಸಂಯೋಜನೆಯಾಗಿದೆ.
 

ಲವ್ಲಿ ಚಿಟ್ಟೆಗಳ ಡಿಸೈನ್‌
24-ಕ್ಯಾರಟ್ ಚಿನ್ನ ಮತ್ತು 35 ವಜ್ರಗಳಿಂದ ಮುಚ್ಚಿದ ಚಿಟ್ಟೆಗಳನ್ನು ಒಳಗೊಂಡಿರುವ 'ಲವ್ಲಿ ಬಟರ್‌ಫ್ಲೈಸ್' ಎಂಬ ಮಾದರಿಯೂ ಇದೆ.

 ಅದ್ಭುತ ಆರ್ಕಿಡ್ ಮಾದರಿ
ಹೆಸರ ಸೂಚಿಸುವಂತೆ, 'ಅದ್ಭುತ ಆರ್ಕಿಡ್' ಮಾದರಿಯು 24 ಕ್ಯಾರೆಟ್ ಚಿನ್ನದಿಂದ ಮಾಡಿದ ಆರ್ಕಿಡ್ ಹೂವುಗಳನ್ನು ಹೊಂದಿದೆ. ಇದರೊಂದಿಗೆ ವಿಶೇಷ ಆವೃತ್ತಿಯು 9 ವಜ್ರಗಳನ್ನು ಸಹ ಒಳಗೊಂಡಿದೆ.

ಸ್ವೀಟ್ ಆಪಲ್ ಡಿಸೈನ್
ಕ್ಯಾವಿಯರ್ 'ಸ್ವೀಟ್ ಆಪಲ್' ಐಫೋನ್ ಮಾದರಿಯು 24 ಕ್ಯಾರಟ್ ಚಿನ್ನದಿಂದ ಮಾಡಲ್ಪಟ್ಟಿದೆ ಮತ್ತು ಐಫೋನ್‌ನ ಫ್ರೇಮ್‌ನೊಂದಿಗೆ ಹಸಿರು ಕ್ಯಾಫ್‌ಸ್ಕಿನ್‌ನಿಂದ ಮಾಡಲ್ಪಟ್ಟಿದೆ.

Latest Videos

click me!