2026ರ ಫಿಫಾ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಕಿಲಿಯನ್ ಎಂಬಾಪೆ ತಲಾ 8 ಗೋಲು ಗಳಿಸಿದ್ದಾರೆ. ಗೋಲು, ಅಸಿಸ್ಟ್ ಮತ್ತು ನಿಮಿಷಗಳ ಆಧಾರದ ಮೇಲೆ ಫಿಫಾ ಗೋಲ್ಡನ್ ಬೂಟ್ ವಿಜೇತರನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಫಿಫಾ ವಿಶ್ವಕಪ್‌ನ ಶ್ರೇಷ್ಠ ಗೋಲ್‌ಸ್ಕೋರರ್‌ಗೆ ನೀಡುವ 'ಗೋಲ್ಡನ್ ಬೂಟ್' ಪ್ರಶಸ್ತಿಗಾಗಿ ನಡೆಯುತ್ತಿರುವ ಹೋರಾಟ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಅರ್ಜೆಂಟೀನಾದ ನಾಯಕ ಲಿಯೋನೆಲ್ ಮೆಸ್ಸಿ ಮತ್ತು ಫ್ರೆಂಚ್ ಸೂಪರ್‌ಸ್ಟಾರ್ ಕಿಲಿಯನ್ ಎಂಬಾಪೆ ತಲಾ 8 ಗೋಲು ಗಳಿಸಿ ಪ್ರಶಸ್ತಿಗಾಗಿ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿದ್ದಾರೆ.
26
ಗೋಲು ಸಮವಾದರೇ ಫಿಫಾ ರೂಲ್ಸ್ ಏನು?
ಆದರೆ, ಕೇವಲ ಹೆಚ್ಚು ಗೋಲು ಗಳಿಸಿದ ಮಾತ್ರಕ್ಕೆ ಒಬ್ಬ ಆಟಗಾರನಿಗೆ ಗೋಲ್ಡನ್ ಬೂಟ್ ಸಿಗುವುದಿಲ್ಲ. ಫಿಫಾದ ಕಠಿಣ ಟೈ-ಬ್ರೇಕರ್ ನಿಯಮಗಳು ಈ ಸ್ಪರ್ಧೆಯನ್ನು ಇನ್ನಷ್ಟು ರೋಚಕಗೊಳಿಸಿವೆ. ಗೋಲುಗಳ ಸಂಖ್ಯೆಯಲ್ಲಿ ಇಬ್ಬರೂ ಸಮಬಲರಾಗಿದ್ದರೂ, ಗೋಲ್ಡನ್ ಬೂಟ್ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ ಸದ್ಯಕ್ಕೆ ಮೊದಲ ಸ್ಥಾನದಲ್ಲಿದ್ದಾರೆ. ಮೆಸ್ಸಿ 8 ಗೋಲುಗಳ ಜೊತೆಗೆ 4 ಅಸಿಸ್ಟ್‌ಗಳನ್ನು (ಗೋಲಿಗೆ ನೆರವಾದ ಪಾಸ್‌ಗಳು) ನೀಡಿದ್ದಾರೆ. ಆದರೆ, ಎಂಬಾಪೆ ಕೇವಲ 3 ಅಸಿಸ್ಟ್‌ಗಳನ್ನು ಮಾತ್ರ ಹೊಂದಿದ್ದಾರೆ.
36
ಎಂಬಾಪೆಗೂ ಇದೆ ಇನ್ನೊಂದು ಚಾನ್ಸ್
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಸ್ಪೇನ್ ಅನ್ನು ಎದುರಿಸಲಿದ್ದು, ಮೆಸ್ಸಿಗೆ ಪ್ರಶಸ್ತಿ ಖಚಿತಪಡಿಸಿಕೊಳ್ಳಲು ಉತ್ತಮ ಅವಕಾಶವಿದೆ. ಸೆಮಿಫೈನಲ್‌ನಲ್ಲಿ ಫ್ರಾನ್ಸ್ ಸೋತಿದ್ದರೂ, ಇಂಗ್ಲೆಂಡ್ ವಿರುದ್ಧದ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ (ಲೂಸರ್ಸ್ ಫೈನಲ್) ಗೋಲು ಅಥವಾ ಅಸಿಸ್ಟ್ ಗಳಿಸಿ ಮೆಸ್ಸಿಯನ್ನು ಹಿಂದಿಕ್ಕಲು ಎಂಬಾಪೆಗೂ ಒಂದು ಅವಕಾಶವಿದೆ.
ಒಂದು ವೇಳೆ ಗೋಲುಗಳ ಸಂಖ್ಯೆ ಸಮವಾದರೆ, ಹೆಚ್ಚು ಅಸಿಸ್ಟ್‌ಗಳನ್ನು (ಗೋಲಿಗೆ ನೆರವು) ನೀಡಿದ ಆಟಗಾರನನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆದರೆ ಗೋಲು ಮತ್ತು ಅಸಿಸ್ಟ್‌ಗಳೆರಡೂ ಸಮವಾದರೆ? ಆಗ ಮುಂದಿನ ಟ್ವಿಸ್ಟ್ ಬರುತ್ತದೆ. ಇವೆರಡೂ ಸಮವಾದರೆ, ಟೂರ್ನಿಯಲ್ಲಿ ಅತಿ ಕಡಿಮೆ ನಿಮಿಷ ಆಡಿದ ಆಟಗಾರನಿಗೆ ಪ್ರಶಸ್ತಿ ನೀಡಲಾಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಪ್ರಭಾವ ಬೀರಿದ ಆಟಗಾರ ಎಂಬುದು ಇದರ ಮಾನದಂಡ.
56
1982ರಿಂದ ಆರಂಭವಾಗಿರುವ ಗೋಲ್ಡನ್ ಬೂಟ್ ಪ್ರಶಸ್ತಿ
1982ರಲ್ಲಿ ಅಧಿಕೃತವಾಗಿ ಆರಂಭವಾದ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು 1994ರ ವಿಶ್ವಕಪ್‌ನಲ್ಲಿ ಜಂಟಿಯಾಗಿ ನೀಡಲಾಗಿತ್ತು. ಆಗ ರಷ್ಯಾದ ಒಲೆಗ್ ಸಲೆಂಕೊ ಮತ್ತು ಬಲ್ಗೇರಿಯಾದ ಹ್ರಿಸ್ಟೋ ಸ್ಟೊಯಿಚ್ಕೋವ್ ತಲಾ 6 ಗೋಲು ಮತ್ತು 1 ಅಸಿಸ್ಟ್ ಗಳಿಸಿ ಸಮಬಲ ಸಾಧಿಸಿದ್ದರು. ಹೀಗಾಗಿ ಇಬ್ಬರಿಗೂ ಪ್ರಶಸ್ತಿ ಹಂಚಿಕೆ ಮಾಡಲಾಗಿತ್ತು.
66
ಮೆಸ್ಸಿ, ಎಂಬಾಪೆ ಮಾತ್ರವಲ್ಲ; ರೇಸ್‌ನಲ್ಲಿರುವ ಇತರ ಆಟಗಾರರು ಇವರು
ಕೇವಲ ಮೆಸ್ಸಿ ಮತ್ತು ಎಂಬಾಪೆ ಮಾತ್ರವಲ್ಲ, ಗೋಲ್ಡನ್ ಬೂಟ್ ರೇಸ್‌ನಲ್ಲಿ ಬೇರೆ ಆಟಗಾರರೂ ಇದ್ದಾರೆ. ಇಂಗ್ಲೆಂಡ್‌ನ ಜೂಡ್ ಬೆಲ್ಲಿಂಗ್‌ಹ್ಯಾಮ್ (6 ಗೋಲು, 1 ಅಸಿಸ್ಟ್), ಹ್ಯಾರಿ ಕೇನ್ (6 ಗೋಲು, 1 ಅಸಿಸ್ಟ್), ಫ್ರಾನ್ಸ್‌ನ ಉಸ್ಮಾನ್ ಡೆಂಬೆಲೆ (5 ಗೋಲು, 2 ಅಸಿಸ್ಟ್) ಮತ್ತು ಸ್ಪೇನ್‌ನ ಮೈಕೆಲ್ ಒಯಾರ್ಜಬಾಲ್ (5 ಗೋಲು, 1 ಅಸಿಸ್ಟ್) ಕೂಡ ಮುಂಬರುವ ಪಂದ್ಯಗಳಲ್ಲಿ ಮಿಂಚಿದರೆ ಗೋಲ್ಡನ್ ಬೂಟ್ ಗೆಲ್ಲುವ ಸಾಧ್ಯತೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.