ಅರ್ಜೆಂಟೀನಾ ತಂಡದ ನಾಯಕ ಮತ್ತು ವಿಶ್ವದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಹಾಗೂ ಅವರ ಅಭಿಮಾನಿಗಳಿ ಅಪಾರ ಸಂಭ್ರಮ. ವಿಶ್ವಕಪ್‌ನಂಥ ವೇದಿಕೆಯಲ್ಲಿ ಅರ್ಜೆಂಟೀನಾ ಮಾಂತ್ರಿಕ ಆಟವಾಡುತ್ತಿದ್ದರೆ, ಅದಕ್ಕೆ ಸೂತ್ರಧಾರನಾಗಿರುವುದು ಲಿಯೋನೆಮ್ ಮೆಸ್ಸಿ. ತಂಡ ವಿಶ್ವಕಪ್ ಫೈನಲ್‌ಗೇರಲು ನಾಯಕ ಮೆಸ್ಸಿ ಆಟ ಅಪಾರವಾದ ಕೊಡುಗೆ ನೀಡಿದೆ.
ಇದು ತಮ್ಮ ಕೊನೆಯ ವಿಶ್ವಕಪ್ ಎಂದು 35 ವರ್ಷದ ಮೆಸ್ಸಿ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ತಮ್ಮ ನಾಯಕತ್ವದಲ್ಲಿ ಮೊದಲನೆಯ ಹಾಗೂ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿ ಅರ್ಜೆಂಟೀನಾ ತಂಡವಿದೆ. ಅದ್ಭುತ ಆಟವಾಡಿರುವ ಮೆಸ್ಸಿ ಟೂರ್ನಿಯಲ್ಲಿ ಈವರೆಗೂ 5 ಗೋಲು ಬಾರಿಸಿದ್ದಾರೆ.
ವಿಶ್ವಕಪ್‌ನಲ್ಲಿ ಗೋಲ್ಡನ್ ಬೂಟ್ ರೇಸ್‌ನ ಪ್ರಬಲ ಸ್ಪರ್ಧಿಯಾಗಿರುವ ಮೆಸ್ಸಿ ಮೈದಾನದ ಹೊರಗೆ ಕೂಡ ಅದ್ದೂರಿ ಜೀವನವನ್ನು ನಡೆಸುತ್ತಿದ್ದಾರೆ. ಮೆಸ್ಸಿ ಪ್ರಪಂಚದಾದ್ಯಂತ 23 ಮಿಲಿಯನ್ ಪೌಂಡ್ (234 ಕೋಟಿ ರೂಪಾಯಿ) ಮೌಲ್ಯದ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ.
ಗೋಲ್ ಡಾಟ್ ಕಾಮ್ ವರದಿಯ ಪ್ರಕಾರ, ಮೆಸ್ಸಿನ ಪ್ರಸ್ತುತ ಮೌಲ್ಯ ಅಂದಾಜು 400 ಮಿಲಿಯನ್ ಡಾಲರ್ (3268 ಕೋಟಿ ರೂಪಾಯಿ). ವಿಶ್ವದ ಗರಿಷ್ಠ ಆದಾಯದ ಫುಟ್ಬಾಲ್ ಆಟಗಾರರ ಫೋರ್ಬ್ಸ್ ಪಟ್ಟಿಯಲ್ಲಿ ಮೆಸ್ಸಿ ಅಗ್ರಸ್ಥಾನದಲ್ಲಿದ್ದಾರೆ. ಅದರ ಆದಾಯವೇ ಅಂದಾಜು 130 ಮಿಲಿಯನ್ ಡಾಲರ್ (1062 ಕೋಟಿ ರೂಪಾಯಿ) ಆಗಿದೆ.
ವಿಶ್ವದ ಮೂರು ದೇಶಗಳ ನಾಲ್ಕು ಪ್ರದೇಶಗಳಲ್ಲಿ ಮೆಸ್ಸಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಇದರಲ್ಲಿ ಅತ್ಯಂತ ದುಬಾರಿಯಾದ ಮನೆ, ಸ್ಪೇನ್‌ನ ದೇಶದ ಇಬಿಜಾ ದ್ವೀಪದಲ್ಲಿದೆ. ಇದರ ಮೌಲ್ಯ ಅಂದಾಜು 9.5 ಮಿಲಿಯನ್ ಪೌಂಡ್ (97 ಕೋಟಿ ರೂಪಾಯಿ). ಇದನ್ನು ರಜಾ ದಿನಗಳಲ್ಲಿ ಮಾತ್ರವೇ ಮೆಸ್ಸಿ ಬಳಸುತ್ತಾರೆ. ಆದರೆ, ಈ ಮನೆ ಇನ್ನೂ ಸಂಪುರ್ಣವಾಗಿ ವಾಸಕ್ಕೆ ಬಳಕೆ ಆಗಿಲ್ಲ. ಮನೆಯ ಕೆಲಸ ಕಾರ್ಯಗಳು ಇನ್ನೂ ನಡೆಯುತ್ತಿವೆ.
ಅದರೊಂದಿಗೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಮೆಸ್ಸಿ ಮತ್ತೊಂದು ವಿಲಾಸಿ ಬಂಗಲೆ ಹೊಂದಿದ್ದಾರೆ. ಇದರ ಮೌಲ್ಯ 5.5 ಮಿಲಿಯನ್ ಪೌಂಡ್ (56 ಕೋಟಿ ರೂ). ಈ ಮನೆಯು ಬಾರ್ಸಿಲೋನಾ ಎಫ್‌ಸಿಯ ತವರು ಮೈದಾನವಾದ ಕಾಂಪ್ ನು ಸ್ಟೇಡಿಯಂನಿಂದ ಬರೀ 12 ಕಿಲೋಮೀಟರ್ ದೂರದಲ್ಲಿದೆ. ಮೆಸ್ಸಿಯ ಪತ್ನಿ ಅಂಟೋನೆಲ್ಲಾ ರಕ್ಕುಜೋ ಹಾಗೂ ಅವರ ಮೂವರು ಪುತ್ರರು ಕೂಡ ಈ ಮನೆಯನ್ನು ಬಹಳ ಇಷ್ಟಪಡುತ್ತಾರೆ. ಇಲ್ಲಿ ಚಿನ್ನ ಫುಟ್‌ಬಾಲ್ ಮೈದಾನ, ಇಂಡೋರ್ ಜಿಮ್ ಹಾಗೂ ಆಟದ ಮೈದಾನಗಳಿವೆ.
ಅಮೆರಿಕದ ಮಿಯಾಮಿಯಲ್ಲೂ ಕೂಡ ಮೆಸ್ಸಿ ಫ್ಲ್ಯಾಟ್ ಹೊಂದಿದ್ದಾರೆ. ಇದರ ಮೌಲ್ಯ 5 ಮಿಲಿಯನ್ ಪೌಂಡ್ (50 ಕೋಟಿ). ಸನ್ನಿ ಐಸ್ಲೆಸ್ ಬೀಚ್‌ಗೆ ಮುಖವಾಗಿ ಈ ಅಪಾರ್ಟ್‌ಮೆಂಟ್ ಇದೆ. ವಿಶ್ವದ ಅತ್ಯಂತ ವಿಲಾಸಿ ಮಿಯಾಮಿ ಬೀಚ್‌ನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಈ ಫ್ಲ್ಯಾಟ್ ಇದೆ.
ಮೆಸ್ಸಿ ತಮ್ಮ 13ನೇವಯಸ್ಸಿನಲ್ಲಿಯೇ ಅರ್ಜೆಂಟೀನಾದ ರೊಸಾರಿಯೋವನ್ನು ತೊರೆದು ಬಾರ್ಸಿಲೋನಾಗೆ ತೆರಳಿದ್ದರು. ಆದರೆ, ಇತ್ತೀಚೆಗೆ ಅಂದಾಜು 3 ಮಿಲಿಯನ್ ಪೌಂಡ್ (30 ಕೋಟಿ ರೂ) ನೀಡಿ, ರೊಸಾರಿಯೋದಲ್ಲಿ ಬಂಗಲೆ ಖರೀದಿ ಮಾಡಿದ್ದಾರೆ. ಇದಕ್ಕೆ ದಿ ಫಾರ್ಟೆಸ್ ಎಂದು ಹೆಸರಿಟ್ಟಿದ್ದಾರೆ. ಇದು ರೊಸಾರಿಯೋದ ಗ್ರಾಮಾಂತರವಾಗಿದ್ದು, ಇಲ್ಲಯೇ ಮೆಸ್ಸಿ ಜನಿಸಿದ್ದರು. ಬರೋಬ್ಬರಿ 15 ಕಾರ್‌ಗಳನ್ನು ಇಡಬಹುದಾದ ಅಂಡರ್‌ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ. ಒಟ್ಟಾರೆ 20 ರಿಂದ 25 ಕೋಣೆಗಳು ಇಲ್ಲಿರಬಹುದು ಎಂದು ಅಂದಾಜಿಸಲಾಗಿದೆ.