ಫಿಫಾ ವರ್ಲ್ಡ್‌ಕಪ್‌ ಪ್ರದರ್ಶನದ ವೇಳೆ ಭಾರತದ ಧ್ವಜ ಎತ್ತಿ ಹಿಡಿದ ನೋರಾ ಫತೇಹಿ

First Published | Nov 30, 2022, 6:30 PM IST

ಕತಾರ್ ಅಲ್ ಬಿದ್ದಾ ಪಾರ್ಕ್‌ನಲ್ಲಿ ನಡೆದ FIFA ವಿಶ್ವಕಪ್ 2022 (FIFA World Cup 2022 ) ಅಭಿಮಾನಿಗಳ ಉತ್ಸವದಲ್ಲಿ ಬಾಲಿವುಡ್‌ ನಟಿ ನೋರಾ ಫತೇಹಿ  (Nora Fatehi)ಪ್ರದರ್ಶನ ನೀಡಿದರು. ಆಕೆಯ ನೃತ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಜೋರಾಗಿ ಹುರಿದುಂಬಿಸುತ್ತಿದ್ದರು.  ಈ ಸಮಯದಲ್ಲಿ ನೋರಾ ಭಾರತದ ಧ್ವಜವನ್ನು ಎತ್ತಿ ಹಿಡಿದರು. ಈ ವಿಡಿಯೋ ಫೋಟೋಗಳು ಸಖತ್‌ ವೈರಲ್‌ ಆಗಿವೆ

ನವೆಂಬರ್ 29, 2022 ರಂದು ಕತಾರ್‌ನ ದೋಹಾದಲ್ಲಿ ಅಲ್ ಬಿದ್ದಾ ಪಾರ್ಕ್‌ನಲ್ಲಿ ನಡೆದ FIFA ವಿಶ್ವಕಪ್ 2022 ಕತಾರ್ ಅಭಿಮಾನಿಗಳ ಉತ್ಸವದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಭಾರತದ ಧ್ವಜವನ್ನು ಬೀಸಿದರು.

ಅದ್ಭುತ ಪ್ರದರ್ಶನದ ಜೊತೆ ಹೊಳೆಯುವ ಔಟ್‌ ಫಿಟ್‌ ಧರಿಸುವ ಮೂಲಕ ನೋರಾ  ಹಾಟ್‌ನೆಸ್ ಮಟ್ಟವನ್ನು ಹೆಚ್ಚಿಸಿದರು. ಬಾಲಿವುಡ್‌ ನಟಿ ತಮ್ಮ ಪಾರ್ಫಾರ್ಮೆನ್ಸ್‌  ಮೂಲಕ ಇಡೀ ವಿಶ್ವದ ಹೃದಯ ಗೆದ್ದಿದ್ದಾರೆ

Tap to resize

ತನ್ನ ಕಿಲ್ಲರ್ ಡ್ಯಾನ್ಸ್ ಮೂವ್‌ಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್‌ ನೋರಾ ಫತೇಹಿ   ತನ್ನ ತಂಡದೊಂದಿಗೆ FIFA ವಿಶ್ವಕಪ್ 2022 ನಲ್ಲಿ ಪ್ರದರ್ಶನ ನೀಡಿದರು. ಈ ಸಮಯದ ಅವರ ಫೋಟೋಗಳು ಮತ್ತು ವೀಡಿಯೊಗಳು ಈಗ ವೈರಲ್ ಆಗಿದ್ದು, ನೋರಾ ತನ್ನ  ಪ್ರದರ್ಶನದಿಂದ ಕ್ರೀಡಾಂಗಣಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಕಾಣಬಹುದು. 

ನೋರಾ ಕೂಡ ತನ್ನ ಇನ್‌ಸ್ಟಾ ಸ್ಟೋರಿಗಳಲ್ಲಿ ಅದರ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅಭಿಮಾನಿಗಳು ಅವರನ್ನು ಹುರಿದುಂಬಿಸುವುದನ್ನು ಕಾಣಬಹುದು. 

ಇದಕ್ಕೂ ಮೊದಲು, FIFA ವಿಶ್ವಕಪ್ 2022 ನಲ್ಲಿ ಇತ್ತೀಚೆಗೆ ಪೋರ್ಚುಗಲ್ ಮತ್ತು ಬ್ರೆಜಿಲ್ ನಡುವಿನ ಪಂದ್ಯದ ವೀಡಿಯೊಗಳು ವೈರಲ್ ಆಗಿದ್ದವು, ಅಲ್ಲಿ ನೋರಾ ಪಂದ್ಯವನ್ನು ಆನಂದಿಸುತ್ತಿರುವುದನ್ನು ಕಾಣಬಹುದು 

ಆ ಸಮುದಲ್ಲಿ ಅವರ  ಹಾಡು ಲೈಟ್ ದಿ ಸ್ಕೈ ಪ್ಲೇಯಾದಾಗ ಅವಳು  ಸರ್‌ಫ್ರೈಸ್‌ ಆದರು ಹಾಗೂ ನಂತರ  ಅವಳು ಹಾಡಿಗೆ ಡ್ಯಾನ್ಸ್‌ ಮಾಡಲು ಪ್ರಾರಂಭಿಸಿದರು.  ದೃಶ್ಯವನ್ನು ನಟಿ ತನ್ನ ಫ್ಯಾನ್ಸ್‌ ಮತ್ತು ಪಾಲೋವರ್ಸ್‌ ಜೊತೆ  Instagram ನಲ್ಲಿ ಹಂಚಿಕೊಂಡಿದ್ದಾರೆ. 

'ವಿಶ್ವಕಪ್ ಕ್ರೀಡಾಂಗಣ @fifaworldcup ದಲ್ಲಿ ನೀವು ನಿಮ್ಮ ಧ್ವನಿಯನ್ನೇ ಕೇಳಿದಾಗ ಅದು ತುಂಬಾ ಅತಿವಾಸ್ತವಿಕವಾಗಿತ್ತು. ಈ ಮೈಲಿಗಲ್ಲುಗಳು ಪ್ರಯಾಣವನ್ನು ತುಂಬಾ ಮೌಲ್ಯಯುತವಾಗಿಸುತ್ತದೆ. ನಾನು ಯಾವಾಗಲೂ ಇಂತಹ ಕ್ಷಣಗಳನ್ನು ಕಲ್ಪಿಸಿಕೊಂಡಿದ್ದೇನೆ, ನಾನು ಆ ಕನಸುಗಳನ್ನು ಜೀವಂತವಾಗಿಸುವ ಹಸಿವನ್ನು ಹೊಂದಿರುವ ಕನಸುಗಾರಳಾಗಿದ್ದೇನೆ. ಸಾಮಾನ್ಯ ಹುಡುಗಿಯಿಂದ ಹಿಡಿದು ಇಲ್ಲಿಯವರೆಗೆ.ನಿಮ್ಮನ್ನು ನೀವು ನಂಬಿ, ನಿಮಗೆ ಸಾಧ್ಯವಿಲ್ಲ ಎಂದು ಯಾರೂ ನಿಮಗೆ ಹೇಳಲು ಬಿಡಬೇಡಿ, ನಿಮ್ಮ ಕನಸುಗಳು ಎಂದಿಗೂ ದೊಡ್ಡದಲ್ಲ! ಆರಂಭದಲ್ಲಿ ಅನೇಕರು ನನ್ನನ್ನು ನೋಡಿ ನಕ್ಕರು ಆದರೆ ನಾನು ಇಲ್ಲಿದ್ದೇನೆ ಮತ್ತು ಇದು ಕೇವಲ ಪ್ರಾರಂಭ' ಎಂದು ನೋರಾ ಅವರ ವಿಡೀಯೋ ಜೊತೆ ಪೋಸ್ಟ್‌ನಲ್ಲಿ ಬರೆದಿದ್ದಾರೆ. 

42 ಮಿಲಿಯನ್‌ಗಿಂತ ಹೆಚ್ಚು ಫಾಲೋವರ್ಸ್‌ ಹೊಂದಿರುವ ನೋರಾ ಫತೇಹಿ Instagram ನಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಅರಬ್ ಕಲಾವಿದೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ

Latest Videos

click me!