Forbes 2022: ಜಗತ್ತಿನ ಟಾಪ್ 10 ಗರಿಷ್ಠ ಸಂಪಾದನೆ ಮಾಡುವ ಫುಟ್ಬಾಲಿಗರು, ರೊನಾಲ್ಡೋ, ಮೆಸ್ಸಿಗಿಂತ ಶ್ರೀಮಂತ ಈ ಫುಟ್ಬಾಲಿಗ

First Published | Nov 18, 2022, 1:47 PM IST

ಬೆಂಗಳೂರು(ನ.18): ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ಫಿಫಾ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ನವೆಂಬರ್ 20ರಿಂದ ಕತಾರ್‌ನಲ್ಲಿ ಕಾಲ್ಚಂಡಿನ ಮಹಾ ಸಂಗ್ರಾಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಕುರಿತಂತೆ ಈಗಾಗಲೇ ಅಭ್ಯಾಸ ಪಂದ್ಯಗಳು ಆರಂಭವಾಗಿವೆ. ಹೀಗಾಗಿ ಫುಟ್ಬಾಲ್ ಅಭಿಮಾನಿಗಳ ಚಿತ್ತ ಫುಟ್ಬಾಲ್ ವಿಶ್ವಕಪ್‌ನತ್ತ ನೆಟ್ಟಿದೆ.

ಇದೀಗ 2022 ಫೋರ್ಬ್ಸ್‌ ಮ್ಯಾಗಜಿನ್‌, ಜಗತ್ತಿನ 10 ಶ್ರೀಮಂತ ಫುಟ್ಬಾಲಿಗರ ಹೆಸರನ್ನು ಬಹಿರಂಗ ಪಡಿಸಿದ್ದು, 23 ವರ್ಷದ ಕೈಲಿಯನ್ ಎಂಬಾಪೆ, ಅತ್ಯಂತ ಗರಿಷ್ಠ ಸಂಪಾದನೆ ಮಾಡುವ ಫುಟ್ಬಾಲಿಗ ಎನಿಸಿಕೊಂಡಿದ್ದಾರೆ.  ಜಗತ್ತಿನ ಟಾಪ್ 10 ಗರಿಷ್ಠ ಸಂಪಾದನೆ ಮಾಡುವ ಫುಟ್ಬಾಲಿಗರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
 

1. ಕೈಲಿಯನ್ ಎಂಬಾಪೆ: ಫ್ರಾನ್ಸ್‌ ತಂಡದ ಫುಟ್ಬಾಲಿಗ ಕೈಲಿಯನ್ ಎಂಬಾಪೆ ತಮ್ಮ ಡ್ರಿಬ್ಲಿಂಗ್ ಸ್ಕಿಲ್ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಪ್ಯಾರಿಸ್ ಸೈಂಟ್ ಜರ್ಮೈನ್ ತಂಡ ಪ್ರತಿನಿಧಿಸುವ ಎಂಬಾಪೆ ಸದ್ಯ 128 ಮಿಲಿಯನ್ ಡಾಲರ್ ಒಡೆಯ. ಭಾರತೀಯ ರುಪಾಯಿಗಳಲ್ಲಿ ಅಂದಾಜು 10,44,39,16,800 ಕೋಟಿ ರುಪಾಯಿಗಳು.

2. ಲಿಯೋನೆಲ್ ಮೆಸ್ಸಿ: ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಅರ್ಜೆಂಟೀನಾ ತಂಡದ ಸ್ಟಾರ್ ಫುಟ್ಬಾಲಿಗ. ಕ್ಲಬ್ ಕ್ರಿಕೆಟ್‌ನಲ್ಲಿ ಪ್ಯಾರಿಸ್ ಸೈಂಟ್ ಜರ್ಮೈನ್ ತಂಡ ಪ್ರತಿನಿಧಿಸುವ ಮೆಸ್ಸಿ, ಸದ್ಯ, 110 ಮಿಲಿಯಮ್ ಡಾಲರ್ ಒಡೆಯ.

Tap to resize

3. ಕ್ರಿಸ್ಟಿಯಾನೋ ರೊನಾಲ್ಡೋ: ತಮ್ಮ ಅದ್ಭುತ ಕಾಲ್ಚಳಕದ ಮೂಲಕ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ರೊನಾಲ್ಡೋ, ಪೋರ್ಚುಗಲ್ ತಂಡದ ಆಧಾರ ಸ್ತಂಭ. ಇನ್ನು ರೊನಾಲ್ಡೊ ಮ್ಯಾಂಚೆಸ್ಟರ್ ತಂಡದ ಸ್ಟಾರ್ ಆಟಗಾರನಾಗಿದ್ದು, ಅವರ 2022ರ ಆದಾಯ 100 ಮಿಲಿಯನ್ ಡಾಲರ್

4. ನೇಮರ್: ಆಧುನಿಕ ಫುಟ್ಬಾಲ್‌ನ ಮಾಂತ್ರಿಕ ಫುಟ್ಬಾಲಿಗನೆಂದೇ ಗುರುತಿಸಿಕೊಂಡಿರುವ ಬ್ರೆಜಿಲ್‌ನ ನೇಮರ್ ಜೂನಿಯರ್, ಪ್ಯಾರಿಸ್ ಸೈಂಟ್ ಜರ್ಮೈನ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಈ ವರ್ಷವೇ 87 ಮಿಲಿಯನ್ ಡಾಲರ್ ಸಂಪಾದನೆ ಮಾಡಿದ್ದಾರೆ.
 

5. ಮೊಹಮ್ಮದ್ ಸಲಾ: ಈಜಿಫ್ಟ್ ಫುಟ್ಬಾಲ್ ತಂಡದ ನಾಯಕ ಮೊಹಮ್ಮದ್ ಸಲಾ, ಲಿವರ್‌ಪೂಲ್ ತಂಡದ ಗೋಲ್ ಮಶೀನ್‌. ಮೊಹಮ್ಮದ್ ಸಲಾ 2022ರಲ್ಲಿ 53 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ.
 

6. ಎರ್ಲಿಂಗ್ ಹೋಲ್ಯಾಂಡ್: ನಾರ್ವೆ ಯುವ ಫುಟ್ಬಾಲ್ ಪ್ರತಿಭೆ ಎರ್ಲಿಂಗ್ ಹೋಲ್ಯಾಂಡ್, ಪ್ರೀಮಿಯರ್ ಲೀಗ್ ಕ್ಲಬ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಎರ್ಲಿಂಗ್ ಹೋಲ್ಯಾಂಡ್, 2022ರ ಸಂಭಾವನೆ 39 ಮಿಲಿಯನ್ ಡಾಲರ್‌ಗಳಾಗಿವೆ.

7. ರೊಬೆರ್ಟ್‌ ಲೆವನಡೊವಸ್ಕಿ: ಪೋಲೆಂಡ್ ತಂಡದ ನಾಯಕ ರೊಬೆರ್ಟ್‌ ಲೆವನಡೊವಸ್ಕಿ, ಲಾ ಲಿಗಾ ಟೂರ್ನಿಯಲ್ಲಿ ಬಾರ್ಸಿಲೋನಾ ತಂಡವನ್ನು ಪ್ರತಿನಿಧಿಸುತ್ತಿದ್ದು, ಈ ವರ್ಷ 35 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ.

8. ಎಡೆನ್ ಹೆಜಾರ್ಡ್‌: ಬೆಲ್ಜಿಯಂ ಫುಟ್ಬಾಲ್ ತಂಡದ ನಾಯಕ ಎಡೆನ್ ಹೆಜಾರ್ಡ್‌, ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಈ ವರ್ಷ ಹೆಜಾರ್ಡ್ 31 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ.

9. ಅಂಡ್ರೆಸ್ ಇನಿಸ್ಟಾ: ಸ್ಪೇನ್ ಫುಟ್ಬಾಲ್ ದಂತಕಥೆ ಅಂಡ್ರೆಸ್ ಇನಿಸ್ಟಾ ತಮ್ಮ ವೃತ್ತಿಜೀವನದ ಬಹುಪಾಲು ಭಾಗ ಬಾರ್ಸಿಲೋನಾ ತಂಡವನ್ನು ಪ್ರತಿನಿಧಿಸಿದ್ದರು. ಸದ್ಯ ವಿಸೆಲ್ ಕೋಬ್ ತಂಡ ಪ್ರತಿನಿಧಿಸುವ ಅಂಡ್ರೆಸ್, ಈ ವರ್ಷ 25 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ. 

10. ಕೆವಿನ್ ಡಿ ಬೃಯ್ನೆ: ಆಧುನಿಕ ಕ್ರಿಕೆಟ್‌ನ ಪರಿಪೂರ್ಣ ಫುಟ್ಬಾಲಿಗ ಎನಿಸಿಕೊಂಡಿರುವ ಬೆಲ್ಜಿಯಂನ ಅನುಭವಿ ಫುಟ್ಬಾಲಿಗ ಕೆವಿನ್ ಡಿ ಬೃಯ್ನೆ , ಪ್ರೀಮಿಯರ್ ಲೀಗ್ ಕ್ಲಬ್ ನಲ್ಲಿ ಮ್ಯಾಂಚೆಸ್ಟರ್ ಸಿಟಿ ಯುನೈಟೆಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2022ರಲ್ಲಿ ಬೃಯ್ನೆ 29 ಮಿಲಿಯನ್ ಡಾಲರ್ ಸಂಪಾದಿಸುವ ಮೂಲಕ, 2022ರಲ್ಲಿ ಗರಿಷ್ಠ ಸಂಪಾದನೆ ಮಾಡಿದ ಫುಟ್ಬಾಲಿಗರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ.

Latest Videos

click me!