ಫಿಫಾ ವಿಶ್ವಕಪ್ ರನ್ನರ್ ಅಪ್ ಅರ್ಜೆಂಟೀನಾಗೆ 317 ಕೋಟಿ, ಚಾಂಪಿಯನ್ ಸ್ಪೇನ್‌ಗೆ ಬಹುಮಾನ ಮೊತ್ತವೆಷ್ಟು?

Published : Jul 20, 2026, 08:00 AM IST

ಫಿಫಾ ವಿಶ್ವಕಪ್ 206 ಚಾಂಪಿಯನ್ ಆಗಿರುವ ಸ್ಪೇನ್ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇದರ ನಡುವೆ ಫಿಫಾ ವಿಶ್ವಕಪ್ ಬಹುಮಾನ ಮೊತ್ತದ ಚರ್ಚೆ ನಡೆಯುತ್ತಿದೆ. ರನ್ನರ್ ಅರ್ಜೆಂಟೀನಾಗೆ 317 ಕೋಟಿ ರೂ ಬಹುಮಾನವಾದರೆ ಗೆದ್ದ ಸ್ಪೇನ್ ತಂಡದ ಬಹುಮಾನ ಮೊತ್ತವೆಷ್ಟು?

PREV
15
ಫಿಫಾ ವಿಶ್ವ ಚಾಂಪಿಯನ್ ಆದ ಸ್ಪೇನ್

39 ದಿನ ನಡೆದ ಫುಟ್ಬಾಲ್‌ ವಿಶ್ವಕಪ್‌ ಟೂರ್ನಿಗೆ ತೆರೆ ಬಿದ್ದಿದೆ. ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಮಣಿಸಿದ ಸ್ಪೇನ್ ಫುಟ್ಬಾಲ್ ಚಾಂಪಿಯನ್ ಆಗಿದೆ. 16 ವರ್ಷ ಬಳಿಕ ಸ್ಪೇನ್ ಫಿಫಾ ಟ್ರೋಫಿ ಗೆದ್ದುಕೊಂಡಿದೆ. 2010ರಲ್ಲಿ ನೆದರ್ಲೆಂಡ್ ಮಣಿಸಿ ಚಾಂಪಿಯನ್ ಆಗಿದ್ದ ಸ್ಪೇನ್ ಇದೀಗ 1-0 ಅಂತರದಲ್ಲಿ ಅರ್ಜೆಂಟೀನಾ ಮಣಿಸಿ ಟ್ರೋಫಿ ಗೆದ್ದುಕೊಂಡಿದೆ.

25
8400 ಕೋಟಿ ರೂಪಾಯಿ ಬಹುಮಾನ

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್, ರನ್ನರ್ ಅಪ್, ಸೇರಿದಂತೆ ಸೆಮಿಫೈನಲ್, ಲೀಗ್ ಹಂತದಲ್ಲಿ ಪಾಲ್ಗೊಂಡ ತಂಡಗಳಿಗೆ ಬಹುಮಾನ ಮೊತ್ತ ಸಿಗಲಿದೆ. ಪಿಫಾ ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ ಬರೋಬ್ಬರಿ 8400 ಕೋಟಿ ರೂಪಾಯಿ. ಕಳೆದ ಫಿಫಾ ವಿಶ್ವಕಪ್‌ಗ ಹೋಲಿಸಿದರೆ ಭಾರಿ ಹೆಚ್ಚಳ ಮಾಡಲಾಗಿದೆ.

35
ರನ್ನರ್ ಅಪ್ ಅರ್ಜೆಂಟೀನಾ ತಂಡಕ್ಕೆ 317 ಕೋಟಿ ರೂ

ಸ್ಪೇನ್ ವಿರುದ್ದ ಮುಗ್ಗರಿಸಿದ ಅರ್ಜೆಂಟೀನಾ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಅರ್ಜೆಂಟೀನಾ ತಂಡ 317 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಅರ್ಜೆಂಟೀನಾ ಗೋಲು ಸಿಡಿಸುವಲ್ಲಿ ವಿಫಲವಾಗಿತ್ತು. ಪರಿಣಾಮ ಅರ್ಜೆಂಟೀನಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

45
ಗೆದ್ದ ಸ್ಪೇನ್ ತಂಡಕ್ಕೆ 490 ಕೋಟಿ ರೂಪಾಯಿ

ಅರ್ಜೆಂಟೀನಾ ತಂಡವನ್ನು ಮಣಿಸಿ ಚಾಂಪಿಯನ್ ಆದ ಸ್ಪೇನ್ 490 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ. ಇತರ ಯಾವುದೇ ಕ್ರೀಡೆಗೆ ಹೋಲಿಸಿದೆರ ಫಿಫಾ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಗರಿಷ್ಠ ಮೊತ್ತ ಬಹುಮಾನವಾಗಿ ನೀಡುತ್ತದೆ. ಐಪಿಎಲ್ ಟೂರ್ನಿ ಗೆದ್ದ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ ಮೊತ್ತ ನೀಡಲಾಗುತ್ತದೆ.

55
ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡದ ಬಹುಮಾನ

ಫಿಫಾ ವಿಶ್ವಕಪ್ 2026 ಟೂರ್ನಿಯಲ್ಲಿ ಮೂರನೇ ಸ್ಥಾನವನ್ನು ಇಂಗ್ಲೆಂಡ್ ಪಡೆದುಕೊಂಡಿದೆ. ಇದೀಗ ಇಂಗ್ಲೆಂಡ್ ತಂಡ 250 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡಿದೆ. ಇನ್ನು ನಾಲ್ಕನೇ ಸ್ಥಾನ ಪಡೆದ ಫ್ರಾನ್ಸ್ 230 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದುಕೊಂಡಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories