ಜ್ಯೂರಿಚ್: ಫುಟ್ಬಾಲ್ ಇತಿಹಾಸದಲ್ಲೇ ಅತಿದೊಡ್ಡ ವಿಶ್ವಕಪ್‌ಗೆ ಫಿಫಾ ಭರ್ಜರಿ ಬಹುಮಾನದ ಮೊತ್ತವನ್ನು ಘೋಷಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಈ ಫುಟ್ಬಾಲ್ ಹಬ್ಬದಲ್ಲಿ ಸಿಗುವ ಬಹುಮಾನದ ಮೊತ್ತವಾದ್ರೂ ಎಷ್ಟು ಅಂತ ನೋಡೋಣ ಬನ್ನಿ.
ಈ ಬಾರಿ 48 ತಂಡಗಳು ಕಣಕ್ಕಿಳಿಯುತ್ತಿದ್ದು, ತಂಡಗಳ ಸಂಖ್ಯೆ ಹೆಚ್ಚಾದಂತೆ ಬಹುಮಾನದ ಮೊತ್ತವನ್ನೂ ಫಿಫಾ ಹೆಚ್ಚಿಸಿದೆ. ಒಟ್ಟು ₹6,238.42 ಕೋಟಿ ರೂಪಾಯಿ ಬಹುಮಾನದ ಹಣವನ್ನು ಫಿಫಾ ನೀಡಲಿದೆ.
26
ಫಿಫಾ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಸಿಗಲಿದೆ ಬರೋಬ್ಬರಿ ₹417.50 ಕೋಟಿ
ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳ ಇತರೆ ಖರ್ಚುಗಳನ್ನು ಸೇರಿಸಿದರೆ, ಒಟ್ಟು ಮೊತ್ತ ₹7,400 ಕೋಟಿಗೂ ಹೆಚ್ಚು ಆಗಲಿದೆ. ಈ ಬಾರಿ ವಿಶ್ವ ಚಾಂಪಿಯನ್ ಆಗುವ ತಂಡಕ್ಕೆ ಬರೋಬ್ಬರಿ ₹417.50 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.
36
ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನದಲ್ಲೂ ಹೆಚ್ಚಳ
ಇದು ಕಳೆದ ಬಾರಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾಗೆ ಸಿಕ್ಕಿದ್ದಕ್ಕಿಂತ ₹76 ಕೋಟಿ ಹೆಚ್ಚು. ಇನ್ನು ಎರಡನೇ ಸ್ಥಾನ ಪಡೆಯುವ ತಂಡಕ್ಕೆ ₹288 ಕೋಟಿ, ಮೂರನೇ ಸ್ಥಾನಕ್ಕೆ ₹254.675 ಕೋಟಿ ಮತ್ತು ನಾಲ್ಕನೇ ಸ್ಥಾನಕ್ಕೆ ₹237 ಕೋಟಿ ರೂಪಾಯಿ ಸಿಗಲಿದೆ.
ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಿದ ಪ್ರತಿ ತಂಡಕ್ಕೂ ಕನಿಷ್ಠ ₹87.5 ಕೋಟಿ ಸಿಗುವುದು ಗ್ಯಾರಂಟಿ
ಕ್ವಾರ್ಟರ್ ಫೈನಲ್ ಮತ್ತು ಪ್ರೀ-ಕ್ವಾರ್ಟರ್ ಫೈನಲ್ ತಲುಪಿದ ತಂಡಗಳಿಗೂ ಭರ್ಜರಿ ಹಣ ಸಿಗಲಿದೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ಕನಿಷ್ಠ ₹87.5 ಕೋಟಿ ಸಿಗುವುದು ಗ್ಯಾರಂಟಿ. ಇದು ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳಲು ನೀಡುವ ಹಣವನ್ನು ಹೊರತುಪಡಿಸಿ.
56
ಕೆನಡಾ, ಮೆಕ್ಸಿಕೋ ಮತ್ತು ಅಮೆರಿಕದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್
ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಪಂದ್ಯಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತು ಮೂರು ದೇಶಗಳಿಂದ ಪ್ರಾಯೋಜಕತ್ವ ಸಿಕ್ಕಿದ್ದರಿಂದ ಫಿಫಾದ ಆದಾಯವೂ ಹೆಚ್ಚಾಗಿದೆ. ಇದೇ ಕಾರಣಕ್ಕೆ ತಂಡಗಳಿಗೂ ಹೆಚ್ಚಿನ ಬಹುಮಾನ ನೀಡಲು ಫಿಫಾ ನಿರ್ಧರಿಸಿದೆ.
66
ಹಾಗಾದ್ರೆ ಈ ಹಣ ಆಟಗಾರರಿಗೆ ಸಿಗುತ್ತಾ?
ಇಲ್ಲ. ಫಿಫಾ ಈ ಹಣವನ್ನು ನೇರವಾಗಿ ಆಟಗಾರರ ಖಾತೆಗೆ ಹಾಕುವುದಿಲ್ಲ. ಬದಲಿಗೆ, ಪ್ರತಿ ದೇಶದ ಫುಟ್ಬಾಲ್ ಅಸೋಸಿಯೇಷನ್‌ಗಳಿಗೆ ಈ ಹಣವನ್ನು ವರ್ಗಾಯಿಸುತ್ತದೆ. ಈ ಹಣವನ್ನು ಆಯಾ ಸಂಸ್ಥೆಗಳು ಆಟಗಾರರಿಗೆ ಬೋನಸ್, ಕೋಚಿಂಗ್ ಸಿಬ್ಬಂದಿ ಸಂಬಳ, ಪ್ರಯಾಣದ ಖರ್ಚು ಮತ್ತು ದೇಶೀಯ ಫುಟ್ಬಾಲ್ ಅಭಿವೃದ್ಧಿಗೆ ಬಳಸಿಕೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.