Diego Maradona: ಫುಟ್ಬಾಲ್ ದಿಗ್ಗಜ ಡಿಯಾಗೊ ಮರಡೋನಾ ವಿರುದ್ಧ ಅತ್ಯಾಚಾರ ಆರೋಪ

First Published | Nov 24, 2021, 4:08 PM IST

ಬ್ಯೂನಸ್‌ ಐರಿಸ್‌: ವಿಶ್ವ ಫುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾ (Diego Maradona) ನಿಧನರಾಗಿ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲೇ ಅವರ ಮೇಲೆ ಮಹಿಳೆಯೊಬ್ಬರು ಅತ್ಯಾಚಾರದ (Rape) ಗಂಭೀರ ಆರೋಪ ಮಾಡಿದ್ದಾರೆ. ತಾನು ಹದಿಹರೆಯದ ವಯಸ್ಸಿನವಳಾಗಿದ್ದಾಗಲೇ ಮರಡೋನಾ ತಮ್ಮನ್ನು ರೇಪ್ ಮಾಡಿದ್ದಾಗಿ ಕ್ಯೂಬಾದ ಮಹಿಳೆ ಎರಡು ದಶಕಗಳ ಹಿಂದಿನ ಕಹಿ ನೆನಪನ್ನು ಬಿಚ್ಚಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ತಾನು 16ನೇ ವಯಸ್ಸಿನವಳಾಗಿದ್ದಾಗ ಫುಟ್ಬಾಲ್‌ ದಂತಕತೆ ಡಿಯಾಗೊ ಮರಡೋನಾ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಕ್ಯೂಬಾದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
 

ಕಳೆದ ವಾರ ಅರ್ಜೆಂಟೀನಾ ನ್ಯಾಯಾಲಯಕ್ಕೆ ಪುರಾವೆಯೊಂದಿಗೆ ದೂರು ನೀಡಿರುವ 37 ವರ್ಷದ ಮೇವಿಸ್‌ ಆಲ್ವರೆಜ್‌, ‘ಕ್ಯೂಬಾಗೆ ಚಿಕಿತ್ಸೆಗೆ ಬಂದಾಗ ಮರಡೋನಾ ಮೊದಲ ಬಾರಿ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ

Tap to resize

ಬಳಿಕ ಚಿಕಿತ್ಸೆಗಾಗಿ ಹವಾನಾಗೆ ಬಂದಿದ್ದಾಗ ಕ್ಲಿನಿಕ್‌ನಲ್ಲಿ ಅತ್ಯಾಚಾರ ನಡೆಸಿದ್ದರು. ನನ್ನ ಬಾಯಿಯನ್ನು ಮುಚ್ಚಿ ಮರಡೋನಾ ದೌರ್ಜನ್ಯ ಎಸಗಿದ್ದರು. ಆ ಘಟನೆ ಬಗ್ಗೆ ಹೆಚ್ಚು ಯೋಚಿಸಲು ನಾನು ಬಯಸುವುದಿಲ್ಲ’ ಎಂದಿದ್ದಾರೆ.

ಘಟನೆ ಬಳಿಕ ನಾನು ನನ್ನ ಬಾಲ್ಯದ ಮುಗ್ಧತನವನ್ನು ಕಳೆದುಕೊಂಡೆ. ಅವರು ನನ್ನಿಂದ ಮುಗ್ಧತನವನ್ನು ಕಸಿದುಕೊಂಡರು. ಬಳಿಕ ಅವರ ನನ್ನ ಸಂಬಂಧ ಮುಂದುವರೆದಿತ್ತು ಎಂದು ಸಂತ್ರಸ್ಥ ಮಹಿಳೆ ದೂರಿದ್ದಾರೆ.

ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಜೊತೆ ಕ್ಯೂಬಾ ಅಧ್ಯಕ್ಷ ಫಿಡೆಲ್‌ ಕ್ಯಾಸ್ಟ್ರೋ ಸ್ನೇಹದಿಂದಿದ್ದ ಒಂದೇ ಕಾರಣಕ್ಕೆ ನನ್ನ ಮನೆಯಲ್ಲಿ ಈ ಸಂಬಂಧ ಒಪ್ಪಿದ್ದರು ಎಂದಿದ್ದಾರೆ. 

37 ವರ್ಷದ ಕ್ಯೂಬಾದ ಮಹಿಳೆ ಇದೀಗ ಬರೋಬ್ಬರಿ ಎರಡು ದಶಕಗಳ ಕಹಿ ಘಟನೆಯನ್ನು ಹೊರಹಾಕಿದ್ದಾರೆ. ಈ ಘಟನೆಯಾದ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಸಹಾ ಯೋಚಿಸಿದ್ದಾಗಿ ಸಂತ್ರಸ್ಥ ಮಹಿಳೆ ಹೇಳಿದ್ದಾರೆ. 
 

ಫುಟ್ಬಾಲ್ ಜಗತ್ತು ಕಂಡ ಅತ್ಯಂತ ಚಾಣಾಕ್ಷ ಫುಟ್ಬಾಲಿಗ ಎನಿಸಿಕೊಂಡಿದ್ದ ಡಿಯಾಗೋ ಮರಡೋನಾ 2020ರ ನವೆಂಬರ್ 25ರಂದು ಹೃದಾಯಘಾತದಿಂದ ನಿಧನರಾಗಿದ್ದಾರೆ. ಆಗ ಮರಡೋನಾಗೆ 60 ವರ್ಷ ವಯಸ್ಸಾಗಿತ್ತು.

Latest Videos

click me!