ಸ್ನೇಹಿತನ ತಂಗಿಯನ್ನೇ ಪ್ರೀತಿಸಿ, ಮದುವೆಗೂ ಮುನ್ನ 2 ಮಕ್ಕಳ ತಂದೆಯಾದ ಫುಟ್ಬಾಲ್ ದಿಗ್ಗಜ!

First Published | May 21, 2021, 6:41 PM IST

ಬೆಂಗಳೂರು: ಬಾರ್ಸಿಲೋನಾದ ಅದ್ಭುತ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ, ಜಗತ್ತಿಗ ಸರ್ವಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಫುಟ್ಬಾಲ್ ಮಾಂತ್ರಿಕ ಮೆಸ್ಸಿ ಆಟದ ಜತೆ ಜತೆಗೆ ಆತನ ಖಾಸಗಿ ಬದುಕು ಕೂಡಾ ಅಷ್ಟೇ ಕುತೂಹಲಭರಿತವಾಗಿದೆ. ಮೆಸ್ಸಿ ಯಾವ ಬಟ್ಟೆ ಹಾಕಿದ್ದಾರೆ, ಏನು ಮಾಡುತ್ತಾರೆ ಎಂದು ಅವರ ಅಪಾರ ಅಭಿಮಾನಿಗಳು ಹೆಜ್ಜೆಹೆಜ್ಜೆಗೂ ಕಣ್ಣಿಟ್ಟಿರುತ್ತಾರೆ. ಹಾಗಯೇ ಮೆಸ್ಸಿ ಕೂಡ ಅಭಿಮಾನಿಗಳಿಗೆ ನಿರಾಸೆಯಾಗದಂತೆ ತಮ್ಮ ಕೆಲವು ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇವೆಲ್ಲದರ ನಡುವೆ ಮೆಸ್ಸಿ ತಮ್ಮ ಮಗನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರೆಲ್ಲನೇ ವಿಶೇಷ ಅಂತೀರಾ? ಈ ಸ್ಟೋರಿ ನೋಡಿ ನಿಮಗೇ ತಿಳಿಯುತ್ತೆ.

ಮೆಸ್ಸಿ ಬಾರ್ಸಿಲೋನಾ ಹಾಗೂ ಅರ್ಜಿಂಟೀನಾ ತಂಡದ ಸ್ಟಾರ್ ಆಟಗಾರ:
ಸದ್ಯ ಜಗತ್ತಿನ ಅತ್ಯಂತ ಪ್ರಖ್ಯಾತ ಫುಟ್ಬಾಲ್ ಆಟಗಾರ ಯಾರು ಎಂದು ಕೇಳಿದರೆ, ತಕ್ಷಣ ಬರುವ ಉತ್ತರ ಲಿಯೋನೆಲ್ ಮೆಸ್ಸಿ ಎನ್ನುವುದು. ಮಕ್ಕಳಿಂದ ಹಿಡಿದು ಮುದುಕರವರೆಗೂ ಮೆಸ್ಸಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ಹಾಗೂ ಅರ್ಜಿಂಟೀನಾ ತಂಡದ ಪರ ಪುಟ್ಬಾಲ್‌ ಆಡುತ್ತಾರೆ.
Tap to resize

ಲಿಯೋನೆಲ್ ಮೆಸ್ಸಿ 8ನೇ ವಯಸ್ಸಿನಲ್ಲೇ ತಂಡಕ್ಕೆ ಆಯ್ಕೆಯಾಗಿದ್ದರು..!
ಲಿಯೋನೆಲ್ ಮೆಸ್ಸಿ ಜೂನ್‌ 24, 1987ರಲ್ಲಿ ಅರ್ಜಿಂಟೀನಾದ ರೋಸ್‌ರಿಯೋದಲ್ಲಿ ಜನಿಸಿದರು. ಮೆಸ್ಸಿ ಎಂತಹ ಫುಟ್ಬಾಲ ಆಟಗಾರ ಆಗಿದ್ದರೆಂದರೆ ತಮ್ಮ 8ನೇ ವಯಸ್ಸಿನಲ್ಲೇ ನ್ಯೂವೆಲ್ಸ್‌ ಓಲ್ಡ್‌ ಬಾಯ್‌ ಕ್ಲಬ್‌ಗೆ ಆಯ್ಕೆಯಾಗಿದ್ದರು. ಅಲ್ಲಿ ತನ್ನಿಬ್ಬರು ದೊಡ್ಡ ಅಣ್ಣಂದಿರ ಜತೆ ಫುಟ್ಬಾಲ್ ಅಡುತ್ತಿದ್ದರು.
2 ಡಜನ್‌ಗೂ ಹೆಚ್ಚು ಟೂರ್ನಿ ಗೆದ್ದಿರುವ ಮೆಸ್ಸಿ..!
ಲಿಯೋನೆಲ್‌ ಮೆಸ್ಸಿ ತಮ್ಮ ಪುಟ್ಬಾಲ್ ವೃತ್ತಿಜೀವನದಲ್ಲಿ ತಮ್ಮ ಕ್ಲಬ್‌ಗೆ 2 ಡಜನ್‌ಗೂ ಅಧಿಕ ಟೂರ್ನಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಲಿಯೋನೆಲ್ ಎಷ್ಟು ಉತ್ಸಾಹದಿಂದ ಫುಟ್ಬಾಲ್ ಆಡಲು ಮೈದಾನಕ್ಕಿಳಿಯುತ್ತಾರೋ, ಅಷ್ಟೇ ಉತ್ಸಾಹದಿಂದ ಜೀವನವನ್ನು ನಡೆಸುತ್ತಿದ್ದಾರೆ. ಹಾಗೆಯೇ ಕೋಟ್ಯಾಂತರ ರುಪಾಯಿ ಹಣವನ್ನು ಸಂಪಾಧಿಸಿದ್ದಾರೆ.
ಆತ್ಮೀಯ ಗೆಳೆಯನ ತಂಗಿಗೆ ಮನಸೋತ ಮೆಸ್ಸಿ..!
ಮೆಸ್ಸಿ ಲವ್‌ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆಯೇನಿಲ್ಲ. ಮೆಸ್ಸಿ ತನ್ನ ಆತ್ಮೀಯ ಗೆಳೆಯ ಹಾಗೂ ಸಹ ಆಟಗಾರ ಲೂಕಸ್‌ ಸ್ಕಗ್ಲಿಯಾನ ಕಸಿನ್ ಸಿಸ್ಟರ್ ಗೆ ಮನಸೋತಿದ್ದರು. ಮೆಸ್ಸಿ 5 ವರ್ಷದವರಿದ್ದಾಲೇ ತವರಿನಲ್ಲೇ ಆಂಟೋನಿಲ್ಲಾ ರೋಕೋಜ್‌ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಸಾಕಷ್ಟು ಗೆಳೆತನದ ಬಳಿಕ ಈ ಜೋಡಿ ದೀರ್ಘಕಾಲ ಡೇಟಿಂಗ್ ಸಹ ನಡೆಸಿದ್ದರು.
2017ರಲ್ಲಿ ವಿವಾಹ ದಾಂಪತ್ಯಕ್ಕೆ ಕಾಲಿಟ್ಟ ಲಿಯೋನೆಲ್ ಮೆಸ್ಸಿ
ಜೂನ್‌ 30, 2017ರಲ್ಲಿ ಲಿಯೋನೆಲ್ ಮೆಸ್ಸಿ ತಮ್ಮ ಬಹುಕಾಲದ ಗೆಳತಿ ಆಂಟೋನಿಲ್ಲಾ ರೋಕೋಜ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮೆಸ್ಸಿ ವಿವಾಹವು ಅರ್ಜಿಂಟೀನಾದಲ್ಲಿ ನಡೆದ ಅತ್ಯಂತ ಅದ್ಧೂರಿ ವಿವಾಹ ಎಂದು ಬಣ್ಣಿಸಲಾಗುತ್ತದೆ. ಮೆಸ್ಸಿ ವಿವಾಹದಲ್ಲಿ ಹಲವು ಸ್ಟಾರ್ ಫುಟ್ಬಾಲ್ ಆಟಗಾರರ ಜತೆ ಜತೆಗೆ ಖ್ಯಾತ ಪಾಪ್ ತಾರೆ ಶಕೀರಾ ಕೂಡಾ ಭಾಗವಹಿಸಿದ್ದರು.
ಮದುವೆಗಿಂತಲೂ ಮುಂಚೆ 2 ಮಕ್ಕಳ ತಂದೆಯಾಗಿದ್ದರು ಮೆಸ್ಸಿ
ಅಚ್ಚರಿಯಾದರೂ ಇದು ಸತ್ಯ. ಸದ್ಯ ಮೆಸ್ಸಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮೆಸ್ಸಿ-ಆಂಟೋನಿಲ್ಲಾಗೆ 2012ರಲ್ಲಿ ಥಿಯಾಗೋ, 2015ರಲ್ಲಿ ಮ್ಯಾಥ್ಯೋ ಎನ್ನುವ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. 2017ರಲ್ಲಿ ವಿವಾಹವಾದ ಬಳಿಕ ಈ ಜೋಡಿಗೆ 2018ರಲ್ಲಿ ಸಿರೋ ಎನ್ನುವ ಮೂರನೇ ಗಂಡು ಮಗು ಜನಿಸಿದೆ.
ಮೆಸ್ಸಿ ಮಗನ ಫೋಟೋ ವೈರಲ್ ಆಗಿದ್ದೇಕೆ?
ಫುಟ್ಬಾಲ್ ಲೆಜೆಂಡ್‌ ಲಿಯೋನೆಲ್ ಮೆಸ್ಸಿ ತಮ್ಮ ಮಗನ ಜತೆ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆ ಫೋಟೋದಲ್ಲಿ ಮೆಸ್ಸಿ ಮಗ 'ಬ್ಯಾಟ್‌ಮನ್‌' ಟಿ ಶರ್ಟ್‌ ತೊಟ್ಟು ಲಾಲಿಪಾಪ್ ಬಾಯಲ್ಲಿ ಇಟ್ಟುಕೊಂಡಿದ್ದ. ಇನ್ನು ಎಂದಿನಂತೆ ಮೆಸ್ಸಿ ಆ ಫೋಟೋದಲ್ಲಿ ಸಿಕ್ಕಾಪಟ್ಟೆ ಸ್ಟೈಲೀಷ್‌ ಆಗಿ ಕಾಣಿಸಿಕೊಂಡಿದ್ದರು. ಈ ಫೋಟೋ ಎಷ್ಟು ವೈರಲ್ ಆಗಿತ್ತೆಂದರೆ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಅಪ್‌ಲೋಡ್‌ ಮಾಡಿ 10 ಗಂಟೆಯಾಗುವಷ್ಟರಲ್ಲಿ 44 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದರು.

Latest Videos

click me!